ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೆಟ್ರೋದಲ್ಲಿ ಮಹಿಳೆಯರ ಭಜನೆ - ಆಮೇಲೆ ಆಗಿದ್ದೇ ಬೇರೆ; ವಿಡಿಯೊ ಫುಲ್‌ ವೈರಲ್‌

ದೆಹಲಿ ಮೆಟ್ರೋದಲ್ಲಿ ಜನದಟ್ಟಣೆ ಇರುವಾಗ ಮಹಿಳೆಯರ ಗುಂಪು ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸುವುದರ ಜೊತೆಗೆ ಭಜನೆಗಳನ್ನು ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(‌Viral Video) ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಮೆಟ್ರೋದಲ್ಲಿ ಮಹಿಳೆಯರ ಭಜನೆ - ಆಮೇಲೆ ಆಗಿದ್ದೇ ಬೇರೆ!

Profile pavithra Apr 17, 2025 5:08 PM

ನವದೆಹಲಿ: ದೆಹಲಿ ಮೆಟ್ರೋ ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಈ ಹಿಂದೆ ಪ್ರಯಾಣಿಕರ ನಡುವಿನ ಜಗಳ, ಸಂಗೀತ ಹಾಡುವುದು, ಡ್ಯಾನ್ಸ್ ಮಾಡುವಂತಹ ವಿಚಾರಕ್ಕೆ ಸುದ್ದಿಯಾಗಿತ್ತು. ಇದೀಗ ರೈಲಿನಲ್ಲಿ ಮಹಿಳೆಯರ ಗುಂಪು ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸುವುದರ ಜೊತೆಗೆ ಭಜನೆಗಳನ್ನು ಹಾಡಿದ ವಿಚಾರಕ್ಕೆ ಮತ್ತೆ ಸುದ್ದಿಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ರೈಲು ಪ್ರಯಾಣಿಕರಿಂದ ತುಂಬಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ಸೀರೆ ಮತ್ತು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿದ ಮಹಿಳೆಯರು ಮೆಟ್ರೋದೊಳಗೆ ಜೋರಾಗಿ ಭಜನೆಗಳನ್ನು ಮಾಡಿದ್ದಾರೆ. ಅವರು ಡೋಲಕ್ ಮತ್ತು ಕರ್ತಾಲ್‍ನಂತಹ ವಾದ್ಯಗಳನ್ನು ನುಡಿಸುತ್ತಾ ಭಕ್ತಿಗೀತೆಗಳನ್ನು ಪಠಿಸಿದ್ದಾರೆ.ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.



ಸಿಐಎಸ್ಎಫ್‌ ಸಿಬ್ಬಂದಿ ರೈಲಿನೊಳಗೆ ಬಂದು ಭಜನಾ ಚಟುವಟಿಕೆಯನ್ನು ನಿಲ್ಲಿಸಲು ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸಮವಸ್ತ್ರ ಧರಿಸಿದ ಸಿಐಎಸ್ಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಇತರರಿಗೆ ಉಪದ್ರವ ಅಥವಾ ಅನಾನುಕೂಲತೆಯನ್ನು ಉಂಟುಮಾಡಿದ್ದಕ್ಕಾಗಿ ಮಹಿಳೆಯರನ್ನು ಗದರಿಸಿದ್ದಾರೆ. ಈ ಘಟನೆಯನ್ನು ಯಾವುದೇ ಲಿಖಿತ ದೂರು ಅಥವಾ ದಂಡವಿಲ್ಲದೆ ಪರಿಹರಿಸಲಾಗಿದೆ ಎನ್ನಲಾಗಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮೆಟ್ರೋದಲ್ಲಿ ಧಾರ್ಮಿಕ ಪ್ರದರ್ಶನಗಳ ಸೂಕ್ತತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ‍ಘಟನೆಯ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ನೆಟ್ಟಿಗರು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ, ಭಜನೆ ಇತ್ಯಾದಿಗಳನ್ನು ಮಾಡಿದ ಈ ಗುಂಪನ್ನು ಟೀಕಿಸಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಅಥವಾ ಭಜನೆಯಲ್ಲಿ ತೊಡಗಬಾರದು ಮತ್ತು ಉಪದ್ರವವನ್ನು ಮಾಡಬಾರದು" ಎಂದು ಒಬ್ಬರು ಬರೆದಿದ್ದಾರೆ. "ಧಾರ್ಮಿಕ ಸ್ಥಳಗಳಲ್ಲಿ ಅಥವಾ ಮನೆಯಲ್ಲಿ ಧರ್ಮವನ್ನು ಆಚರಿಸಬೇಕು. ಇಲ್ಲಿ ಏಕೆ?" ಎಂದು ಇನ್ನೊಬ್ಬರು ಕೇಳಿದ್ದಾರೆ. ಮತ್ತೊಂದೆಡೆ, ಕೆಲವು ನೆಟ್ಟಿಗರು ಈ ಚಟುವಟಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಅವರು ಧೂಮಪಾನ, ಮದ್ಯಪಾನ ಅಥವಾ ಇಸ್ಪೀಟ್ ಆಡುತ್ತಿಲ್ಲ. ಅವರು ಕೇವಲ ಮನರಂಜನೆಗಾಗಿ ಭಜನೆಗಳನ್ನು ಹಾಡುತ್ತಿದ್ದಾರೆ" ಎಂದು ಒಬ್ಬರು ಹೇಳಿದ್ದಾರೆ.” ಈಗ ಇದು ಕೂಡ ಮೆಟ್ರೋದಲ್ಲಿ ಶುರುವಾಗಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ.