WTC Final 2025: ಮೂರನೇ ಸ್ಥಾನಿ ಭಾರತಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
World Test Championship 2025: ಕಳೆದ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿ ಸ್ಥಾನ ಪಡೆದ ನಂತರ ಭಾರತ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ನ್ಯೂಜಿಲೆಂಡ್ (2021) ಮತ್ತು ಆಸ್ಟ್ರೇಲಿಯಾ (2023) ವಿರುದ್ಧ ಎರಡು ಫೈನಲ್‌ಗಳಲ್ಲಿ ಭಾರತ ಸೋತಿತ್ತು.


ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2025) ಬುಧವಾರ ಆರಂಭಗೊಳ್ಳಲಿದೆ. ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ(Australia vs South Africa) ತಂಡಗಳು ಟ್ರೋಫಿಗಾಗಿ ಪರಸ್ಪರ ಕಾದಾಡಲಿವೆ. ಈ ಬಾರಿ ಪ್ರಶಸ್ತಿ ಮೊತ್ತವನ್ನು(wtc final 2025 prize money) ಭಾರೀ ಏರಿಕೆ ಮಾಡಲಾಗಿದೆ. ಮೂರನೇ ಸ್ಥಾನಿಯಾಗಿರುವ ಭಾರತ(Team India) ತಂಡಕ್ಕೂ ದೊಡ್ಡ ಮೊತ್ತ ಸಿಗಲಿದೆ.
ಕಳೆದ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿ ಸ್ಥಾನ ಪಡೆದ ನಂತರ ಭಾರತ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ನ್ಯೂಜಿಲೆಂಡ್ (2021) ಮತ್ತು ಆಸ್ಟ್ರೇಲಿಯಾ (2023) ವಿರುದ್ಧ ಎರಡು ಫೈನಲ್‌ಗಳಲ್ಲಿ ಭಾರತ ಸೋತಿತ್ತು.
ಭಾರತ ಕೊನೆಯ ಹಂತದವರೆಗೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಹೀಗಾಗಿ ಭಾರತ ಮೂರನೇ ಬಾರಿಯೂ ಫೈನಲ್ ಪ್ರವೇಶಿಸಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ತವರಿನ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 0-3 ಸರಣಿ ವೈಟ್‌ವಾಶ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ (ಬಿಜಿಟಿ)ಯಲ್ಲಿ 1-3 ಅಂತರದ ಸೋಲಿನಿಂದಾಗಿ ಭಾರತವು ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು. ಒಟ್ಟು ಅಂಕಗಳಲ್ಲಿ 50% ಗಳಿಸಿತು. ಇದೀಗ ಮೂರನೇ ಸ್ಥಾನಿ ಭಾರತಕ್ಕೆ 1.44 ಮಿಲಿಯನ್ ಯುಎಸ್ ಡಾಲರ್ (ರೂ. 12.30 ಕೋಟಿ) ಬಹುಮಾನ ಮೊತ್ತ ಸಿಗಲಿದೆ. ಇದು 2023 ರಲ್ಲಿ ನೀಡಲಾದ ಬಹುಮಾನದ ಮೊತ್ತವಾದ 450,000 ಯುಎಸ್ ಡಾಲರ್ (ರೂ. 3.84 ಕೋಟಿ) ಗಿಂತ ಹೆಚ್ಚಳವಾಗಿದೆ.
ಇದನ್ನೂ ಓದಿ WTC final: ಟೆಸ್ಟ್ ಫೈನಲ್ ಪಂದ್ಯ ಡ್ರಾ-ಟೈ ಆದರೆ ವಿಜೇತರ ನಿರ್ಧಾರ ಹೇಗೆ?
ಈ ಬಾರಿ ಚಾಂಪಿಯನ್ ತಂಡಕ್ಕೆ ಒಟ್ಟು $3.6 ಮಿಲಿಯನ್ ಡಾಲರ್ ಬಹುಮಾನ ಸಿಗಲಿದೆ. ಅಂದರೆ ವಿಜೇತ ತಂಡಕ್ಕೆ ರೂ.30.88 ಕೋಟಿ ಸಿಗಲಿದೆ. ರನ್ನರ್ ಅಪ್ ತಂಡವು 18.50 ಕೋಟಿ (2.1 ಮಿಲಿಯನ್ ಡಾಲರ್) ಪಡೆದುಕೊಳ್ಳಲಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ, ಒಟ್ಟು ಬಹುಮಾನದ ಮೊತ್ತ 1.6 ಮಿಲಿಯನ್ ಡಾಲರ್ ಆಗಿತ್ತು. ಆದರೆ ಈ ಬಾರಿ ರನ್ನರ್ ಅಪ್‌ಗೂ ಇದಕ್ಕಿಂತ ಅಧಿಕ ಮೊತ್ತ ಸಿಗಲಿದೆ.