Winter Boots Fashion: ಚಳಿಗಾಲದ ಫ್ಯಾಷನ್‌ಗೆ ಜತೆಯಾದ ಬೂಟ್ಸ್
Winter Boots Fashion: ಚಳಿಗಾಲದ ಸ್ಟೈಲಿಂಗ್‌ನಲ್ಲಿ ಬೂಟ್ಸ್ ಫ್ಯಾಷನ್ ಸೇರಿಕೊಂಡಿದೆ. ಟ್ರೆಂಡಿ ಬೂಟ್ಸ್‌ಗಳನ್ನು ಹೇಗೆಲ್ಲಾ ಧರಿಸಬಹುದು? ಯಾವುದೆಲ್ಲಾ ಚಾಲ್ತಿಯಲ್ಲಿದೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಬೂಟ್ಸ್ ಫ್ಯಾಷನ್ ಮರಳಿದೆ. ಹೌದು, ವೆಸ್ಟರ್ನ್ ಹಾಗೂ ಕ್ಯಾಶುವಲ್ ಔಟ್‌ಫಿಟ್‌ಗಳೊಂದಿಗೆ ಧರಿಸಬಹುದಾದ ಈ ವೈವಿಧ್ಯಮಯ ಟ್ರೆಂಡಿ ಬೂಟ್ಸ್‌ಗಳು ಈ ಸೀಸನ್ ಸ್ಟೈಲಿಶ್ ಲುಕ್‌ಗೆ ಜತೆಯಾಗಿವೆ.
ಲೇಡೀಸ್ ಬೂಟ್ಸ್ ಫ್ಯಾಷನ್
ಬ್ಲಾಕ್, ಗ್ರೇ, ಬ್ರೌನ್ ಹೀಲ್ಡ್ ಬೂಟ್ಸ್. ನೀ ಲೆಂಥ್, ಆಂಕಲ್ ಲೆಂಥ್, ಕೌ ಬಾಯ್ ಬೂಟ್ಸ್, ಕಾಂಬಾಟ್, ಪಾರ್ಟಿಗೆ ಸೂಟ್ ಆಗುವ ಮೈಕ್ರೋ ಹೀಲ್ಸ್ ಬೂಟ್ಸ್, ಡೆನಿಮ್ ಬೂಟ್ಸ್, ಫ್ಲಾಟ್ ಫಾರ್ಮ್ ಬೂಟ್ಸ್, ಚಂಕಿ ಬೂಟ್ಸ್ ಈ ಸೀಸನ್‌ನಲ್ಲಿ ವೆಸ್ಟರ್ನ್ ಲೇಯರ್ಡ್ ಲುಕ್‌ಗೆ ಹಾಗೂ ಕ್ಯಾಶುವಲ್ ಔಟ್‌ಫಿಟ್‌ಗೆ ಮ್ಯಾಚ್ ಆಗುವ ರೀತಿಯಲ್ಲಿ ಎಂಟ್ರಿ ನೀಡಿವೆ.
ರೆಟ್ರೋ ಫ್ಯಾಷನ್‌ಗೆ ಸಾಥ್
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರೆಟ್ರೊ ಫ್ಯಾಷನ್‌ನ ಲೇಡೀಸ್ ಹೈ ಫ್ಯಾಷನ್‌ಗೆ ಎಂಟ್ರಿ ನೀಡಿದ್ದ ಬೂಟ್ ಫ್ಯಾಷನ್, 1960 ರ ನಂತರ ಗಡಿ ದಾಟಿ ಸಾಮಾನ್ಯ ಮಹಿಳೆಯರ ಫ್ಯಾಷನ್‌ಗೂ ಎಂಟ್ರಿ ನೀಡಿತು. 1970 ರ ನಂತರ ವಿಂಟರ್ ಫ್ಯಾಷನ್‌ನಲ್ಲಿ ಸೇರಿಕೊಂಡು, ಜನರೇಷನ್ ಚಾಯ್ಸ್‌ಗೆ ತಕ್ಕಂತೆ ಬದಲಾಗುತ್ತಾ ಜತೆಯಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ಸೆಲೆಬ್ರೆಟಿಗಳ ಬೂಟ್ಸ್ ಫ್ಯಾಷನ್
ಸೆಲೆಬ್ರೆಟಿಗಳು ಬೂಟ್ಸ್ ಪ್ರೇಮಿಗಳೆಂದರೂ ಅತಿಶಯೋಕ್ತಿಯಾಗದು. ಯಾಕೆಂದರೆ, ಔಟಿಂಗ್ ಹಾಗೂ ಏರ್‌ಪೋರ್ಟ್ ಲುಕ್‌ನಲ್ಲಿ ಅವರು ಬೂಟ್ಸ್ ಧರಿಸದೇ ಕಾಣಿಸಿಕೊಳ್ಳುವುದು ಅಪರೂಪ ಎನ್ನುವ ಸ್ಟೈಲಿಸ್ಟ್ ಜಾನ್ ಅವರ ಪ್ರಕಾರ, ಬೂಟ್ಸ್ ಧರಿಸುವವರ ಲುಕ್ ಕಂಪ್ಲೀಟ್ ಹೈ ಫ್ಯಾಷನ್‌ಗೆ ಸೇರುತ್ತದೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Highwaist Pant Fashion 2025: ವಿಂಟರ್‌ಗೆ ಮರಳಿದ ಹೈವೇಸ್ಟ್ ಪ್ಯಾಂಟ್ ಫ್ಯಾಷನ್
ಬೂಟ್ಸ್ ಫ್ಯಾಷನ್ ಸೀಕ್ರೆಟ್
* ಟ್ರೆಡಿಷನಲ್ ಡ್ರೆಸ್‌ಗೆ ಬೂಟ್ಸ್ ಧರಿಸುವುದು ಫ್ಯಾಷನ್‌ನಲ್ಲಿಲ್ಲ
* ವೆಸ್ಟರ್ನ್ ಔಟ್‌ಫಿಟ್‌ಗೆ ಬೆಸ್ಟ್ ಚಾಯ್ಸ್.
* ಬಿಂದಾಸ್ ಲುಕ್ ಬೇಕಿದ್ದಲ್ಲಿ ಚಂಕಿ ಬೂಟ್ಸ್ ಧರಿಸಬಹುದು.
* ಮಂಡಿವರೆಗಿನ ನೀ ಲೆಂತ್ ಫ್ಲಾಟ್ ಬೂಟ್ಸ್ ಟ್ರಾವೆಲ್ ಟೈಮ್‌ಗೆ ಬೆಸ್ಟ್.
* ಫೂಟ್ ಸಾಕ್ಸ್ ಜತೆಗೆ ಧರಿಸಿ.
* ಮಿಡಿ, ಫ್ರಾಕ್ ಹಾಗೂ ಡ್ರೆಸ್‌ಗಳೊಂದಿಗೂ ಧರಿಸಬಹುದು.
* ಬ್ಲೇಜರ್, ಜಾಕೆಟ್‌ನೊಂದಿಗೆ ಬ್ಲಾಕ್ ಬೂಟ್ಸ್ ಚೆನ್ನಾಗಿ ಮ್ಯಾಚ್ ಆಗುತ್ತದೆ.
* ಇಡೀ ದಿನ ಬೂಟ್ಸ್ ಹಾಕುವುದರಿಂದ ಪಾದಗಳಿಗೆ ಕಿರಿಕಿರಿಯಾಗಬಹುದು. ಮಧ್ಯೆ ತೆಗೆದು ಹಾಕಿ ರಿಲಾಕ್ಸ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)