Mohammed Shami: ದೇಶಕ್ಕಾಗಿ ರಂಜಾನ್ ಉಪವಾಸ ಕೈಬಿಟ್ಟು ಪಂದ್ಯ ಆಡಿದ ಮೊಹಮ್ಮದ್ ಶಮಿ
Mohammed Shami: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಭಾರತ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟು 24 ವಿಕೆಟ್ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ಸದ್ಯ ಶಮಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.

-

ದುಬೈ: ಭಾರತ ತಂಡದ ಗೆಲುವಿಗಾಗಿ ವೇಗಿ ಮೊಹಮ್ಮದ್ ಶಮಿ(Mohammed Shami) ರಂಜಾನ್ ಉಪವಾಸವನ್ನೂ ಕೈ ಬಿಟ್ಟು ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಆಡಿದ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತಂಡದ ಗೆಲುವಿಗಾಗಿ ನೀವು ಈ, ಕಠಿಣ ನಿರ್ಧಾರ ಕೈಗೊಂಡಿದ್ದು ನಿಮ್ಮ ಒಳ್ಳೆತನವನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾದ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ರಂಜಾನ್ ಉಪವಾಸದ ಸಂದರ್ಭದಲ್ಲಿ ನೀರು ಕೂಡು ಕುಡಿಯುಂತಿಲ್ಲ. ಆದರೆ ಆಸೀಸ್ ವಿರುದ್ಧದ ಪಂದ್ಯದ ವೇಳೆ ಮೊಹಮ್ಮದ್ ಶಮಿ ಮೈದಾನದಲ್ಲಿ ಜ್ಯೂಸ್ ಸೇವನೆ ಮಾಡುವುದು ಕಣ್ಣಿಗೆ ಬಿದ್ದಿದೆ. ಒಬ್ಬ ಕ್ರೀಡಾಪಟುವಾಗಿ ಆಡುವಾಗ ನೀರೂ ಕೂಡಾ ಸೇವಿಸದೇ ಉಪವಾಸವಿದ್ದು ಆಡುವುದು ಕಷ್ಟ. ಆದರೆ ಶಮಿ ಆಡುವುದು ತಂಡಕ್ಕೆ ಅತೀ ಅಗತ್ಯ. ಈ ಕಾರಣಕ್ಕೆ ರಂಜಾನ್ ಉಪವಾಸವನ್ನೂ ಬದಿಗಿಟ್ಟು ದೇಶಕ್ಕಾಗಿ ಆಡಿದ್ದಾರೆ. ಶಮಿ ಆಸೀಸ್ ವಿರುದ್ಧ 3 ವಿಕೆಟ್ ಕಿತ್ತು ಮಿಂಚಿದ್ದರು. ಅದರಲ್ಲೂ ಅಪಾಯಕಾರಿಯಾಗಿದ್ದ ಸ್ಟೀವನ್ ಸ್ಮಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ತಂಡದ ಗೆಲುವಿನಲ್ಲಿ ಇದು ಕೂಡ ಒಂದು ಪ್ರಮುಖ ಅಂಶವಾಗಿದೆ.
This #INDvsAUS match perfectly displays the arrogance and dominance of the BJP over minorities.
— Dr Nimo Yadav 2.0 (@niiravmodi) March 4, 2025
Forcing Shami to play during the holy month of Ramzan, in a Muslim country (UAE), under extreme heat while he is fasting, is a violation of human rights especially when we have… pic.twitter.com/FqCtrZbWVi
ಶಮಿ ಈ ಹಿಂದೆಯೂ ದೇಶ ಪ್ರೇಮವನ್ನು ಮೆರೆದಿದ್ದಾರೆ. ಪಾಕಿಸ್ತಾನ ಹಲವು ಬಾರಿ ಭಾರತ ವಿರುದ್ಧ ಸುಳ್ಳು ಆರೋಪ ಮಾಡಿದಾಗ ಶಮಿ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶಮಿ ಮಗಳು ನವರಾತ್ರಿಯಂದು ಪೂಜೆ ಕೂಡ ಮಾಡಿ ಮಾಡಿದ್ದು ಈ ಹಿಂದೆ ಭಾರೀ ಸುದ್ದಿಯಾಗಿತ್ತು. ಶಮಿ ವಿರುದ್ಧ ಕೆಲ ಮೂಲಭೂತವಾದಿಗಳು ಟೀಕೆಗಳನ್ನು ಮಾಡಿದ್ದರು. ಇದಕ್ಕೆ ಶಮಿ ಮಕ್ಕಳಲ್ಲಿ ದೇವರನ್ನು ಕಾಣಬೇಕು ಹೊರತು ಧರ್ಮವನ್ನಲ್ಲ ಎಂದು ಹೇಳುವ ಮೂಲಕ ಖಡಕ್ ತಿರುಗೇಟು ನೀಡಿದ್ದರು.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಭಾರತ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟು 24 ವಿಕೆಟ್ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ಸದ್ಯ ಶಮಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.