ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾತ್ರಿಯಿಡೀ ಮನೆ ಮುಂದೆ ಕಾದು ಕೊಹ್ಲಿಯ ಆಟೋಗ್ರಾಫ್‌ ಪಡೆದ ಅಭಿಮಾನಿ

ಸದ್ಯ ಕೊಹ್ಲಿ ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲು ಕಾನ್ಪುರದಲ್ಲಿ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ನಿರತರಾಗಿದ್ದಾರೆ. ಇತ್ತೀಚೆಗೆ ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಪಂದ್ಯ ಆಡಿದ್ದರು. ಈ ವೇಳೆ ಕೊಹ್ಲಿಯ ಆಟ ವೀಕ್ಷಿಸಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ಹರಿದು ಬಂದಿದ್ದರು.

Virat Kohli Fans

ಚಂಡೀಗಢ: ವಿರಾಟ್ ಕೊಹ್ಲಿ(Virat Kohli) ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು, ಮತ್ತು ಅವರ ಅಭಿಮಾನಿಗಳಿಗೆ ಯಾವುದೇ ಗಡಿಯ ಮಿತಿ ಇಲ್ಲ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನದಲ್ಲಿಯೂ ವಿರಾಟ್​ ಕೊಹ್ಲಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನು ಭೇಟಿಯಾಗಲೇ ಎಷ್ಟೇ ಮಂದಿ ವರ್ಷಾನು ಗಟ್ಟಲೆ ಕಾದು ಕುಳಿತಿರುತ್ತಾರೆ. ಇಲ್ಲೊಬ್ಬ ಅಭಿಮಾನಿ ಕೊಹ್ಲಿಯನ್ನು ಭೇಟಿ ಮಾಡಿ ಆಟೋಗ್ರಾಫ್‌ ಪಡೆಯಲು ಕೊಹ್ಲಿಯ ಮನೆಯ ಮುಂದೆ ರಾತ್ರಿಯಿಡಿ ಕಾದು ಕುಳಿತು ಕೊನೆಗೂ ಯಶಸ್ಸು ಕಂಡಿದ್ದಾರೆ.

ತನ್ನ ನೆಚ್ಚಿನ ಆಟಗಾರನನ್ನು ಒಮ್ಮೆಯಾದರೂ ಭೇಟಿ ಮಾಡಬೇಕೆಂಬ ಪಣ ತೊಟ್ಟ ಅಭಿಮಾನಿ ಗುರುಗ್ರಾಮ್‌ನಲ್ಲಿರುವ ವಿರಾಟ್ ಕೊಹ್ಲಿಯ ಮನೆಯ ಹೊರಗೆ ರಾತ್ರಿಯಿಡೀ ಸುಮಾರು ಗಂಟೆಗಟ್ಟಲೆ ಕಾದು ಕುಳಿತು ಕೊನೆಗೆ ಆಟೋಗ್ರಾಫ್‌ ಪಡೆದುಕೊಂಡಿದ್ದಾರೆ. ಅಭಿಮಾನಿ ಮನೆಯ ಮುಂದೆ ಕಾಯುತ್ತಿದ್ದ ವಿಚಾರ ತಿಳಿದ ಕೊಹ್ಲಿ, ಆತನನ್ನು ಮನೆಯ ಒಳಗೆ ಕರೆಸಿಕೊಂಡು ಆತಿಥ್ಯ ಹಾಗೂ ಆಟೋಗ್ರಾಫ್‌ ನೀಡಿ ಕಳುಹಿಸಿದ್ದಾರೆ.



ಅಭಿಮಾನಿ ಕೊಹ್ಲಿಯನ್ನು ಭೇಟಿಯಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೊಹ್ಲಿಯ ಈ ನಡೆಗೆ ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಕೊಹ್ಲಿ ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲು ಕಾನ್ಪುರದಲ್ಲಿ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ನಿರತರಾಗಿದ್ದಾರೆ. ಇತ್ತೀಚೆಗೆ ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಪಂದ್ಯ ಆಡಿದ್ದರು. ಈ ವೇಳೆ ಕೊಹ್ಲಿಯ ಆಟ ವೀಕ್ಷಿಸಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ಹರಿದು ಬಂದಿದ್ದರು. ಕೆಲವರು ಮೈದಾನಕ್ಕೂ ನುಗ್ಗಿ ಕೊಹ್ಲಿಯ ಕಾಲಿಗೆ ಬಿದ್ದ ಘಟನೆಯೂ ಸಂಭವಿಸಿತ್ತು.

ಇದೇ ಮಾರ್ಚ್‌ನಲ್ಲಿ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಮತ್ತೆ ಆರ್​ಸಿಬಿ(RCB) ತಂಡದ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ಆರ್​ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಕುತೂಹಲ ಮೂಡಿಸುವಂತೆ ಮಾಡಿದೆ. ಇತ್ತೀಚೆಗೆ ಕೊಹ್ಲಿ ಸಂದರ್ಶನವೊಂದರಲ್ಲಿ ಮುಂದಿನ ಮೂರು ವರ್ಷದ ಒಳಗೆ ಆರ್‌ಸಿಬಿಗೆ ಕನಿಷ್ಠ ಒಂದು ಕಪ್‌ ಗೆಲ್ಲುವ ಯೋಜನೆ ನನ್ನದು ಎಂದು ಹೇಳಿದ್ದರು. ಈ ಹೇಳಿಕೆ ನೋಡುವಾಗ ಅವರು ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ.