ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanakya Niti: ನೀವು ಯಶಸ್ಸನ್ನು ಹೊಂದಬೇಕು ಎಂದಿದ್ದರೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ಅನ್ನುತ್ತಾನೆ ಚಾಣಕ್ಯ

ಈಗಾಗಲೇ ನಾವು ಸಾಕಷ್ಟು ಬಾರಿ ಯಶಸ್ಸನ್ನು ಮುಟ್ಟಬೇಕೆಂದುಕೊಂಡಿದ್ದರೂ ಅದು ನಮಗೆ ಸಾಧ್ಯವಾಗದೇ ಹೋಗಿರಬಹುದು. ಆದರೆ, ಈ ಬಾರಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯನು ಕೆಲವೊಂದು ತತ್ವಗಳನ್ನು ನೀಡಿದ್ದಾನೆ. ಚಾಣಕ್ಯನ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾವು ಏನು ಮಾಡಬೇಕು..?

ಚಾಣಕ್ಯ

ಬೆಂಗಳೂರು: ಮಾನವನ ಜೀವನಕ್ಕೆ ಸಂಬಂಧಿಸಿದ ಜ್ಞಾನದ ತತ್ವಗಳನ್ನು ಮಾತನಾಡುವ ಮಹಾನ್‌ ಜ್ಞಾನಿ ಚಾಣಕ್ಯ (Chanakya) ಮನುಷ್ಯನ ಯಶಸ್ಸಿನ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಮಾತನಾಡಿದ್ದಾನೆ. ತನ್ನ ಅಧ್ಯಯನ ಮತ್ತು ಜೀವನದ ಅನುಭವದಿಂದ ಪಡೆದ ಜ್ಞಾನವನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದು, ನೂರಾರು ವರ್ಷಗಳು ಕಳೆದ ನಂತರವೂ ಚಾಣಕ್ಯ ನೀತಿ (Chanakya Nithi) ಪ್ರಸ್ತುತವಾಗಿದ್ದು, ಇಂದಿಗೂ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಜೀವನದಲ್ಲಿ ಚಾಣಕ್ಯ ನೀತಿಯಲ್ಲಿ ಬರೆದ ವಿಷಯಗಳನ್ನು ಅಳವಡಿಸಿಕೊಳ್ಳುತ್ತಾರೆ.

ಇನ್ನು ಓರ್ವ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು(Success) ಹೊಂದಬೇಕಾದರೆ ಅವನಲ್ಲಿ ಯಾವ ಗುಣಗಳಿರಬೇಕು ಹಾಗೂ ಹೇಗೆ ವರ್ತಿಸಬೇಕೆಂಬುದನ್ನು ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾನೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ವ್ಯಕ್ತಿಯೂ ಯಾವ ಗುಣಗಳನ್ನು ಹೊಂದಿರಬೇಕೆನ್ನುವುದನ್ನು ಚಾಣಕ್ಯ ವರ್ಣಿಸಿದ್ದಾನೆ. ಆಚಾರ್ಯ ಚಾಣಕ್ಯನ ತತ್ವಗಳಾವುವು ತಿಳಿದುಕೊಳ್ಳಿ.. ನಮ್ಮ ದಿನವನ್ನು ಚಾಣಕ್ಯನ ಯಾವ ನೀತಿಯಿಂದ ಆರಂಭಿಸಬೇಕು...? ಈ ತತ್ವಗಳ ಪ್ರಯೋಜನವೇನು..?


ಮೂರ್ಖರೊಂದಿಗೆ ವಾದ ಬೇಡ
ಚಾಣಕ್ಯನ ನೀತಿಯ ಪ್ರಕಾರ, ತಿಳಿವಳಿಕೆ ಇಲ್ಲದವರೊಂದಿಗೆ ವಾದಿಸುವುದು ಸಂಪೂರ್ಣ ವ್ಯರ್ಥ ಕೆಲಸವಾಗಿದ್ದು, ಜ್ಞಾನವೇ ಇಲ್ಲದ ವ್ಯಕ್ತಿಗಳಿಗೆ ನೀವು ಎಷ್ಟೇ ಸಮರ್ಥನೆ ನೀಡಿದರೂ, ಅವರು ಅದನ್ನು ಗ್ರಹಿಸುವುದಿಲ್ಲ, ಅವರೊಂದಿಗೆ ವಿಷಯ ವಿನಿಮಯ ಮಾಡಿಕೊಳ್ಳುವುದು ನಮ್ಮ ದಡ್ಡತನವಾಗುತ್ತದೆ. ಇಂತಹವರೊಂದಿಗೆ ವಾದಕ್ಕೆ ಇಳಿದರೆ ನಿಮ್ಮ ಮನ ಶಾಂತಿ ಹಾಳಾಗುತ್ತದೆ, ನಿಮ್ಮ ಗೌರವವೂ ಕಡಿಮೆಯಾಗುತ್ತದೆ. ಅವರು ನಿಮ್ಮ ಮನಸ್ಸನ್ನು ಕುಗ್ಗಿಸುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಇಂತಹವರೊಂದಿಗೆ ಮಾತನಾಡುವುದಕ್ಕಿಂತ ಮೌನದಿಂದ ಇರುವುದೇ ಉತ್ತಮ.

