ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಪ್ರಕಾರ ತಿಜೋರಿ ಅಥವಾ ಬೀರುವನ್ನು ನಿಮ್ಮ ಮನೆಯ ಯಾವ ದಿಕ್ಕಿನಲ್ಲಿರಿಸಬೇಕು?

Best Direction to Place Your Biru: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರು ಯಾವ ದಿಕ್ಕಿಗೆ ಇಡಬೇಕು? ಯಾವ ದಿಕ್ಕಿಗೆ ಇಟ್ಟರೆ ಶುಭ ಯಾವ ದಿಕ್ಕು ಸರಿ ಅಂತ ಗೊಂದಲ ಇದ್ದೀಯಾ...? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದ್ದು, ಮನೆಯಲ್ಲಿ ಸಮೃದ್ಧಿ ಹೆಚ್ಚಳ ಆಗಬೇಕು ಅಂದ್ರೆ ಈ ನಿಯಮ ಪಾಲಿಸಿ.

ಮನೆಯಲ್ಲಿ ಬೀರು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?

ಸಾಂದರ್ಭಿಕ ಚಿತ್ರ -

Profile
Sushmitha Jain Nov 16, 2025 9:00 AM

ಬೆಂಗಳೂರು: ವಾಸ್ತು ಶಾಸ್ತ್ರ(Vastu Shastra) ಎಂಬುದು ಪ್ರಾಚೀನರು ನಮಗೆ ಕೊಟ್ಟಿರುವ ಅಮೂಲ್ಯವಾದ ಕೊಡುಗೆ. ನಮ್ಮ ಜೀವನದಲ್ಲಿ ಮತ್ತು ಕುಟುಂಬದಲ್ಲಿ ಸುಖ, ಶಾಂತಿ ನೆಮ್ಮದಿ ಮತ್ತು ಸಂಪತ್ತು ನೆಲೆಸಿರಬೇಕಾದರೆ ನಮ್ಮ ಮನೆ ಮತ್ತು ಅಲ್ಲಿರುವ ವಸ್ತುಗಳು ಸರಿಯಾದ ದಿಕ್ಕಿನಲ್ಲಿ ಇರುವುದು ಅಗತ್ಯ. ಇದನ್ನೇ ವಾಸ್ತು ಎನ್ನುತ್ತೇವೆ.

ಇತ್ತೀಚಿನ ದಿನಗಳಲ್ಲಿ ವಾಸ್ತು ಎಂಬುದು ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ. ಆದರೆ ಸರಿಯಾದ ವಾಸ್ತು ಸಲಹೆಗಳನ್ನು ಪಾಲಿಸಿ ಅನುಸರಿಸುವುದು ಕಷ್ಟದ ಕೆಲಸವೇ ಸರಿ. ಮುಖ್ಯವಾಗಿ ನಮ್ಮ ಮನೆಯ ಬಾಗಿಲು ಮತ್ತು ಸಂಪತ್ತಿನ ಮೂಲವಾಗಿರುವ ಕಪಾಟು ಅಥವಾ ಬೀರನ್ನು ಹಾಗೂ ದೇವರ ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದು ಬಹಳ ಪ್ರಮುಖವಾದುದಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಹಣವನ್ನು ಯಾವ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಹಣವನ್ನು ಇಡುತ್ತೇವೆ? ಎನ್ನುವುದರ ಆಧಾರದ ಮೇಲೆ ಸಂತೋಷ ಹಾಗೂ ಸಮೃದ್ಧಿಯು ವೃದ್ಧಿಯಾಗುವುದು. ಜೀವನದಲ್ಲಿ ಎಂದಿಗೂ ಹಣದ ಕೊರತೆಯಾಗಬಾರದು, ವ್ಯಾಪಾರ ಮತ್ತು ವೃತ್ತಿಯಲ್ಲಿ ನಿರಂತರವಾಗಿ ಹಣದ ಹರಿವು ಇರಬೇಕು ಎಂದರೆ ಕೆಲವು ನಿಯಮಗಳನ್ನು ಅನುಸರಿಸಬೇಕು.

ಇಂದಿನ ಈ ಲೇಖನದಲ್ಲಿ ನಾವು ಬೀರುವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕೆಂಬುದನ್ನು ನೋಡೋಣ.

