ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಮುಖ್ಯ ಶಿಕ್ಷಕನ ಆತ್ಮಹತ್ಯೆಯೋ ಅಥವಾ ಅನುಮಾನಾಸ್ಪದ ಸಾವೋ?

ಮೃತ ಮಂಜುನಾಥ್ ಕೋರ್ಲಪರ್ತಿಯ ಮಣಿಯಾರಮುದ್ದಲಹಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಂತರ ಶಿಡ್ಲಘಟ್ಟ ತಾಲೂಕಿನ ಗೊರ್ಲಗುಮ್ಮನಹಳ್ಳಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಆದರೆ ಪತಿ ಹಾಗೂ ಪತ್ನಿ ನಡುವೆ ಭಿನ್ನಾಭಿಪ್ರಾಯಗಳು ಇದ್ದ ಹಿನ್ನೆಲೆ ನಂತರ ಚಿಂತಾಮಣಿ ನಗರ ಭಾಗದ ಬಾಗೇಪಲ್ಲಿ ಸರ್ಕಲ್ ಬಳಿ ಬಾಡಿಗೆ ಮನೆಯೊಂದರಲ್ಲಿ ಒಬ್ಬಂಟಿ ಯಾಗಿ ವಾಸಿಸುತ್ತಿದ್ದರು

ಶಿಡ್ಲಘಟ್ಟ ತಾಲೂಕಿನ ಗೊರ್ಲಗುಮ್ಮನಹಳ್ಳಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ

Profile Ashok Nayak Jan 29, 2025 10:36 PM

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಬೆರಳಚ್ಚು ತಜ್ಞರು

ಚಿಂತಾಮಣಿ: ಮುಖ್ಯಶಿಕ್ಷಕನೋರ್ವ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಮೃತ ಮುಖ್ಯಶಿಕ್ಷಕ ಮಂಜುನಾಥ್ ಎಚ್ ವಿ(45) ರಾಮನಗರ ಜಿಲ್ಲೆಯ ಮಾಗಡಿ ತಾಲೂಕು ಮೂಲದ ಹೇಮಾಪುರದರಾಗಿದ್ದು ರನ್ನು ಶಿಡ್ಲಘಟ್ಟ ತಾಲೂಕಿನ ತಿಮ್ಮನಾಯಕನಹಳ್ಳಿ ಪಂಚಾಯತಿ ವ್ಯಾಪ್ತಿಯ ಗೊರ್ಲಗುಮ್ಮನಹಳ್ಳಿ ಸರ್ಕಾರಿ ಶಾಲೆ ಯಲ್ಲಿ ಮುಖ್ಯ ಶಿಕ್ಷಕನಾಗಿ ಕಳೆದ 7 ವರ್ಷಗಳಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: Crime News: ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಸುಪಾರಿ ಕೊಟ್ಟ 7ನೇ ತರಗತಿ ವಿದ್ಯಾರ್ಥಿ!

ಮೃತರ ಪತ್ನಿ ರೇಣುಕಾ ದಿಬ್ಬೂರಹಳ್ಳಿಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಮಂಜುನಾಥ್ ಕೋರ್ಲಪರ್ತಿಯ ಮಣಿಯಾರಮುದ್ದಲಹಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಂತರ ಶಿಡ್ಲಘಟ್ಟ ತಾಲೂಕಿನ ಗೊರ್ಲಗುಮ್ಮನಹಳ್ಳಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು .ಆದರೆ ಪತಿ ಹಾಗೂ ಪತ್ನಿ ನಡುವೆ ಭಿನ್ನಾಭಿಪ್ರಾಯಗಳು ಇದ್ದ ಹಿನ್ನೆಲೆ ನಂತರ ಚಿಂತಾಮಣಿ ನಗರ ಭಾಗದ ಬಾಗೇಪಲ್ಲಿ ಸರ್ಕಲ್ ಬಳಿ ಬಾಡಿಗೆ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.

ಇನ್ನೂ ಇಂದು ಮನೆಯ ಮಾಲೀಕ ಬಾಗಿಲು ತೆಗೆಯದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿ ನಂತರ ಬಾಗಿಲು ತೆಗೆದಿದ್ದು ಮಂಜುನಾಥ್ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಸದ್ಯ ಮೃತರ ಬಳಿ ಮದ್ಯದ ಬಾಟಲ್ ಸೇರಿದಂತೆ ಸುಮಾರು ಮಾತ್ರೆಗಳ ಲೆಬಲ್ ಗಳು ಪತ್ತೆಯಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಖ್ಯ ಶಿಕ್ಷಕನ ಆತ್ಮಹತ್ಯೆಯು ಅಥವಾ ಅನುಮಾನಸ್ಪದ ಸಾವು ಎಂದು ತನಿಖೆಯ ನಂತರ ಗೊತ್ತಾಗಬೇಕಾಗಿದೆ.