WPL 2025 Schedule: 3ನೇ ಆವೃತ್ತಿಯ ಡಬ್ಲ್ಯುಪಿಎಲ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
WPL 2025 Schedule: ಈ ಬಾರಿ ಟೂರ್ನಿಯ 4 ನಗರದಲ್ಲಿ ನಡೆಯಲಿದೆ. ಮೊದಲ ಚರಣ ಫೆ.14 ರಿಂದ 19ರ ವರೆಗೆ ವಡೋದರಾದಲ್ಲಿ ನಡೆದರೆ, ಬಳಿಕ ಬೆಂಗಳೂರಿನಲ್ಲಿ ಫೆ.21ರಿಂದ ಮಾ.1 ರವರೆಗೆ ಪಂದ್ಯಗಳು ನಡೆಯಲಿವೆ. ಮಾ.3ರಿಂದ 8ರ ವರೆಗೆ ಲಕ್ನೋದಲ್ಲಿ, ಮಾ.10ರಿಂದ 15ರವರೆಗೆ ಫೈನಲ್ ಸೇರಿ 4 ಪಂದ್ಯಗಳಿಗೆ ಮುಂಬೈ ಆತಿಥ್ಯ ವಹಿಸಲಿದೆ.
 
                                WPL 2025 Schedule -
 Abhilash BC
                            
                                Jan 17, 2025 3:48 PM
                                
                                Abhilash BC
                            
                                Jan 17, 2025 3:48 PM
                            ಬೆಂಗಳೂರು, ಜ.17, 2025: ಬಹುನಿರೀಕ್ಷಿತ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಫೆ. 14ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುವದರೊಂದಿಗೆ ಟೂರ್ನಿಗೆ ಚಾಲನೆ ಲಭಿಸಲಿದೆ. ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ.
ಈ ಬಾರಿ ಟೂರ್ನಿಯ 4 ನಗರದಲ್ಲಿ ನಡೆಯಲಿದೆ. ಮೊದಲ ಚರಣ ಫೆ.14 ರಿಂದ 19ರ ವರೆಗೆ ವಡೋದರಾದಲ್ಲಿ ನಡೆದರೆ, ಬಳಿಕ ಬೆಂಗಳೂರಿನಲ್ಲಿ ಫೆ.21ರಿಂದ ಮಾ.1 ರವರೆಗೆ ಪಂದ್ಯಗಳು ನಡೆಯಲಿವೆ. ಮಾ.3ರಿಂದ 8ರ ವರೆಗೆ ಲಕ್ನೋದಲ್ಲಿ, ಮಾ.10ರಿಂದ 15ರವರೆಗೆ ಫೈನಲ್ ಸೇರಿ 4 ಪಂದ್ಯಗಳಿಗೆ ಮುಂಬೈ ಆತಿಥ್ಯ ವಹಿಸಲಿದೆ.
ವಡೋದರಾ ಪಂದ್ಯಗಳು
ಫೆಬ್ರವರಿ 14: ಗುಜರಾತ್ ಜೈಂಟ್ಸ್ vs ಆರ್‌ಸಿಬಿ
ಫೆಬ್ರವರಿ 15: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
ಫೆಬ್ರವರಿ 16: ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್
ಫೆಬ್ರವರಿ 17: ಡೆಲ್ಲಿ ಕ್ಯಾಪಿಟಲ್ಸ್ vs ಆರ್‌ಸಿಬಿ
ಫೆಬ್ರವರಿ 18: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್
ಫೆಬ್ರವರಿ 19: ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್
ಬೆಂಗಳೂರು ಪಂದ್ಯಗಳು
ಫೆಬ್ರವರಿ 21: ಆರ್‌ಸಿಬಿ vs ಮುಂಬೈ ಇಂಡಿಯನ್ಸ್
ಫೆಬ್ರವರಿ 22: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್
ಫೆಬ್ರವರಿ 24: ಆರ್‌ಸಿಬಿ vs ಯುಪಿ ವಾರಿಯರ್ಸ್
ಫೆಬ್ರವರಿ 25: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್
ಫೆಬ್ರವರಿ 26: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್
ಫೆಬ್ರವರಿ 27 : ಆರ್‌ಸಿಬಿ vs ಗುಜರಾತ್ ಜೈಂಟ್ಸ್
ಫೆಬ್ರವರಿ 28: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
ಮಾರ್ಚ್ 1: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ಪಂದ್ಯಗಳು
ಮಾರ್ಚ್ 3: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್
ಮಾರ್ಚ್ 6: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್
ಮಾರ್ಚ್ 7: ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್
ಮಾರ್ಚ್ 8: ಯುಪಿ ವಾರಿಯರ್ಸ್ vs ಆರ್‌ಸಿಬಿ
ಮುಂಬೈ ಪಂದ್ಯಗಳು
ಮಾರ್ಚ್ 10: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್
ಮಾರ್ಚ್ 11: ಮುಂಬೈ ಇಂಡಿಯನ್ಸ್ vs ಆರ್‌ಸಿಬಿ
ಮಾರ್ಚ್ 13: ಎಲಿಮಿನೇಟರ್
ಮಾರ್ಚ್ 15: ಫೈನಲ್
 
            