#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gwalior Shocker: ಮಹಿಳೆ ಮತ್ತು ಮಗಳನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ದುಷ್ಕರ್ಮಿಗಳು!

ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ದುಷ್ಕರ್ಮಿಗಳು ಮಹಿಳೆ ಮತ್ತು ಅವರ ಮಗಳನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದಾಬ್ರಾದ ಆಭರಣ ಮಳಿಗೆಯ ಮಾಲೀಕರೊಬ್ಬರ ಸಹಾಯಕರು ಮಹಿಳೆ ಮತ್ತು ಅವರ ಮಗಳನ್ನು ಥಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಆಭರಣ ಮಳಿಗೆ ಮಾಲೀಕನ ಪತ್ನಿ ಮೇಲೆ ಮಹಿಳೆ ಕಲ್ಲು ತೂರಾಟ ನಡೆಸಿದ್ದಾಳೆ. ಪ್ರತೀಕಾರವಾಗಿ ಇಬ್ಬರಿಗೂ ಥಳಿಸಿದ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೊವನ್ನು ಗಮನಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಿಳೆ ಮತ್ತು ಆಕೆಯ ಮಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪಾಪಿಗಳು!

Gwalior Shocker

Profile Deekshith Nair Jan 22, 2025 8:00 PM

ಭೋಪಾಲ್: ಮಧ್ಯಪ್ರದೇಶದ(Madhya Pradesh) ಗ್ವಾಲಿಯರ್ ಜಿಲ್ಲೆಯಲ್ಲಿ ಇಂದು(ಜ.22) ಮಧ್ಯಾಹ್ನ ಹತ್ತಕ್ಕೂ ಹೆಚ್ಚು ದುಷ್ಕರ್ಮಿಗಳು ಮಹಿಳೆ ಮತ್ತು ಅವರ ಮಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ದಾಬ್ರಾದ ಆಭರಣ ಮಳಿಗೆಯ ಮಾಲೀಕರೊಬ್ಬರ ಸಹಾಯಕರು ಮಹಿಳೆ ಮತ್ತು ಅವರ ಮಗಳನ್ನು ಥಳಿಸಿದ್ದಾರೆ(Gwalior Shocker) ಎಂದು ತಿಳಿದು ಬಂದಿದೆ.

ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಆಭರಣ ಮಳಿಗೆ ಮಾಲೀಕನ ಪತ್ನಿ ಮೇಲೆ ಮಹಿಳೆ ಕಲ್ಲು ತೂರಾಟ ನಡೆಸಿದ ಕಾರಣಕ್ಕಾಗಿ ಕೋಪಗೊಂಡು ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಹಿಳೆ ಮತ್ತು ಮಗಳನ್ನು ಕಂಬಕ್ಕೆ ಕಟ್ಟಿ ಅಮಾನೀಯವಾಗಿ ಥಳಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರು ವಿಡಿಯೊವನ್ನು ಗಮನದಲ್ಲಿಟ್ಟುಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.



ಘಟನೆಯ ವಿವರ

ಆಭರಣ ವ್ಯಾಪಾರಿ ವಿಜಯ್ ಅಗರವಾಲ್ ಅವರ ಪತ್ನಿ ಕುಕಿ ಅಗರವಾಲ್ ಅವರು ಪೂಜೆಗಾಗಿ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ಕುಕಿ ಮತ್ತು ಲೀಲಾ ಶರ್ಮಾ ನಡುವೆ ವಾಗ್ವಾದವಾಗಿದೆ. ದೇವಸ್ಥಾನದ ಎದುರಿನ ಮನೆಯ ನಿವಾಸಿ ಲೀಲಾ ಶರ್ಮಾ ಅವರ ಪುತ್ರಿಯರಾದ ಗೌರಿ ಮತ್ತು ನೇಹಾ ಕುಕಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅವರಿಗೆ ಗಾಯಗಳಾಗಿದ್ದು, ಪೊಲೀಸರಿಗೆ ದೂರು ದಾಖಲಿಸಲಾಗಿತ್ತು.

ಪ್ರತೀಕಾರವಾಗಿ ವಿಜಯ್ ಅಗರವಾಲ್ ಅವರ ಕೆಲವು ಸಹಾಯಕರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಏಕಾಏಕಿ ಲೀಲಾ ಶರ್ಮಾ ಅವರ ಮನೆಗೆ ನುಗ್ಗಿ ರಸ್ತೆಗೆ ಎಳೆದು ತಂದು ಲೀಲಾ ಅವರನ್ನು ನೆಲಕ್ಕೆ ಮತ್ತು ಅವರ ಮಗಳನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಇಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯ ವಿಡಿಯೊಗಳು ವೈರಲ್ ಆಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಅಧಿಕಾರಿಗಳು ಕೂಡಲೇ ಮಹಿಳೆ ಮತ್ತು ಆಕೆಯ ಮಗಳನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Sharon Raj Murder Case: ಕೇರಳದ ಶರೋನ್‌ ರಾಜ್‌ ಕೊಲೆ ಪ್ರಕರಣ; ಪ್ರೇಯಸಿ ಗ್ರೀಷ್ಮಾಗೆ ಗಲ್ಲುಶಿಕ್ಷೆ!

ಲೀಲಾ ಶರ್ಮಾ ಅವರ ಪುತ್ರ ಕೃಷ್ಣ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿಜಯ್ ಅಗರವಾಲ್, ಅವರ ಪತ್ನಿ ಮತ್ತು ಇತರ 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ ನಾಲ್ವರು ಸಹಾಯಕರನ್ನು ಬಂಧಿಸಲಾಗಿದೆ.

ಎರಡೂ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಅಧಿಕಾರಿ ಯಶವಂತ್ ಗೋಯಲ್ ಖಚಿತಪಡಿಸಿದ್ದಾರೆ.