ನಮ್ಮ ಮನೆಯಲ್ಲಿ ಧನ-ಕನಕಗಳನ್ನು ಇರಿಸುವ ಬೀರುವನ್ನು ಯಾವ ದಿಕ್ಕಿಗೆ ಮುಖಮಾಡಿ ಇರಿಸಿದರೆ ಸೂಕ್ತ ಎಂಬ ವಿಚಾರದಲ್ಲಿ ಹಲವು ನಿಯಮಗಳಿವೆ. ಇದನ್ನು ಮೀರಿ ತಪ್ಪು ದಿಕ್ಕಿನಲ್ಲಿ ಬೀರುವನ್ನು ಇರಿಸಿದರೆ ಆ ಮನೆಯಲ್ಲಿ ವಾಸಿಸುವವರು ದುಃಖ ಮತ್ತು ನಕಾರಾತ್ಮಕ ಭಾವನೆಯನ್ನು ಎದುರಿಸಬೇಕಾಗುತ್ತದೆ.

ಈ ಸುದ್ದಿಯನ್ನು ಓದಿ: Vastu Tips: ದೇವರ ಮನೆಯಲ್ಲಿ ಈ ವಸ್ತು ಇದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ

ಹಾಗಾದ್ರೆ ಬೀರುವನ್ನು ಯಾವ ದಿಕ್ಕಿನಲ್ಲಿ ಇರಿಸಿದರೆ ಸೂಕ್ತ ಎಂಬ ಪ್ರಶ್ನೆಗೆ ಉತ್ತರಿಸುವುದಾದ್ರೆ, ಬೀರುವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು. ಯಾಕಂದ್ರೆ ಸಾಮಾನ್ಯವಾಗಿ ಈ ದಿಕ್ಕುಗಳನ್ನು ಮಂಗಳಕರ ದಿಕ್ಕೆಂದು ಪರಿಗಣಿಸಲಾಗುತ್ತದೆ ಮಾತ್ರವಲ್ಲದೇ ಇದು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಿ, ಧನಾತ್ಮಕ ಶಕ್ತಿಯನ್ನು ಸೃಜಿಸುತ್ತದೆ ಎಂಬ ನಂಬಿಕೆಯಿದೆ. ಬೀರುವಿನ ಮೇಲೆ ಕನ್ನಡಿಯಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇನ್ನು, ಯಾವುದೇ ಕಾರಣಕ್ಕೂ ಬೀರುವನ್ನು ಈಶಾನ್ಯ ದಿಕ್ಕಿಗೆ ಇರಿಸಬಾರದು, ಇದರಿಂದ ಹಣದ ಕೊರತೆ ಎದುರಾಗಬಹುದು. ನೀವು ನಿಮ್ಮ ಲಾಕರ್ ಅಥವಾ ಬೀರುವಿನ ಮುಖವನ್ನು ಉತ್ತರ ಅಥವಾ ಪಶ್ಚಿಮದ ಕಡೆ ತೆರೆದಿಡಬೇಕು, ಆಗ ನಿಮ್ಮ ತಿಜೋರಿಯ ಬಾಗಿಲು ಪೂರ್ವಕ್ಕೆ ತೆರೆದುಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಆ ಮನೆಯಲ್ಲಿ ಸದಾ ಅದೃಷ್ಟಲಕ್ಷ್ಮೀ ನೆಲೆಸಿರುತ್ತಾಳೆ.

ಮಲಗುವ ಕೋಣೆಯಲ್ಲಿ ವಾರ್ಡ್ ರೋಬ್ ಇರಿಸುವ ಸಂದರ್ಭದಲ್ಲಿ ಗೋಡೆಯೊಂದಿಗೆ ಸಂಪರ್ಕ ಇರದ ರೀತಿಯಲ್ಲಿ ಇರಿಸಬೇಕು. ಸ್ವಚ್ಛವಾದ ಸ್ಥಳದಲ್ಲಿ ಬೀರುವನ್ನು ಇರಿಸಿ. ಬೀರುವನ್ನು ಎಂದಿಗೂ ಖಾಲಿಯಾಗಿರಲು ಬಿಡಬೇಡಿ, ಅದರಲ್ಲಿ ಸ್ವಲ್ಪ ಹಣ ಮತ್ತು ಚಿನ್ನಾಭರಣವನ್ನು ಇರಿಸಿರಬೇಕು. ವಾಸ್ತು ಪ್ರಕಾರ ಕಬ್ಬಿಣ ಅಥವಾ ಮರದಿಂದ ಮಾಡಲ್ಪಟ್ಟ ಬೀರುವನ್ನು ಬಳಸುವುದು ಶ್ರೇಯಸ್ಕರ.