#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Waqf Bill: ಸಂಸದೀಯ ಸಮಿತಿ ಸಭೆಯಲ್ಲಿ ಭಾರಿ ಗದ್ದಲ; ಓವೈಸಿ ಸೇರಿದಂತೆ 10 ಸಂಸದರು ಅಮಾನತು

ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗಲಾಟೆ ನಡೆದಿದೆ. ಈ ಹಿನ್ನಲೆಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ 10 ಸಂಸದರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ವಕ್ಫ್‌ ಮಸೂದೆ ಬಗ್ಗೆ ಸಭೆ- ಓವೈಸಿ ಸೇರಿದಂತೆ 10 ಸಂಸದರ ಅಮಾನತು

Waqf Bill

Profile Vishakha Bhat Jan 24, 2025 5:44 PM

ನವದೆಹಲಿ: 2024ರ ವಕ್ಫ್ ತಿದ್ದುಪಡಿ(Waqf Bill) ಮಸೂದೆಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (JPC) ಸಭೆಯಲ್ಲಿ ಶುಕ್ರವಾರ ಭಾರೀ ಗದ್ದಲ ಉಂಟಾಗಿದೆ. ಗದ್ದಲದ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಸೇರಿದಂತೆ 10 ಸಂಸದರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಸಂಸದರಲ್ಲಿ ಕಲ್ಯಾಣ್ ಬ್ಯಾನರ್ಜಿ, ಎಂಡಿ ಜವೈದ್, ಎ ರಾಜಾ, ಅಸಾದುದ್ದೀನ್ ಓವೈಸಿ, ನಾಸಿರ್ ಹುಸೇನ್, ಮೊಹಿಬುಲ್ಲಾ, ಎಂ. ಅಬ್ದುಲ್ಲಾ, ಅರವಿಂದ್ ಸಾವಂತ್, ನದಿಮುಲ್ ಹಕ್ ಮತ್ತು ಇಮ್ರಾನ್ ಮಸೂದ್ ಸೇರಿದ್ದಾರೆ.

ತೃಣಮೂಲ ಕಾಂಗ್ರೆಸ್ (TMC) ಹಾಗೂ ಜೆಪಿಸಿ ಸದಸ್ಯರ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಮಿತಿಯ ಅಧ್ಯಕ್ಷೆ ಜಗದಾಂಬಿಕಾ ಪಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧ್ಯಕ್ಷರು ಯಾರ ಮಾತನ್ನೂ ಕೇಳಲಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ಸಂಸದರು ತಾವು ಉಪ ಪ್ರಧಾನಿ ಮತ್ತು ಉಪ ಗೃಹ ಮಂತ್ರಿ ಎಂದು ಭಾವಿಸುತ್ತಾರೆ. ಸಮಿತಿಯ ಅಧ್ಯಕ್ಷರೂ ಕೂಡ ಅವರ ಪರ ಇದ್ದಾರೆ. ಜನವರಿ 30 ಮತ್ತು 31 ರಂದು ಸಭೆ ನಡೆಸುವಂತೆ ನಾವು ಪದೇ ಪದೇ ಮನವಿ ಮಾಡಿದ್ದೇವೆ, ಆದರೆ ನಮ್ಮ ಮನವಿಗಳನ್ನು ನಿರ್ಲಕ್ಷಿಸಲಾಗಿದೆ, ನಾವು ನಿನ್ನೆ ರಾತ್ರಿ ದೆಹಲಿಗೆ ಬಂದಿಳಿದಾಗ, ಸಭೆಯ ವಿಷಯ ಬದಲಾಯಿತು, ಆರಂಭದಲ್ಲಿ, ಸಭೆಯು ಷರತ್ತುಬದ್ಧವಾಗಿ ಮುಂದುವರಿಯುತ್ತದೆ ಎಂದು ನಮಗೆ ತಿಳಿಸಲಾಯಿತು. ಇದೀಗ ದೆಹಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ, ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ತ್ವರಿತವಾಗಿ ಅಂಗೀಕರಿಸಲು ಒತ್ತಾಯಿಸುತ್ತಿದೆ ಎಂದು ಅವರು ಹೇಳಿದ್ದಾರೆ.



ಏತನ್ಮಧ್ಯೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಗದ್ದಲ ಸೃಷ್ಟಿಸಿ ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಅವರು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು, ನಂತರ ಅದನ್ನು ಸಮಿತಿಯು ಅನುಮೋದಿಸಿತು.



ಈ ಸುದ್ದಿಯನ್ನೂ ಓದಿಯೋಗಿ ಅಲಹಾಬಾದ್‌ ಹೈಕೋರ್ಟ್‌ನ ಸಿಜೆಐನಂತೆ ವರ್ತಿಸುತ್ತಿದ್ದಾರೆ: ಓವೈಸಿ ಟೀಕೆ :

ಪ್ರತಿಪಕ್ಷಗಳ ವರ್ತನೆಯ ಬಗ್ಗೆ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಕಿಡಿಕಾರಿದ್ದಾರೆ. ರೋಧ ಪಕ್ಷದ ನಾಯಕರು ಜೆಪಿಸಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರ ವಿರುದ್ಧ ಅವಾಚ್ಯ ಭಾಷೆ ಬಳಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.