IPL 2025: ಲಕ್ನೋ ತಂಡದ ನಾಯಕನಾದ ರಿಷಭ್ ಪಂತ್
IPL 2025: ಆರಂಭದಲ್ಲಿ ವಿಂಡೀಸ್‌ನ ನಿಕೋಲಸ್ ಪೂರನ್ ಲಕ್ನೋ ತಂಡದ ನಾಯಕನಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಫ್ರಾಂಚೈಸಿ ಪಂತ್‌ಗೆ ನಾಯಕತ್ವ ನೀಡಲಾಗಿದೆ.
ಲಕ್ನೋ: ಟೀಮ್ ಇಂಡಿಯಾದ ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್(Rishabh Pant) ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಫ್ರಾಂಚೈಸಿ ಮಾಲಕ ಸಂಜೀವ್ ಗೋಯೆಂಕಾ(Sanjiv Goenka) ಅವರು ಸುದ್ದಿಗೋಷ್ಠಿ ನಡೆಸಿ ಪಂತ್ ನಾಯಕನಾದ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಕಳೆದ ಐಪಿಎಲ್(IPL 2025) ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ.ಗೆ ಪಂತ್‌ರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿ ಮಾಡಿತ್ತು.
ಸ್ಟಾರ್ ಸ್ಪೋರ್ಟ್ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಜೀವ್ ಗೋಯೆಂಕಾ, 'ರಿಷಭ್ ಪಂತ್ ಅವರು 18 ನೇ ಆವೃತ್ತಿಯಲ್ಲಿ ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ. ಅವರನ್ನು ನಾಯಕನಾಗಿ ಘೋಷಣೆ ಮಾಡಲು ಬಹಳ ಖಷಿಯಾಗುತ್ತಿದೆ. ಪಂತ್ ಮುಂದಿನ ದಿನದಲ್ಲಿ ಐಪಿಎಲ್‌ನ ಅತ್ಯತ್ತಮ ನಾಯಕ ಎನಿಸಿಕೊಳ್ಳಲಿದ್ದಾರೆ ಎಂದು' ಗೋಯೆಂಕಾ ಹೇಳಿದರು.
ಆರಂಭದಲ್ಲಿ ವಿಂಡೀಸ್‌ನ ನಿಕೋಲಸ್ ಪೂರನ್ ಲಕ್ನೋ ತಂಡದ ನಾಯಕನಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಫ್ರಾಂಚೈಸಿ ಪಂತ್‌ಗೆ ನಾಯಕತ್ವ ನೀಡಲಾಗಿದೆ.
🚨 EXCLUSIVE 🚨
— Star Sports (@StarSportsIndia) January 20, 2025
In our exclusive interview, @LucknowIPL owner @DrSanjivGoenka has confirmed that @RishabhPant17 will captain the side in #IPL2025! 👏🏻#RishabhPant #LucknowSuperGiants #IPL2025 pic.twitter.com/PnTCiwy48k
ಕಳೆದ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂತ್ ಸಾರಥ್ಯದಲ್ಲಿ ಡೆಲ್ಲಿ ತಂಡ ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು ಮತ್ತು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. 2021ರಲ್ಲಿ ಪಂತ್ ನಾಯಕತ್ವದಲ್ಲಿ ಡೆಲ್ಲಿ ತಂಡ ಪ್ಲೇ ಆಫ್‌ಗೆ ಪ್ರವೇಶ ಪಡೆದಿತ್ತು.
ಇದನ್ನೂ ಓದಿ IPL 2025: ಐಪಿಎಲ್ 2025 ಆರಂಭಕ್ಕೆ ಮುಹೂರ್ತ ಫಿಕ್ಸ್..!
ಲಕ್ನೋ ತಂಡ
ನಿಕೋಲಸ್ ಪೂರನ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಆಯುಷ್ ಬದೋನಿ, ರಿಷಭ್ ಪಂತ್, ಆವೇಶ್ ಖಾನ್, ಡೇವಿಡ್ ಮಿಲ್ಲರ್, ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಮ್, ಅಬ್ದುಲ್ ಸಮದ್, ಆರ್ಯನ್ ಜುಯಲ್. ಆಕಾಶ್ದೀಪ್ , ಶಾಬಾಜ್ ಅಹ್ಮದ್ , ಹಿಮ್ಮತ್ ಸಿಂಗ್, ಎಂ. ಸಿದ್ಧಾರ್ಥ್, ದಿಗ್ವೇಷ್ ಸಿಂಗ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್, ಯುವರಾಜ್ ಚೌಧರಿ, ರಾಜ್ಯವರ್ಧನ್ ಹಂಗರ್ಗೆಕರ್, ಅರ್ಷಿನ್ ಕುಲಕರ್ಣಿ, ಮ್ಯಾಥ್ಯೂ ಬ್ರಿಟ್ಜ್ಕೆ.