Chinthamani News: ತಂದೆ ತಾಯಿಯ ತ್ಯಾಗವೇ ನಮಗೆ ಪ್ರೇರಣೆ ಅವರೇ ನಿಜವಾದ ನಾಯಕರು
ತಂದೆ ತಾಯಿಗಳ ಕೊಡುಗೆ ಅಪಾರ ವಾಗಿದ್ದು ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ನಾವು ಜೀವನ ಪೂರ್ತಿ ಅವರ ಸೇವೆ ಮಾಡಿದರು ಸಾಲದು. ತಂದೆ ತಾಯಿಗೆ ನಾವು ಏನಾದರೂ ಕೊಡುಗೆ ನೀಡಬೇಕೆಂದರೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಏನಾದರೂ ಸಾಧನೆ ಮಾಡಿದರೆ ಅದೇ ನಾವು ಅವರಿಗೆ ಕೊಡುವ ಅಮೂಲ್ಯವಾದ ಕಾಣಿಕೆಯಾಗಿದೆಯೆಂದರು
-
ಚಿಂತಾಮಣಿ: ತಾವು ಹರಿದ ಬಟ್ಟೆ ಉಟ್ಟು ನಮಗೆ ಹೊಸ ಬಟ್ಟೆ ಕೊಡಿಸಿದ, ತಾವು ಹಳಸಿದ ಅಣ್ಣ ತಿಂದು ನಮಗೆ ಬಿಸಿ ಆಹಾರ ಕೊಟ್ಟ ತಂದೆ ತಾಯಿಗಳೇ ನೈಜ ಜೀವನ ಚಲನಚಿತ್ರ ನಾಯಕರೆಂದು ಮೈಸೂರಿನ ವಕೀಲ ಸುರೇಶರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರೇರಣ ಕಾರ್ಯಕ್ರಮದಲ್ಲಿ 2025-26ನೇ ಸಾಲಿ ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿ ತಂದೆ ತಾಯಿಗಳ ಕೊಡುಗೆ ಅಪಾರ ವಾಗಿದ್ದು ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ನಾವು ಜೀವನ ಪೂರ್ತಿ ಅವರ ಸೇವೆ ಮಾಡಿದರು ಸಾಲದು. ತಂದೆ ತಾಯಿಗೆ ನಾವು ಏನಾದರೂ ಕೊಡುಗೆ ನೀಡಬೇಕೆಂದರೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಏನಾದರೂ ಸಾಧನೆ ಮಾಡಿದರೆ ಅದೇ ನಾವು ಅವರಿಗೆ ಕೊಡುವ ಅಮೂಲ್ಯವಾದ ಕಾಣಿಕೆಯಾಗಿದೆಯೆಂದರು.
ಇದನ್ನೂ ಓದಿ: Chinthamani News: ಮುಂದಿನ ಪೀಳಿಗೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಉದ್ಯೋಗ ಸಿಗುವುದು ಅನುಮಾನ : ಇ ಒ ಆನಂದ್
ತಾ.ಪಂ. ಇಒ ಎಸ್.ಆನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳು ತಾವು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಬೇಕು ಜಿಲ್ಲೆ ಮತ್ತು ರಾಜ್ಯದಲ್ಲಿ ತಾಲ್ಲೂ ಕಿನ ಫಲಿತಾಂಶ ಪ್ರಥಮ ಸ್ಥಾನದಲ್ಲಿ ನಿಲ್ಲುವಂತೆ ಬರುವಂತೆ ಮಾಡಬೇಕೆಂದು ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.
ಬಿಇಒ ಉಮಾದೇವಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಸಮಯಕ್ಕೆ ಸರಿಯಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅದಕ್ಕೆ ತಕ್ಕಂತೆ ಕಠಿಣ ಪರಿಶ್ರಮ ಪಟ್ಟು ಓದಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಆರ್‌ಸಿ ಕೇಂದ್ರದ ಸಮನ್ವಯ ಅಧಿಕಾರಿ ಗಿರಿಜಮ್ಮ, ಇಸಿಓಗಳಾದ ನಾಗರಾಜ್, ನಾಗೇಶ್, ದೇವಮ್ಮ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.