ʻಮೈದಾನಕ್ಕೆ ಮರಳುತ್ತೇನೆʼ: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಎಬಿ ಡಿವಿಲಿಯರ್ಸ್!
ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಅವರು ಕ್ರಿಕೆಟ್‌ಗೆ ಮರಳುವುದಾಗಿ ಹೇಳಿಕೊಂಡಿದ್ದಾರೆ. ಅವರು 2021ರಲ್ಲಿಯೇ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ, ಯಾವುದಾದರೂ ಸಣ್ಣ ಮಟ್ಟದ ಟೂರ್ನಿಯ ಮೂಲಕ ಕ್ರಿಕೆಟ್ ಅಂಗಣಕ್ಕೆ ಮರಳುತ್ತೇನೆಂದು ತಿಳಿಸಿದ್ದಾರೆ.
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೃತ್ತಿ ಜೀವನಕ್ಕೆ ಈಗಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ಕ್ರಿಕೆಟ್‌ಗೆ ಮರಳುತ್ತೇನೆಂದು ಭರವಸೆ ನೀಡಿದ್ದಾರೆ. ಆದರೆ, ಐಪಿಎಲ್ ಅಥವಾ ದಕ್ಷಿಣ ಆಫ್ರಿಕಾ ಟಿ20ಯಂತಹ ದೊಡ್ಡ ಟೂರ್ನಿಗಳಿಗೆ ಬರುವುದಿಲ್ಲ ಎಂದು ಹೇಳಿದ ಅವರು, ಯಾವುದಾದರೂ ಸಣ್ಣ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಎಬಿ ಡಿ ವಿಲಿಯರ್ಸ್ ಅವರು ಸದ್ಯ ತಮ್ಮ ಮಕ್ಕಳ ಜೊತೆ ಕ್ರಿಕೆಟ್ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಕ್ರಿಕೆಟ್ ಆಡುವಂತೆ ತಮ್ಮ ಮಕ್ಕಳು ತನಗೆ ಒತ್ತಡ ಹೇರುತ್ತಿದ್ದಾರೆಂದು ಅವರು ಬಹಿರಂಗಪಡಿಸಿದ್ದಾರೆ. 2018ರಲ್ಲಿ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮನ್, ದಕ್ಷಿಣ ಆಫ್ರಿಕಾ ಪರ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕೊನೆಯ ಐಪಿಎಲ್ ಪಂದ್ಯವನ್ನು ಅವರು ಆಡಿದ್ದರು. 2021ರ ನವೆಂಬರ್‌ನಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಎಬಿಡಿ ವಿದಾಯ ಹೇಳಿದ್ದರು.
IPL 2025:ʻಯಾವುದೇ ಸಂವಹನ ಇರಲಿಲ್ಲʼ-ಕೆಕೆಆರ್ ವಿರುದ್ದ ಶ್ರೇಯಸ್ ಅಯ್ಯರ್ ಬೇಸರ!
ರನ್ನಿಂಗ್ ಬಿಟ್ವೀನ್ ದಿ ವಿಕೆಟ್ ಶೋನಲ್ಲಿ ಮಾತನಾಡಿದ ಎಬಿಡಿ, "ಒಂದು ದಿನ ನಾನು ಮತ್ತೆ ಕ್ರಿಕೆಟ್ ಆಡಲು ಬಯಸುತ್ತೇನೆ. ಇದರ ಬಗ್ಗೆ ನಾನು ಯಾವುದೇ ಸ್ಪಷ್ಟತೆ ನೀಡುವುದಿಲ್ಲ. ಆದರೆ, ಕ್ರಿಕೆಟ್ ಆಡಬೇಕೆಂಬ ಭಾವನೆ ನನಗೆ ಉಂಟಾಗುತ್ತಿದೆ. ಅದರಂತೆ ನನ್ನ ಮಕ್ಕಳು ನನಗೆ ಒತ್ತಡ ಹೇರುತ್ತಿದ್ದಾರೆ ಹಾಗೂ ನಾನು ಅವರ ಜೊತೆ ನೆಟ್ಸ್‌ಗೆ ಹೋಗಲು ಬಯಸುತ್ತಿದ್ದೇನೆ. ನೆಟ್ಸ್‌ನಲ್ಲಿ ನಾನು ನನ್ನ ಕ್ರಿಕೆಟ್ ಆಟವನ್ನು ಆನಂದಿಸಿದರೆ, ಬಹುಶಃ ಐಪಿಎಲ್ ಅಥವಾ ದಕ್ಷಿಣ ಆಫ್ರಿಕಾ20 ಯಂತಹ ವೃತ್ತಿ ಪರ ಕ್ರಿಕೆಟ್ ಅಲ್ಲದೇ ಇದ್ದರೂ ಯಾವುದಾದರೂ ಸಾಮನ್ಯ ಟೂರ್ನಿಯೊಂದರಲ್ಲಿ ಕಾಣಿಸಿಕೊಳ್ಳುತ್ತೇನೆ," ಎಂದು ತಿಳಿಸಿದ್ದಾರೆ.