ಶ್ರದ್ಧೆಯಿಂದ ಪ್ರಯತ್ನಿಸಿದರೆ ಯಶಸ್ಸು ಖಚಿತ
ಚಾಣಕ್ಯನ ಪ್ರಕಾರ, ಯಶಸ್ಸಿನ ಎರಡನೆ ಮಂತ್ರವೆಂದರೆ ಶ್ರದ್ಧೆ. ಶ್ರದ್ಧೆಯಿಂದ ಪ್ರಯತ್ನಿಸಿದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ಯಶಸ್ಸು ನಿಮ್ಮ ಪಾಲಾಗುತ್ತದೆ. ಕಷ್ಟಪಟ್ಟರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎನ್ನುತ್ತಾನೆ ಚಾಣಕ್ಯ. ಸಾಧನೆ ಮಾಡಬೇಕೆಂಬ ಗುರಿ ಇರುವವರು ಯಾವಾಗಲೂ ತಮ್ಮ ಗುರಿಯ ಬಗ್ಗೆಯೇ ನಿರಂತರವಾಗಿ ಯೋಚಿಸುತ್ತಿರುತ್ತಾರೆ. ಹಗಲು ರಾತ್ರಿ ಎನ್ನದೇ ಆ ಗುರಿಯ ಸಾಕಾರಕ್ಕಾಗಿ ಶ್ರಮಿಸುತ್ತಿರುತ್ತಾರೆ. ಗುರಿಯನ್ನು ಸಾಧಿಸಲು, ವ್ಯಕ್ತಿಯು ಉತ್ಸಾಹ ಮತ್ತು ಸಮರ್ಪಣೆಯ ಭಾವನೆಯನ್ನು ಹೊಂದಿದ್ದಾಗ ಮಾತ್ರ ಯಶಸ್ಸನ್ನು ಪಡೆಯುವುದು ಸುಲಭವಾಗುತ್ತದೆ. ಆದ್ದರಿಂದ, ಶ್ರಮವಹಿಸಿ ಮತ್ತು ಗುರಿ ಸಾಧಿಸುವವರೆಗೆ ಕೆಲಸ ಮಾಡುವುದನ್ನು ಮುಂದುವರಿಸಿ. ಆಗ ಮಾತ್ರ ನೀವು ಜೀವನದಲ್ಲಿ ಯಶಸ್ಸನ್ನು ಸಾಧ್ಯ ಎನ್ನುತ್ತಾನೆ ಚಾಣಕ್ಯ.


ಈ ಸುದ್ದಿಯನ್ನು ಓದಿ: Vastu Tips: ವಾಸ್ತು ಪ್ರಕಾರ ತಿಜೋರಿ ಅಥವಾ ಬೀರುವನ್ನು ನಿಮ್ಮ ಮನೆಯ ಯಾವ ದಿಕ್ಕಿನಲ್ಲಿರಿಸಬೇಕು?


ಆತ್ಮವಿಶ್ವಾಸ ಇರಲಿ
ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದು ಯಶಸ್ಸಿನ ಮೊದಲ ಹೆಜ್ಜೆ ಎಂದು ಚಾಣಕ್ಯ ಹೇಳುತ್ತಾನೆ. ಆತ್ಮವಿಶ್ವಾಸವಿಲ್ಲದ ವ್ಯಕ್ತಿಯು ಯಾವಾಗಲೂ ತನ್ನನ್ನು ತಾನು ಇತರರಿಗಿಂತ ಕೀಳೆಂದು ಭಾವಿಸುತ್ತಾನೆ. ಸಾಧನೆ ಮಾಡಬೇಕೆಂಬ ಮನಸ್ಸುವುಳ್ಳ ವ್ಯಕ್ತಿಗಳಲ್ಲಿ ಎಂದಿಗೂ ಆತ್ಮವಿಶ್ವಾಸದ ಕೊರತೆ ಇರಬಾರದು. ಆತ್ಮವಿಶ್ವಾಸ ಕೊರತೆಯಿಂದಾಗಿ, ಒಬ್ಬ ವ್ಯಕ್ತಿಯು ಸಣ್ಣ ಯಶಸ್ಸನ್ನು ಪಡೆಯುವಲ್ಲಿ ಸಹ ಬಳಲುತ್ತಾನೆ.

ಉದಾಸೀನ ಗುಣವನ್ನು ತ್ಯಜಿಸಿ
ಇಂದಿನ ದಿನ ಮಾಡಬೇಕಾದ ಕೆಲಸವನ್ನು ಇಂದೇ ಮಾಡಿ, ಉದಾಸೀನದಿಂದ ಅದನ್ನು ನಾಳೆಗೆ ಮುಂದೂಡಬೇಡಿ. ಈ ರೀತಿ ಮಾಡುವವರು ತಡವಾಗಿ ಯಶಸ್ಸನ್ನು ಪಡೆಯುತ್ತಾರೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಇಂದಿನ ಕೆಲಸವನ್ನು ಇಂದೇ ಪೂರ್ಣಗೊಳಿಸುವ ಛಲವನ್ನು ಮನುಷ್ಯನು ಹೊಂದಿರಬೇಕು. ಆಗ ಮಾತ್ರ ಆ ವ್ಯಕ್ತಿ ಯಶಸ್ಸನ್ನು ಸಾಧಿಸಲು ಸಾಧ್ಯ.

ಚಾಣಕ್ಯ ನೀತಿಯಲ್ಲಿನ ಈ ಮೇಲಿನ ಅಂಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸನ್ನು ಸಾಧಿಸಬಹುದು. ಯಶಸ್ಸು ನಮ್ಮದಾಗಬೇಕೆಂದಿದ್ದರೆ ಮೊದಲು ನಾವು ಮಾಡಲು ಹೊರಟ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತೇನೆ ಎನ್ನುವ ದೃಢವಾದ ಆತ್ಮವಿಶ್ವಾಸ ಇರಬೇಕು. ನಂತರ ನಮ್ಮ ಯಶಸ್ಸಿನತ್ತ ಕಠಿಣ ಪರಿಶ್ರಮವಿರಬೇಕು.