ಬೆಂಗಳೂರು: ಮುಂಬರುವ 2025ರ ಮಹಿಳಾ ಪ್ರೀಮಿಯರ್ ಲೀಗ್ (WPL 2025) ಟೂರ್ನಿಗೆ ದಿನಗಣನೆ ಆರಂಭಗೊಂಡಿದ್ದು, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅಲೀಸಾ ಹೀಲಿ ಬದಲಿಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಚೆನೆಲ್ಲೆ ಹೆನ್ರಿ ಯುಪಿ ವಾರಿಯರ್ಸ್ ತಂಡವನ್ನು ಕೂಡಿಕೊಂಡಿದ್ದರೆ, ವೈಯಕ್ತಿಕ ಕಾರಣಗಳಿಂದ ಮುಂಬರುವ ಟೂರ್ನಿಯನ್ನು ಆಡದಿರಲು ನಿರ್ಧರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಫಿ ಡಿವೈನ್ (Sophie Devine) ಹಾಗೂ ಕೇಟ್ ಕ್ರಾಸ್ (Kate Cross) ಜಾಗವನ್ನು ಆಸ್ಟ್ರೇಲಿಯಾದ ಕಿಮ್ ಗಾರ್ತ್ ಹಾಗೂ ಹೀದರ್ ಗ್ರಹಾಂ ಅವರು ತುಂಬಿದ್ದಾರೆ. ಇದಕ್ಕೂ ಮುನ್ನ ಸೋಫಿ ಮೂಲಿನೂಕ್ಸ್ ಬದಲಿಗೆ ಚಾರ್ಲಿ ಡೀನ್ ಅವರು ಸ್ಮೃತಿ ಮಂಧಾನ (Smriti Mandhana) ಸಾರಥ್ಯದ ತಂಡದ ಪಾಲಾಗಿದ್ದಾರೆ.
ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯತ್ತ ಗಮನ ಹರಿಸಿರುವ ಅಲೀಸಾ ಹೀಲಿ ಅವರು ಸದ್ಯ ಪಾದದ ಗಾಯದ ಸಮಸ್ಯೆಗೆ ಒಳಗಾಗಿದ್ದು, ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ ನಿಂದ ಹೊರಗುಳಿದಿದ್ದಾರೆ.
WPL 2025: ಡಬ್ಲ್ಯುಪಿಎಲ್‌ನಿಂದ ಹಿಂದೆ ಸರಿದ ಸೋಫಿ ಡಿವೈನ್
ಟಿ20ಐನಲ್ಲಿ ಹೆನ್ರಿ ಅಂಕಿ- ಅಂಶ
ಅಲೀಸಾ ಹೀಲಿ ಬದಲಿಗೆ ಯುಪಿ ವಾರಿಯರ್ಸ್ ತಂಡ ಸೇರಿಕೊಂಡಿರುವ ಹೆನ್ರಿ, 2024ರ ಡಿಸೆಂಬರ್‌ನಲ್ಲಿ ಭಾರತ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 16 ಎಸೆತಗಳಲ್ಲಿ 43 ರನ್ ಸಿಡಿಸಿ ಗಮನ ಸೆಳೆದಿದ್ದರು. ವೆಸ್ಟ್ ಇಂಡೀಸ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಪರವೂ ಆಡಿದ ಅನುಭವ ಹೊಂದಿದ್ದಾರೆ. ಇದುವರೆಗೂ ಆಡಿರುವ 62 ಟಿ20 ಪಂದ್ಯಗಳಿಂದ 473 ರನ್ ಹಾಗೂ 22 ವಿಕೆಟ್ ಗಳನ್ನು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಪಡೆದಿದ್ದಾರೆ.
ಆರ್‌ಸಿಬಿ ಸೇರಿಕೊಂಡ ಕಿಮ್, ಗ್ರಹಾಂ
2025ರ ಡಬ್ಲ್ಯೂಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ, ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ಕೇಟ್ ಕ್ರಾಸ್ ಹಾಗೂ ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಅವರ ಸೇವೆ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಈ ಜಾಗವನ್ನು ಆಸ್ಟ್ರೇಲಿಯಾದ ವೇಗಿಗಳಾದ ಕಿಮ್ ಗಾರ್ತ್ ಹಾಗೂ ಹೀದರ್ ಗ್ರಹಾಂ ತುಂಬಲಿದ್ದಾರೆ.
WPL 2025 Schedule: 3ನೇ ಆವೃತ್ತಿಯ ಡಬ್ಲ್ಯುಪಿಎಲ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
2022ರಲ್ಲಿ ಭಾರತ ವಿರುದ್ಧದ ಟಿ20-ಐ ಪಂದ್ಯದಲ್ಲಿ ಗ್ರಹಾಂ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರೆ, ಕಿಮ್ ಗಾರ್ತ್ ಅವರು ಈ ಹಿಂದೆ ಗುಜರಾತ್ ಜಯಂಟ್ಸ್ ವಿರುದ್ಧ ಆಡಿದ ಅನುಭವ ಹೊಂದಿದ್ದು, ಪಂದ್ಯ ಒಂದರಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದರು. ಗ್ರಹಾಂ ಹಾಗೂ ಗರ್ತ್ ಅವರು ತಮ್ಮ ಮೂಲ ಬೆಲೆ 30 ಲಕ್ಷ ರೂ. ಪಡೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ್ದಾರೆ.