IPL 2025: ಲಕ್ನೋ ತಂಡದ ನಾಯಕನಾದ ರಿಷಭ್ ಪಂತ್
ಮಕ್ಕಳು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ: ಎಬಿಡಿ
"ಮತ್ತೊಮ್ಮೆ ಕ್ರಿಕೆಟ್ ಆಡಲು ನಾನು ಪ್ರಯತ್ನಿಸುತ್ತೇನೆ ಹಾಗೂ ನನ್ನ ಕಣ್ಣುಗಳು ಕೆಲಸ ಮಾಡುತ್ತದೆಯೇ ಎಂದು ನಾನು ನೋಡುತ್ತೇನೆ. ಯಾರಿಗೆ ಗೊತ್ತು? ನಾನು ಮತ್ತೆ ಆಡಬಹುದು. ನನ್ನ ಕಣ್ಣುಗಳು ಸ್ವಲ್ಪ ಮಂಜಾಗಿದೆ, ಆದರೆ ಬಲ ಕಣ್ಣು ಇಲ್ಲಿ ತುಂಬಾ ಮುಖ್ಯವಾಗುತ್ತದೆ ಹಾಗೂ ಇದು ಕೆಲಸ ಮಾಡುತ್ತಿದೆ. ನನ್ನ ಮಕ್ಕಳಿಗಾಗಿ ನಾನು ಇದನ್ನು ಮಾಡುತ್ತಿದ್ದೇನೆ. ನೆಟ್ಸ್‌ನಲ್ಲಿ ಆಡಿದ ಬಳಿಕ ನಾನು ಮತ್ತೊಮ್ಮೆ ಕ್ರಿಕೆಟ್ ಅನ್ನು ಆನಂದಿಸುತ್ತೇನೆಂದು," ಎಂದು ಮಿಸ್ಟರ್ 360 ಡಿಗ್ರಿ ಹೇಳಿದ್ದಾರೆ.
"ಇದರಲ್ಲಿ ಗಂಭೀರವಾಗಿ ಏನೂ ಇಲ್ಲ. ನಾನು ಆರ್‌ಸಿಬಿ ಅಥವಾ ಬೇರೆ ಯಾವುದೇ ದೊಡ್ಡ ಸ್ಪರ್ಧೆಯ ಬಗ್ಗೆ ಮಾತನಾಡುತ್ತಿಲ್ಲ. ಮತ್ತೊಮ್ಮೆ ಆ ರೀತಿಯ ಒತ್ತಡವನ್ನು ಅನುಭವಿಸಲು ನನಗೆ ಇಷ್ಟವಿಲ್ಲ. ನಾನು ಎಲ್ಲಿಯೇ ಆಡಿದರೂ ಅಲ್ಲಿ ಆಟವನ್ನು ಆನಂದಿಸುತ್ತೇನೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ತಿಳಿಸಿದ್ದಾರೆ.
ಈ ಹಿಂದೆ ಆರ್‌ಸಿಬಿ ತಂಡದಲ್ಲಿ ಕೋಚಿಂಗ್ ಹುದ್ದೆಯನ್ನು ನಿರ್ವಹಿಸುವ ಬಗ್ಗೆ ಎಬಿ ಡಿ ವಿಲಿಯರ್ಸ್ ಆಸಕ್ತಿಯನ್ನು ತೋರಿಸಿದ್ದರು. ಆದರೆ, ಅವರಿಗೆ ಯಾವುದೇ ಅವಕಾಶ ಬಂದಿರಲಿಲ್ಲ. ಇದೀಗ ಅವರು ದಕ್ಷಿಣ ಆಫ್ರಿಕಾ 20 ಟೂರ್ನಿಯ ಮೂರನೇ ಆವೃತ್ತಿಗೆ ರಾಯಬಾರಿಯಾಗಿದ್ದಾರೆ. ಅವರು ಪ್ರಸ್ತುತ ಕುಟುಂಬ ಮತ್ತ ಸ್ನೇಹಿತರ ಜೊತೆ ತಮ್ಮ ಅಮೂಲ್ಯ ಸಮಯವನ್ನು ಆನಂದಿಸುತ್ತಿದ್ದಾರೆ. ಅಲ್ಲದೆ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದಂತೆ ವಿಶ್ಲೇಷಣೆಯನ್ನು ನೀಡುತ್ತಿದ್ದಾರೆ.