ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanakya Niti: ಜೀವನದಲ್ಲಿ ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬೇಡಿ

ಚಾಣಕ್ಯ ನೀತಿಯ ಪ್ರಕಾರ, ಎಲ್ಲರಿಗೂ ಸಲಹೆ ಹಾಗೂ ಸಹಾಯ ನೀಡುವುದು ಸೂಕ್ತವಲ್ಲವಂತೆ...ಹೀಗೆ ಕೇಳಿದವರಿಗೆಲ್ಲ ಸಹಾಯ ಹಸ್ತ ಚಾಚುವುದು ನಿಮಗೆ ಮುಳ್ಳಾಗಬಹುದು ಎಂದು ಚಾಣಕ್ಯ ಹೇಳಿದ್ದು, ನಾವು ಜೀವನದಲ್ಲಿ ಎಂತಹ ಜನರಿಗೆ ಸಹಾಯ ಮಾಡಬಾರದು ಎಂಬುದನ್ನು ಸಹ ವಿವರಿಸಿದ್ದಾರೆ. ಹಾಗಿದ್ದರೆ ಚಾಣಕ್ಯ ಪ್ರಕಾರ ಯಾರಿಗೆ ಸಹಾಯ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ:

ಈ ಗುಣವುಳ್ಳವರು ನಿಮ್ಮ ಸಹಾಯಕ್ಕೆ ಯೋಗ್ಯರಲ್ಲ

ಚಾಣಕ್ಯ -

Profile
Sushmitha Jain Dec 9, 2025 7:00 AM

ಬೆಂಗಳೂರು: ಸಾಮಾನ್ಯವಾಗಿ ಎಲ್ಲರಿಗೂ ಜೀವನದಲ್ಲಿ ಸಮಸ್ಯೆಗಳು, ತೊಂದರೆ - ತಾಪತ್ರಯಗಳು ಬಂದೇ ಬರುತ್ತವೆ. ಇಂತಹ ಕಠಿಣ ಸಮಯದಲ್ಲಿ ಎದುರಾಗುವ ಸಂಕಷ್ಟಗಳ ಸಂಕೋಲೆಯಿಂದ ಹೊರಬರಲು ಯಾರ ಹತ್ತಿರ ಸಹಾಯ ಯಾಚಿಸೋದು, ನೆರವು ಕೇಳೋದು ಎಂಬ ಚಿಂತೆ ವಿಚಿತ್ರ ಚಿತ್ರವಾಗಿ ಕಾಡುತ್ತಲೇ ಇರುತ್ತದೆ. ಈ ವೇಳೆ ನಮಗೆ ನೆನಪಾಗೋದು ನಮ್ಮ ಆಪ್ತರು, ಗೆಳೆಯರು ಹಾಗೂ ಹಿತೈಷಿಗಳು. ಇವರು ನಮ್ಮ ಸಮಸ್ಯೆಗಳನ್ನು ಪರಿಹಾರಿಸುತ್ತಾರೆ ಎಂಬ ಧೈರ್ಯ - ವಿಶ್ವಾಸ ಇದ್ದೇ ಇರುತ್ತದೆ. ಕೆಲವರು ತಮ್ಮ ಅನುಭವದಿಂದ, ಸರಳ ಮನಸ್ಸಿನಿಂದ, ಕೇಳಿದವರಿಗೆ ಮಾತ್ರವಲ್ಲ, ಕೇಳದೇ ಇದ್ದರೂ ಸಹ ಸಲಹೆ ನೀಡುತ್ತಾರೆ. ