ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದವನು ಪೊಲೀಸರಿಂದ ಲಾಕ್‌

ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿಯ ರಸ್ತೆಯಲ್ಲಿ ಮಾರ್ಗ ಮಧ್ಯದಲ್ಲಿಯೇ ಈ ವ್ಯಕ್ತಿ ಚೇರ್ ಹಾಕಿಕೊಂಡು ಕುಳಿತು ಟೀ ಕುಡಿಯುತ್ತಾ ರೀಲ್ಸ್ ಮಾಡಿದ್ದ. ಅದನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆ simbu_str_123 ನಲ್ಲಿ ಅಪ್ಲೋಡ್‌ ಮಾಡಿದ್ದು, ಅದು ವೈರಲ್‌ ಆಗಿತ್ತು. ಪೊಲೀಸರು ಇದನ್ನು ಗಮನಿಸಿದ್ದರು.

ಬೆಂಗಳೂರಿನ ರಸ್ತೆಯಲ್ಲಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದವನು ಈಗ ಲಾಕ್‌

ವೈರಲ್‌ ವಿಡಿಯೋದ ದೃಶ್ಯ

ಹರೀಶ್‌ ಕೇರ ಹರೀಶ್‌ ಕೇರ Apr 18, 2025 11:55 AM

ಬೆಂಗಳೂರು: ರೀಲ್ಸ್ (reels) ಹುಚ್ಚಿಗಾಗಿ ಪ್ರಾಣ ತೆತ್ತವರಿದ್ದಾರೆ. ಇದೀಗ ಬೆಂಗಳೂರು ನಗರದಲ್ಲಿ ಭಾರಿ ಟ್ರಾಫಿಕ್‌ನ ರಸ್ತೆಯಲ್ಲಿ (Bengaluru road) ಚೇರ್‌ ಹಾಕಿಕೊಂಡು ಆರಾಮಾಗಿ ಕುಳಿತು ಟೀ ಕುಡಿಯುತ್ತ (Drinking tea) ರೀಲ್ಸ್‌ ಮಾಡಿ ಹಾದಿಹೋಕರಿಗೆ ಕಿರುಕುಳ ನೀಡಿದವನು ಪೊಲೀಸರಿಂದ (police) ಲಾಕ್‌ ಆಗಿದ್ದಾನೆ. ರೀಲ್ಸ್‌ ಹುಚ್ಚು ಈತನನ್ನು ಪೊಲೀಸ್‌ ಕಂಬಿಗಳ ಹಿಂದೆ (Arrested) ತಂದು ನಿಲ್ಲಿಸಿದೆ. ಪ್ರಚಾರದ ತೆವಲಿಗೆ ಈತ ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿಯ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಕಿರಿಕ್‌ ಮಾಡಿದ್ದ. ಇದು ವೈರಲ್‌ (Viral video) ಆಗಿತ್ತು.

ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ನಡುವೆ ರಸ್ತೆ ದಾಟುವುದೇ ಭಗೀರಥ ಪ್ರಯತ್ನದಂತಾಗಿದೆ. ಸಿಗ್ನಲ್ ನೋಡಿಕೊಳ್ಳದೇ ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಇಂಥದರ ನಡುವೆ ಮಧ್ಯರಸ್ತೆಯಲ್ಲಿಯೇ ಈ ವ್ಯಕ್ತಿ ಚೇರ್ ಹಾಕಿಕೊಂಡು ಕುಳಿತು ಟೀ ಕುಡಿಯುತ್ತಾ ರೀಲ್ಸ್ ಮಾಡಿದ್ದ. ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿಯ ರಸ್ತೆಯಲ್ಲಿ ಈತ ರೀಲ್ಸ್‌ ಮಾಡಿದ್ದು, ಅದನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆ simbu_str_123 ನಲ್ಲಿ ಅಪ್ಲೋಡ್‌ ಮಾಡಿದ್ದ.



ಈ ರೀಲ್ಸ್ ವೈರಲ್ ಆಗಿದ್ದು, ಅನೇಕರು ಈತನ ಅನುಚಿತ ನಡೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಡಿಯೊ ಹಂಚಿಕೊಂಡು ಬೆಂಗಳೂರು ಪೊಲೀಸ್ ಎಕ್ಸ್ ಖಾತೆಗೆ ಟ್ಯಾಗ್‌ ಮಾಡಿದ್ದರು. ಇದರ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾದ ಹಲಸೂರು ಗೇಟ್ ಉಪ ವಿಭಾಗದ ಎಸ್ ಜೆ ಪಾರ್ಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ತಪ್ಪು ಸಂದೇಶ ನೀಡಿದ ಅಡಿ ಎಸ್.ಜೆ.ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಪುಂಡನನ್ನು ಬಂಧಿಸಿದ್ದಾರೆ.

ತುಂಗಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕರಿಬ್ಬರ ಸಾವು

ರಾಯಚೂರು: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ ಬೆಂಗಳೂರು ಮೂಲದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮೂಲದ ಮುತ್ತುರಾಜ್‌ (24) ಮತ್ತು ಮದನ್‌ (20) ಎಂದು ಗುರುತಿಸಲಾಗಿದೆ. ಯುವಕರ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ. ರಕ್ಷಿಸಲು ಹೋಗುವ ಮುನ್ನವೇ ಇಬ್ಬರೂ ಕೈಕಾಲು ಬಡಿದು ತಳ ಸೇರಿದ್ದರು.

ಎಲೆಬಿಚ್ಚಾಲಿ ಗುರುರಾಯರ ಏಕಶಿಲಾ ವೃಂದಾವನ ದರ್ಶನಕ್ಕೆ ಬೆಂಗಳೂರಿನಿಂದ 15 ಜನ ಸ್ನೇಹಿತರ ತಂಡ ಆಗಮಿಸಿತ್ತು. ಈ ವೇಳೆ ಮುತ್ತುರಾಜ್ ಮತ್ತು ಮದನ್ ನದಿಯಲ್ಲಿ ಈಜಲು ತೆರಳಿದ್ದಾರೆ. ನದಿಯಲ್ಲಿ ತಗ್ಗು ಪ್ರದೇಶದಲ್ಲಿ ಸಿಲುಕಿ ಒದ್ದಾಡಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆ ಕುರಿತಂತೆ ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಮಹಿಳೆಯರ ಭಜನೆ - ಆಮೇಲೆ ಆಗಿದ್ದೇ ಬೇರೆ; ವಿಡಿಯೊ ಫುಲ್‌ ವೈರಲ್‌