ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

WPL 2025: ಡಬ್ಲ್ಯುಪಿಎಲ್‌ನಿಂದ ಹಿಂದೆ ಸರಿದ ಸೋಫಿ ಡಿವೈನ್‌

ಈ ಬಾರಿ ಟೂರ್ನಿಯ 4 ನಗರದಲ್ಲಿ ನಡೆಯಲಿದೆ. ಮೊದಲ ಚರಣ ಫೆ.14 ರಿಂದ 19ರ ವರೆಗೆ ವಡೋದರಾದಲ್ಲಿ ನಡೆದರೆ, ಬಳಿಕ ಬೆಂಗಳೂರಿನಲ್ಲಿ ಫೆ.21ರಿಂದ ಮಾ.1 ರವರೆಗೆ ಪಂದ್ಯಗಳು ನಡೆಯಲಿವೆ. ಮಾ.3ರಿಂದ 8ರ ವರೆಗೆ ಲಕ್ನೋದಲ್ಲಿ, ಮಾ.10ರಿಂದ 15ರವರೆಗೆ ಫೈನಲ್‌ ಸೇರಿ 4 ಪಂದ್ಯಗಳಿಗೆ ಮುಂಬೈ ಆತಿಥ್ಯ ವಹಿಸಲಿದೆ.

WPL 2025: ಡಬ್ಲ್ಯುಪಿಎಲ್‌ನಿಂದ ಹಿಂದೆ ಸರಿದ ಸೋಫಿ ಡಿವೈನ್‌

Sophie Devine

Profile Abhilash BC Jan 26, 2025 12:21 PM

ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌ (WPL)ನ 3ನೇ ಆವೃತ್ತಿ ಫೆ. 14ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವು ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ದೊಡ್ಡ ಆಘಾತವೊಂದು ಎದುರಾಗಿದೆ. ನ್ಯೂಜಿಲ್ಯಾಂಡ್‌ನ ಅನುಭವಿ ಆಟಗಾರ್ತಿ ಸೋಫಿ ಡಿವೈನ್‌ ಟೂರ್ನಿಯಿಂದ ಹಿಂದೆ ಸರಿದ್ದಾರೆ. ಈಗಾಗಲೇ ತಮ್ಮ ಅಲಭ್ಯತೆಯನ್ನು ಫ್ರಾಂಚೈಸಿಗೆ ತಿಳಿಸಿದ್ದು, ಸೋಫಿ ನಿರ್ಧಾರಕ್ಕೆ ಫ್ರಾಂಚೈಸಿ ಕೂಡ ಓಕೆ ಎಂದಿದೆ. ಶೀಘ್ರದಲ್ಲೇ ಬದಲಿ ಆಟಗಾರ್ತಿ ನೇಮಕ ಮಾಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.

ಕಳೆದ ವರ್ಷ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 35 ವರ್ಷದ ಸೋಫಿ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್‌ ತಂಡ ಚಾಂಒಇಯನ್‌ ಪಟ್ಟ ಅಲಂಕರಿಸಿತ್ತು. ಅತಿಯಾದ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಅವರು ಈ ಬಾರಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಆಡದಿರಲು ನಿರ್ಧರಿಸಿದರು.

ಈ ಬಾರಿ ಟೂರ್ನಿಯ 4 ನಗರದಲ್ಲಿ ನಡೆಯಲಿದೆ. ಮೊದಲ ಚರಣ ಫೆ.14 ರಿಂದ 19ರ ವರೆಗೆ ವಡೋದರಾದಲ್ಲಿ ನಡೆದರೆ, ಬಳಿಕ ಬೆಂಗಳೂರಿನಲ್ಲಿ ಫೆ.21ರಿಂದ ಮಾ.1 ರವರೆಗೆ ಪಂದ್ಯಗಳು ನಡೆಯಲಿವೆ. ಮಾ.3ರಿಂದ 8ರ ವರೆಗೆ ಲಕ್ನೋದಲ್ಲಿ, ಮಾ.10ರಿಂದ 15ರವರೆಗೆ ಫೈನಲ್‌ ಸೇರಿ 4 ಪಂದ್ಯಗಳಿಗೆ ಮುಂಬೈ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ WPL 2025 Schedule: 3ನೇ ಆವೃತ್ತಿಯ ಡಬ್ಲ್ಯುಪಿಎಲ್‌ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಆರ್‌ಸಿಬಿ ಮಹಿಳಾ ತಂಡ

ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ರೇಣುಕಾ ಸಿಂಗ್, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಡಿವೈನ್, ಕೇಟ್ ಕ್ರಾಸ್, ಸಬ್ಬಿನೇನಿ ಮೇಘನಾ, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಏಕ್ತಾ ಬಿಷ್ತ್, ಕನಿಕಾ ಅಹುಜಾ, ಡೇನಿಯಲ್ ವ್ಯಾಟ್, ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘವಿ ಬಿಸ್ತ್, ಜಾಗರವಿ ಪವಾರ್, ಚಾರ್ಲಿ ಡೀನ್.