MLA Yeshwathraya Gowda Patil: ಗ್ರಾಮೀಣ ಭಾಗ ಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ತೆರೆದು ಕೃಷಿ ಪರೀಕರಣಗಳನ್ನು ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ
MLA Yeshwathraya Gowda Patil: ಗ್ರಾಮೀಣ ಭಾಗ ಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ತೆರೆದು ಕೃಷಿ ಪರೀಕರಣಗಳನ್ನು ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ
Ashok Nayak
December 23, 2024
ಇಂಡಿ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಶೇ.90ರಷ್ಟು ಪ್ರತಿಶತ ಕೃಷಿಯ ಜೀವನಧಾರವಾಗಿದೆ. ಕೃಷಿಗೆ ಬೇಕಾದ ವಸ್ತುಗಳು ನಗರ ಪ್ರದೇಶಗಳಿಗೆ ರೈತರು ಅವಲಂಬನೆಯಾಗಬೇಕಾದ ಪ್ರಸಂಗ ಇತ್ತು. ಇಂದು ಗ್ರಾಮೀಣ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ತೆರೆದು ಕೃಷಿ ಪರೀಕರಣಗಳನ್ನು ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಎನ್.ಎಚ್ 52 ಸೋಲಾಪೂರ ರೋಡ ಹೋರ್ತಿ ಹತ್ತಿರ ಜಲಧಾರೆ ಅಗ್ರೀಟೇಕ್ ಸ್ಪಿಂಕಲರ್, ಡ್ರೀಪ್, ಪಿ.ವಿ.ಸಿ, ಎಚ್.ಡಿ.ಪಿ ಇರಗೇಶನ್ ಸೀಸ್ಟಮ್ ಸಣ್ಣ ಕೈಗಾರಿಕೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಉದ್ಯೋಗಿಯಾಗು ಉದ್ದೀಮೆಪತಿಯಾಗು ಎನ್ನುವಂತೆ ಶಶೀಧರ ಟೆಂಗಳೆ ಚಿಕ್ಕವಯಸ್ಸಿನಲ್ಲಿ ಕಾಯಕ ಮಾಡುತ್ತಾ ದುಡಿಮೆಯಲ್ಲಿ ದೇವರಿದ್ದಾನೆ ಎಂಬ ವಿಶ್ವಾಸ ಹೊತ್ತಿಕೊಂಡು ಎಲ್ಲ ರೈತರ ಜನ-ಸಮುದಾಯದೊಂದಿಗೆ ಪ್ರೀತಿ, ವಿಶ್ವಾಸ ಗಳಿಸಿ ದೊಡ್ಡ ಸಾಧನೆ ಮಾಡಿರುವುದು ಮೆಚ್ಚುವಂತಹದು.
ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೇ ಇದೆ ರೈತರಿಗೆ ಗುಣ ಮಟ್ಟದ ಅತೀ ಕಡಿಮೆ ದರದಲ್ಲಿ ರೈತರಿಗೆ ಭಾರ ವಾಗದಂತೆ ನಿಮಗೂ ತುಟ್ಟಿಯಾದಂತೆ ವಸ್ತುಗಳು ಪೂರೈಸಿ ಇಂದು ಈ ಭಾಗದಲ್ಲಿ ಸಣ್ಣ ಕೈಗಾರಿಕೆಗಳು ಪ್ರಾರಂಭಿಸ ಬೇಕಾಗಿದೆ. ಈ ಭಾಗದಲ್ಲಿ ಯುವ ಸಮುದಾಯಕ್ಕೆ ಉದ್ಯೋಗವಿಲ್ಲ ಇದನ್ನು ಅರಿತು ಬೂದಿಹಾಳ ಗ್ರಾಮದ ಹತ್ತಿರ ಸರಕಾರಿ ಕಾಯ್ದಿಟ್ಟ 14 ಏಕರೆ ಭೂಮಿ ಇದೆ ಸಣ್ಣ ಕೈಗಾರಿಕೆ ಸ್ಥಾಪಿಸಲಾಗುವುದು. ನೀರಾವರಿಯಿಂದ ವಂಚಿತ ಪ್ರದೇಶವಾಗಿದ್ದು 2013ರಲ್ಲಿ ಶಾಸಕನಾದ ನಂತರ ಇಸ್ರೋ ತಂತ್ರಜ್ಞಾನದ ಸಹಾಯದಿಂದ ನೀರಿನ ಮೂಲ ಹುಡಕ ಲಾಗಿದೆ. ಈ ಹಿಂದೆ ಗ್ರಾಮೀಣ ಭಾಗಗಳಿಗೆ ಟ್ಯಾಂಕರ ಮೂಲಕ ನೀರು ಒದಗಿಸಲಾಗುತ್ತಿತ್ತು. ಇಂದು ಕೆರೆ, ಹಳ್ಳ ಕೊಳ್ಳ, ಕಾಲು ವೆಗಳಿಗೆ ನೀರು ಹರಿಸಿ ಅಲ್ಪಸ್ವಲ್ಪ ನೀರಿನ ಕೊರತೆ ಕಡಿಮೆಯಾಗಿದೆ.
