ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Toxic Movie: 'ಟಾಕ್ಸಿಕ್' ಪೋಸ್ಟ್‌ಪೋನ್‌; ಕನ್ನಡದಲ್ಲೇ ಬಹಿರಂಗ ಪತ್ರ ಬರೆದ ಪೂಜಾ ಗಾಂಧಿ

Pooja Gandhi: `ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಿಕೆಯಾಗಿರುವುದು ಯಶ್ ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ಮಾ ತ್ರ ಭರ್ಜರಿ ಪ್ಲಾನ್‌ನೊಂದಿಗೆ ಅಖಾಡಕ್ಕಿಳಿದಿದೆ. ಟಾಕ್ಸಿಕ್‌ ಸಿನಿಮಾವನ್ನು ಇಂಟರ್‌ನ್ಯಾಷನಲ್‌ ಆಡಿಯೆನ್ಸ್‌ನ ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಶೂಟ್‌ ಮಾಡಲಾಗಿದೆ. ಹಾಗಾಗಿ, ಮಧ್ಯಪ್ರಾಚ್ಯ ದೇಶಗಳಲ್ಲಿನ ಕಲೆಕ್ಷನ್‌ ಕೂಡ ಮುಖ್ಯ.

'ಟಾಕ್ಸಿಕ್' ಪೋಸ್ಟ್‌ಪೋನ್‌; ಬಹಿರಂಗ ಪತ್ರ ಬರೆದ ಪೂಜಾ ಗಾಂಧಿ

ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga Mar 4, 2026 7:28 PM

`ಟಾಕ್ಸಿಕ್' ಸಿನಿಮಾ (Toxic Cinema) ಜೂನ್ 4ಕ್ಕೆ ಮುಂದೂಡಿಕೆಯಾಗಿರುವುದು ಯಶ್ ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮಾತ್ರ ಭರ್ಜರಿ ಪ್ಲಾನ್‌ನೊಂದಿಗೆ ಅಖಾಡಕ್ಕಿಳಿದಿದೆ. ಟಾಕ್ಸಿಕ್‌ ಸಿನಿಮಾವನ್ನು ಇಂಟರ್‌ನ್ಯಾಷನಲ್‌ ಆಡಿಯೆನ್ಸ್‌ನ ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಶೂಟ್‌ ಮಾಡಲಾಗಿದೆ. ಹಾಗಾಗಿ, ಮಧ್ಯಪ್ರಾಚ್ಯ ದೇಶಗಳಲ್ಲಿನ ಕಲೆಕ್ಷನ್‌ ಕೂಡ ಮುಖ್ಯ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಈಗ ಮತ್ತೆ 3 ತಿಂಗಳು ತಡವಾಗುತ್ತಿದೆ. ಈ ಬಗ್ಗೆ ನಟಿ ಪೂಜಾ ಗಾಂಧಿ (Pooja Gandhi) ಪ್ರತಿಕ್ರಿಯಿಸಿದ್ದಾರೆ.

ಕನ್ನಡದಲ್ಲೇ ಪತ್ರ

'ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಕನ್ನಡದಲ್ಲೇ ಪತ್ರ ಬರೆದಿದ್ದಾರೆ. "ಯಶಸ್ಸಿಗಿಂತ ಸಂಕಲ್ಪವೇ ಮುಖ್ಯ" ಎನ್ನುವಾಗ, ಅದನ್ನ "ಯಶ್ " ಎಂದು ಕರೆಯಬಹುದು ಎಂದು ಪೂಜಾ ಗಾಂಧಿ ಬರೆಯಲು ಆರಂಭಿಸಿದ್ದಾರೆ.

ಇದನ್ನೂ ಓದಿ: Toxic postponed: ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ; ಯಶ್‌ ಫ್ಯಾನ್ಸ್‌ ಶಾಕ್‌! ಕಾರಣ ಇದು

"ಸ್ಯಾಂಡಲ್‌ವುಡ್‌ನ ಕನಸು ಕಾಣುತ್ತಾ ಮೈಸೂರಿನಿಂದ ಬೆಂಗಳೂರಿಗೆ ಬಂದ ಯಶ್, ಕನಸು ನನಸಾದರೂ ವಿರಮಿಸಲಿಲ್ಲ. ಅವರ ಪರಿಶ್ರಮದ ಹಿಂದೆ ಇರುವ ಅಸಾಧಾರಣ ಉತ್ಸಾಹ, ಮತ್ತು ನಿರ್ಭಯ ಸಾಹಸವೇ ಇಂದು ನಮ್ಮೆಲ್ಲರ ನೆಚ್ಚಿನ "ಯಶ್ "ಎಂಬ ಯಶೋಗಾಥೆ. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್‌ ನಾಗ್, ರವಿಚಂದ್ರನ್, ಉಪೇಂದ್ರ, ಸುದೀಪ್, ದರ್ಶನ್ ಅವರಂತಹ ಮಹಾನ್ ಕಲಾವಿದರ ಪರಂಪರೆಯನ್ನು ಮುಂದುವರಿಸುತ್ತಾ ಇಂದು ಕನ್ನಡ ಸಿನಿಮಾದ ಧ್ವಜವನ್ನು ಯಶ್ ಅಂತಾರಾಷ್ಟ್ರೀಯ ಎತ್ತರಕ್ಕೆ ಹೊತ್ತೊಯ್ಯುತ್ತಿದ್ದಾರೆ" ಎಂದು ಸೂಚಿಸಿದ್ದಾರೆ.

'ಟಾಕ್ಸಿಕ್' ಚಿತ್ರದ ಬಿಡುಗಡೆ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. "ಪರವಾಗಿಲ್ಲ ..... ಈ ನಿರೀಕ್ಷೆಯೇ ಅದನ್ನು ಇನ್ನಷ್ಟು ಮಹತ್ತರವಾಗಿಸುತ್ತದೆ. ಅಲ್ಲಿಯ ವರೆಗೆ ಕಾತುರದಿಂದ ಕಾಯುತ್ತೇವೆ" ಎಂದು ಪೂಜಾ ಗಾಂಧಿ ಬರೆದುಕೊಂಡಿದ್ದಾರೆ.

ಜೂನ್ 4, 2026 ರಂದು ಬಿಡುಗಡೆ

ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಯಶ್ ಬರೆದು ಗೀತು ಮೋಹನ್‌ದಾಸ್ ನಿರ್ದೇಶಿಸಿದ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಡಬ್ ಮಾಡಿದ ಆವೃತ್ತಿಗಳೊಂದಿಗೆ ಇದೆ.

ಇದನ್ನೂ ಓದಿ: Puttakkana Makkalu Serial: ಪುಟ್ಟಕ್ಕನ ಮಕ್ಕಳು 'ಅಂತಿಮ ಅಧ್ಯಾಯ'; ಕಂಠಿ- ಸ್ನೇಹಾಗೆ ಇದೇನಾಯ್ತು?

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಜೂನ್ 4, 2026 ರಂದು ಬಿಡುಗಡೆಯಾಗಲಿದೆ.