ಇಂಡಿ: ಮನುಷ್ಯನ ಹುಟ್ಟು ಸಹಜ ಸಾವು ಖಚಿತ ಇರುವ ದಿನಗಳಲ್ಲಿ ಒಳ್ಳೆಯ ಕೆಲಸ ಕಾರ್ಯ ಗಳು ಮಾಡಬೇಕು. ಮಾತುಗಳು ಉಳಿಯುವುದಿಲ್ಲ ಕೆಲಸಗಳು ಸ್ಥಿರವಾಗಿರುತ್ತವೆ ನಾನು ನನ್ನ 40 ವರ್ಷದ ರಾಜಕೀಯ ಅನುಭವ ಇಂಡಿ ಮತಕ್ಷೇತ್ರಕ್ಕೆ ಧಾರೆ ಏರೆದಿರುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ (MLA Yeshwantraya Gowda Patil) ಹೇಳಿದರು.
ತಾಲೂಕಿನ ಕೊಟ್ನಾಳ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋಟ್ನಾಳ ಗ್ರಾಮ ಎಂದಾಕ್ಷಣ ದಿ, ಕಾಂತು ಗೊಡೇಕರ್ ನೆನಪು ಸದಾ ಸ್ಮರಣಿಯ ನನ್ನ ರಾಜಕೀಯ ಜೀವನದಲ್ಲಿ ಸದಾ ನನ್ನೋಂದಿಗೆ ಕಷ್ಟದ ದಿನಗಳಲ್ಲಿ ಸಹಾಯ ಸಹಕಾರ ಮಾಡುವ ಮೂಲಕ ಗಟ್ಟಿತನದ ಗುಣ ಅವರಲ್ಲಿತ್ತು. ಇಡೀ ಸಮುದಾಯ ಬೇರೆ ಕಡೆ ವಾಲಿದರೂ ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ನನ್ನ ಮೇಲಿನ ಪ್ರೀತಿ ಜೀವನದ ಕೊನೆ ಉಸಿರು ಇರುವರೆಗೂ ನನ್ನ ಕೈಬಿಡಲಿಲ್ಲ. ಇಂತಹ ಒಳ್ಳೆಯ ಮುಖಂಡನನ್ನು ಕಳೆದುಕೊಂಡಿರುವುದು ದುರಾದೃಷ್ಠಕರ ಸಂಗತಿ ಭಗವಂತ ಅವರ ಕುಟುಂಭಕ್ಕೆ ದುಖ ಭರಿಸುವ ಶಕ್ತಿ ನೀಡಲಿ.
ಕೊಟ್ನಾಳ ಗ್ರಾಮದಿಂದ ಅಥರ್ಗಾ ಸಾರ್ವಜನಿಕರು ಸಂಚರಿಸಬೇಕಾದರೆ ತೊಂದರೆ ಇತ್ತು. ನಾನು ಆಯ್ಕೆಯಾದ ಪ್ರಥಮ ವರ್ಷ ಬ್ರೀಜ್ ಕಟ್ಟಿಸಿ ಅನುಕೂಲ ಮಾಡಿರುವೆ. ಭಾರತ ಭಾವ್ಯಕತೆಯ ಬೀಡು ಅನೇಕ ಹಬ್ಬ ಹರಿದಿನಗಳನ್ನು ಆಚರಣೆ ಮಾಡುವ ಮೂಲಕ ಭಾರತದ ಸಂಸ್ಕೃತಿ ಆಚಾರ ವಿಚಾರ ಪ್ರತಿಬಿಂಬಿಸುತ್ತಿರುವ ಕಾರ್ಯ ಶ್ಲಾಘನೀಯ. ಈ ಭಾಗ ನೀರಾವರಿ ವಂಚಿತವಾಗಿತ್ತು ಕೆರೆಗಳನ್ನು ತುಂಬಿಸಿ ನೀರಿನ ಸಮಸ್ಯ ಅಲ್ಪಮಟ್ಟಿಗೆ ನೀವಾರಣೆಯಾಗಿದೆ. ಬರುವ ದಿನಮಾನ ಗಳಲ್ಲಿ ಸಮಗ್ರ ನೀರಾವರಿಯಾಗಿ ಈ ಭಾಗದ ರೈತರ ಬಾಳು ಬಂಗಾರವಾಗಲಿದೆ . ಗ್ರಾಮಸ್ಥರು ನೀಡಿರುವ ಮನವಿ ನೋಡಿದ್ದೇನೆ. ಸರಕಾರದ ಅನುಧಾನ ಅನುಪಾತದಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಬಳ್ಳೋಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮುಸಾಹುಕಾರ ಮಾತನಾಡಿ ಶಾಸಕ ಯಶವಂತ ರಾಯಗೌಡ ಪಾಟೀಲ ಸರ್ವಜನಾಂಗದ ನಾಯಕ ಇಡೀ ಮತಕ್ಷೇತ್ರ ಸರ್ವವಿಧದಲ್ಲಿ ಸುಧಾರಣೆ ಮಾಡಿದ್ದಾರೆ. ಇಂತಹ ಶಾಸಕರನ್ನು ಪಡೇದಿರುವ ನಾವು ಧನ್ಯರು ಎಂದರು.
ರಾಚಯ್ಯಾ ಹಿರೇಮಠ ದಿವ್ಯ ಸಾನಿಧ್ಯ ವಹಿಸಿದರು. ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೇಪ್ಪ ಚನಗೊಂಡ, ಬಸವರಾಜ ದೇಶಮುಖ, ಮುತ್ತಪ್ಪ ಗೊಡೇಕಾರ, ಶಿಕ್ಷಕ ಶಂಕ್ರೇಪ್ಪ ಕಮತಗಿ ಆಕಾಶ ಗೊಡೇಕಾರ ವೇದಿಕೆಯಲ್ಲಿದ್ದರು.
ಅಪ್ಪಶ್ಯಾ ಪೂಜಾರಿ, ಪುಡಲೀಕ ಹಲಸಂಗಿ, ಅರ್ಜುನ ನಾವಿ, ಮಲ್ಲಪ್ಪ ಕುಮಟಗಿ,ಈಶ್ವರ ಪೂಜಾರಿ, ಬಾಬು ಕುಮಟಗಿ, ಸೋನಿಂಗ ನಡಹಟ್ಟಿ ,ಮಲಕಾರಿ ಗೊಡೇಕಾರ, ಅರ್ಜುನ ಗೊಡೇಕಾರ ,ವಿಠೋಬಾ ಗೊಡೇಕಾರ ಬಾಸ್ಕರ ಹೊಸಮನಿ, ಮುತ್ತು ಕಾಂಬಳೆ, ಹುಚ್ಚಪ್ಪ ಕಾಂಬಳೆ, ಪರಶುರಾಮ ಹೊಸಮನಿ ಸೇರಿದಂತೆ ಗ್ರಾಮದ ಮುಖಂಡರು ಹಿರಿಯರಿದ್ದರು.