ಚಿಕ್ಕಬಳ್ಳಾಪುರ : ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಗುರುವಾರ ಇಂಡೋಟಿಬೇಟಿಯನ್ ಬಾರ್ಡರ್ ಪೊಲೀಸ್, ಸುಂಡ್ರಹಳ್ಳಿ ಇಲ್ಲಿ ಯೋಗ ತರಬೇತಿಯನ್ನು ನಡೆಸಲಾಯಿತು. ಅಲ್ಲಿನ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿ ದ್ದರು.
ಇದನ್ನೂ ಓದಿ: Yoga Namaskara: ಹನುಮ ಜಯಂತಿ ಪ್ರಯುಕ್ತ 108 ಯೋಗ ನಮಸ್ಕಾರ ಮಾಡಿದ ಯೋಗಪಟುಗಳು
ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ ಎನ್.ಹೆಚ್.ಎಂ ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್, ಯೋಗ ತರಬೇತುದಾರರು ಮುನಿರಾಜು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಂದರ್ ರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದರು.