WPL 2025: ಕೊನೆಯ 2 ಪಂದ್ಯ ಗೆದ್ರೆ ಆರ್‌ಸಿಬಿ ಪ್ಲೇಆಫ್ಸ್‌ಗೆ ತಲುಪುತ್ತಾ? ಇಲ್ಲಿದೆ ಲೆಕ್ಕಾಚಾರ!
RCB's playoffs Scenario: ತವರು ಅಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2025ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್ ಹಾದಿ ಕಠಿಣವಾಗಿದೆ. ಕೊನೆಯ ಎರಡೂ ಪಂದ್ಯಗಳಲ್ಲಿ ಗೆದ್ದರೂ ಆರ್‌ಸಿಬಿಯ ಪ್ಲೇಆಫ್ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ.

ಆರ್‌ಸಿಬಿಯ ಪ್ಲೇಆಫ್ಸ್ ಲೆಕ್ಕಾಚಾರ

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಠಿಣ ಸನ್ನಿವೇಶದಲ್ಲಿದೆ. ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ಮಹಿಳಾ ತಂಡಕ್ಕೆ ಪ್ಲೇಆಫ್ ಹಾದಿ ಕಠಿಣವಾಗಿದೆ. ಇನ್ನೂ ಕೊನೆಯ ಎರಡು ಪಂದ್ಯಗಳನ್ನು ಆಡುವುದು ಬಾಕಿ ಇದೆ. ಈ ಎರಡೂ ಪಂದ್ಯಗಳನ್ನು ಗೆದ್ದರೂ ಆರ್‌ಸಿಬಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಸದ್ಯ ನಾಲ್ಕು ಅಂಕಗಳನ್ನು ಹೊಂದಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಟೂರ್ನಿಯ ಮೊದಲ ಅವಧಿಯ ಪಂದ್ಯಗಳು ವಡೋಧರದ ಕೊಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದವು. ಇಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು. ಆದರೆ, ಬೆಂಗಳೂರಿನ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ನಾಲ್ಕೂ ಪಂದ್ಯಗಳಲ್ಲಿ ಸೋಲುವ ಮೂಲಕ ಆರ್‌ಸಿಬಿಗೆ ಇದೀಗ ಭಾರಿ ಹಿನ್ನಡೆಯಾಗಿದೆ. ಏಕೆಂದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕು ಅಂಕಗಳೊಂದಿಗೆ -0.244 ನೆಟ್ ರನ್‌ರೇಟ್ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.
WPL 2025: ಗುಜರಾತ್ ಗೆಲುವಿನಿಂದ ತೀವ್ರಗೊಂಡ ನಾಕೌಟ್ ಲೆಕ್ಕಾಚಾರ
ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ 9 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆರ್‌ಸಿಬಿ ನೀಡಿದ್ದ 148 ರನ್‌ಗಳನ್ನು ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 27 ಎಸೆತಗಳನ್ನು ಬಾಕಿ ಇರುವಾಗಲೇ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಎಲಿಸ್ ಪೆರಿ ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವಿಫಲರಾಗಿದ್ದರು. ಆರ್‌ಸಿಬಿಗೆ ಇನ್ನು ಎರಡು ಪಂದ್ಯಗಳು ಬಾಕಿ ಇವೆ. ಮಾರ್ಚ್ 8 ರಂದು ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಕಾದಾಟ ನಡೆಯಲಿದೆ. ನಂತರ ಮಾರ್ಚ್ 11 ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಟ ನಡೆಸಲಿದೆ.
RCBW: ಆರ್‌ಸಿಬಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಮಂಧಾನ
ಆರ್‌ಸಿಬಿ ತಂಡದ ಪ್ಲೇಆಫ್ ಲೆಕ್ಕಾಚಾರ
- ಇನ್ನುಳಿದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಪಡೆಯಬೇಕಾಗುತ್ತದೆ. ಆಗ ಬೆಂಗಳೂರಿ ಅಂಕಗಳು 8 ಆಗಲಿದ್ದು, ಇನುಳಿದ ಮೂರೂ ತಂಡಗಳ ಜೊತೆಗೆ ಅಂಕಗಳು ಟೈ ಆಗಬಹುದು. ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಎಂಟು ಅಂಕವನ್ನು ಕಲೆ ಹಾಕಿದರೆ, ಆಗ ಆರ್‌ಸಿಬಿಗೆ ರನ್‌ರೇಟ್ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊನೆಯ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಅತ್ಯುತ್ತಮ ರನ್‌ರೇಟ್‌ನಲ್ಲಿ ಗೆಲ್ಲಬೇಕಾಗುತ್ತದೆ.
- ಕೊನೆಯ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಆರ್‌ಸಿಬಿ ಗೆದ್ದರೆ 6 ಅಂಕಗಳನ್ನು ಕಲೆ ಹಾಕಲಿದೆ. ಆ ಮೂಲಕ ಆರ್‌ಸಿಬಿ ಪ್ಲೇಆಫ್ಸ್ ಹಾದಿ ಬಹುತೇಕ ಬಂದ್ ಆಗಲಿದೆ. ಯುಪಿ ವಾರಿಯರ್ಸ್, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜಯಂಟ್ಸ್ ತಂಡಗಳು ಎಂಟು ಅಂಕಗಳನ್ನು ಕಲೆಹಾಕಿದರೆ, ಆಗ ಆರ್‌ಸಿಬಿ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
- ಒಂದು ವೇಳೆ ಹಾಲಿ ಚಾಂಪಿಯನ್ಸ್ ತನ್ನ ಕೊನೆಯ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ, ಆರ್‌ಸಿಬಿ ನೇರವಾಗಿ ಟೂರ್ನಿಯಿಂದ ಹೊರಬೀಳಲಿದೆ. ಇನ್ನುಳಿದ ಮೂರು ತಂಡಗಳ ಪೈಕಿ ಎರಡು ತಂಡಗಳು ಪ್ಲೇಆಫ್ಸ್‌ಗೆ ಪ್ರವೇಶ ಮಾಡಲಿವೆ.