ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ನಂಬಿದ ಗುರುವೇ ನೆತ್ತರು ಹೀರಿದರೆ?

ಅಕ್ಷರ ಹೇಳಿ ಕೊಡುವ ಗುರುವಾಗಿರಲಿ, ಆಟದ ಕೌಶಲ ಹೇಳಿಕೊಡುವ ತರಬೇತುದಾರನಾಗಿರಲಿ, ಕಲಿಕೆಗೆ ಬಂದಿರುವವರ ಪಾಲಿಗೆ ಆತ ದೇವರೇ. ಇದು ಬಹುತೇಕರ ಗ್ರಹಿಕೆ ಯೂ ಹೌದು. ಆದರೆ, ಮೇಲೆ ಉಲ್ಲೇಖಿಸಿರುವ ಪ್ರಕರಣದಲ್ಲಿ ಕಾಣವುದು ಗುರುವೆಂಬ ಗಿಳಿಯಲ್ಲ, ಅದು ಹಸಿಮಾಂಸ ಕ್ಕೆ ಹಪಹಪಿಸುವ ರಣಹದ್ದು.

ನಂಬಿದ ಗುರುವೇ ನೆತ್ತರು ಹೀರಿದರೆ?

Profile Ashok Nayak Apr 7, 2025 9:19 AM

ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಬ್ಯಾಡ್ಮಿಂಟನ್ ತರಬೇತಿಗೆ ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೆ, ಆಕೆಯ ನಗ್ನಫೋಟೋ ಮತ್ತು ವಿಡಿಯೋ ಗಳನ್ನು ಚಿತ್ರೀಕರಿಸಿಕೊಂಡಿದ್ದ ತರಬೇತುದಾರನೊಬ್ಬನನ್ನು ಬೆಂಗಳೂರಿನ ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿ, ಆತನ ವಿರುದ್ಧ ಪೋಕ್ಸೊ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಸದರಿ ತರಬೇತಿ ಕೇಂದ್ರದಲ್ಲಿ ಮತ್ತಷ್ಟು ಬಾಲಕಿ ಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘೋರ ಸಂಗತಿಯೂ ಬಯಲಾಗಿದೆ. ‘ಮಾತೃ ದೇವೋಭವ, ಪಿತೃ ದೇವೋಭವ’ ಎಂದಿರುವ ನಮ್ಮ ಸಂಸ್ಕೃತಿಯು ಈ ಆಶಯವನ್ನು ಅಷ್ಟಕ್ಕೇ ನಿಲ್ಲಿಸದೆ ‘ಆಚಾರ್ಯದೇವೋಭವ, ಅತಿಥಿ ದೇವೋಭವ’ ಎಂದೂ ಹೇಳಿದೆ.

ಅಂದರೆ, ತಂದೆ-ತಾಯಿ ಯರನ್ನು ಮಾತ್ರವಲ್ಲದೆ ವಿದ್ಯೆ ಹೇಳಿಕೊಡುವ ಗುರುಗಳನ್ನು ಹಾಗೂ ಮನೆಗೆ ಬರುವ ಅತಿಥಿಗಳನ್ನೂ ದೇವರ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವ ಸಂಸ್ಕೃತಿ ಮತ್ತು ಪರಂಪರೆ ನಮ್ಮದು.

ಇದನ್ನೂ ಓದಿ: Vishwavani Editorial: ಬರೆ ಬೀಳೋದು ಜನರಿಗೇ ಅಲ್ಲವೇ?

ಅಲ್ಲಿಗೆ, ಅಕ್ಷರ ಹೇಳಿಕೊಡುವ ಗುರುವಾಗಿರಲಿ, ಆಟದ ಕೌಶಲ ಹೇಳಿಕೊಡುವ ತರಬೇತು ದಾರನಾಗಿರಲಿ, ಕಲಿಕೆಗೆ ಬಂದಿರುವವರ ಪಾಲಿಗೆ ಆತ ದೇವರೇ. ಇದು ಬಹುತೇಕರ ಗ್ರಹಿಕೆ ಯೂ ಹೌದು. ಆದರೆ, ಮೇಲೆ ಉಲ್ಲೇಖಿಸಿರುವ ಪ್ರಕರಣದಲ್ಲಿ ಕಾಣವುದು ಗುರುವೆಂಬ ಗಿಳಿ ಯಲ್ಲ, ಅದು ಹಸಿಮಾಂಸಕ್ಕೆ ಹಪಹಪಿಸುವ ರಣಹದ್ದು.

ಇಂಥ ದುರ್ಮಾರ್ಗಿಗಳು ಆಯಕಟ್ಟಿನ ಜಾಗಗಳನ್ನು ಅಮರಿಕೊಂಡಿದ್ದರೆ, ಪೋಷಕರು ಅದಿನ್ಯಾವ ನಂಬಿಕೆಯಿಟ್ಟು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಇವರಲ್ಲಿಗೆ ಕಲಿಕೆಗೋ ತರಬೇತಿಗೋ ಕಳಿಸಿಯಾರು? ಶಾಲಾ ಕಾಲೇಜುಗಳಲ್ಲಿ ನೀತಿಪಾಠಗಳ ಬೋಧನೆಗೆ ಒತ್ತು ನೀಡದಿರುವುದೇ ಇಂಥ ಅಪಸವ್ಯಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆಯೇ? ಇಂಥ ವಿಕೃತಿಗಳ ದಮನಕ್ಕೆ ಇನ್ನಾವುದಾದರೂ ಮಾರ್ಗೋಪಾಯವಿದೆಯೇ? ಎಂಬೆಲ್ಲ ಪ್ರಶ್ನೆಗಳನ್ನು ಸಂಬಂಧಪಟ್ಟವರು ಕೇಳಿಕೊಳ್ಳಬೇಕಾದ ಕಾಲವೀಗ ಸನ್ನಿಹಿತವಾಗಿದೆ.

ಕಾರಣ, ಬೆಳಕಿಗೇ ಬರದ ಇಂಥ ಇನ್ನೆಷ್ಟು ಪ್ರಕರಣಗಳಿವೆಯೋ ಏನೋ? ಅವಕ್ಕೆ ಬಲಿ ಯಾದ ಕಂದಮ್ಮಗಳು ಅದೆಷ್ಟು ಮೌನವಾಗಿ ರೋದಿಸುತ್ತಿವೆಯೋ ಏನೋ? ದೆಹಲಿಯ ನಿರ್ಭಯಾ ಪ್ರಕರಣದ ತರುವಾಯ ದೇಶವ್ಯಾಪಿ ವ್ಯಕ್ತವಾದ ಪ್ರತಿಭಟನೆಯನ್ನು ಕಂಡ ನಂತರವೂ ಇಂಥ ದುರುಳರ ಅಟ್ಟಹಾಸ ನಿಂತಿಲ್ಲ ಎಂದರೆ ತಪ್ಪಾಗುತ್ತಿರುವುದೆಲ್ಲಿ...?