ಶಶೀಧರ ಟೆಂಗಳೆಯಂತಹ ಯುವ ಉತ್ಸಾಹಿ ಚಿಕ್ಕ ವಯಸ್ಸಿನಲ್ಲಿ ನೂರಾರು ಜನರಿಗೆ ಉದ್ಯೋಗ ಕೊಡುವಂತೆ ಉದ್ದಿಮೆ ಮಾಡಿರುವುದು ಸ್ವಾಗತಾರ್ಹ. ಇಂತಹ ಕಾರ್ಯಗಳಿಗೆ ಜನಪ್ರತಿನಿಧಗಳಾದ ನಾವುಗಳು ಹಾಗೂ ಸರಕಾರ ಸಹಾಯಕ್ಕೆ ಬರುವದು ಆದ್ಯಕರ್ತವ್ಯ ಯುವಕರು ಇಂತಹ ಸಾಧಕರ ಆದರ್ಶಗಳನ್ನು ಪಾಲನೆ ಮಾಡಿ ಎಂದು ಸಂದೇಶ ನೀಡಿದರು. ಲಕ್ಷ್ಮೀಕಾಂತ ನಿಂಬಾಳಕರ್ ಪ್ರಸ್ತಾವಿಕ ಮಾತನಾಡಿದರು.
ಶ್ರೀಶೈಲ ಸ್ವಾಮಿಗಳು, ಶಾಸ್ತ್ರಿಗಳು ಸಾನಿಧ್ಯ ವಹಿಸಿದರು. ಯುನಿಯನ್ ಬ್ಯಾಂಕ್ ವ್ಯವಸ್ಥಾಪಕ ಕೆ.ಸಂತೋಷಕುಮಾರ, ರಾಹುಲಕುಮಾರ ಭಾವಿದೊಡ್ಡಿ, ರಾಮಣ್ಣಾ ವಾಲಿಕಾರ, ರವಿ ಓತಿಹಾಳ, ಶಶೀಧರ ಟೆಂಗಳೆ, ಕೃಷಿ ಅಧಿಕಾರಿ ಮಹಾ ದೇಪ್ಪ ಏವೂರ ವೇದಿಕೆಯಲ್ಲಿದ್ದರು.
*
ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಕ್ಕೆ ಬಂದ ನಂತರ ಅಭಿವೃದ್ದಿಯ ದಶದಿಕ್ಕು ಬದಲಾಗಿದೆ. ಈ ಹಿಂದೆ ಇಂಡಿ ಗಡಿ ಭಾಗ ಅಭಿವೃದ್ದಿ ವಂಚಿತವಾಗಿತ್ತು. ಶಿಕ್ಷಣ,ರಸ್ತೆ, ನೀರು, ಮೂಲಭೂತ ಸೌಲಭ್ಯಗಳು ಒದಗಿಸಿ ಬಡವರಿಗೆ ದೀನ ದುರ್ಬಲರಿಗೆ ಆಸರೆಯಾಗಿದ್ದಾರೆ. ಇಂತಹ ಶಾಸಕಲರನ್ನು ಪಡೆದು ನಾವು ಭಾಗ್ಯವಂತರು.ತಡವಲಗಾ ಶ್ರೀಮಠದ ಶ್ರೀ ಅಭಿನವ ರಾಚೋಟೇಶ್ವರ ಮಹಾಸ್ವಾಮಿಗಳು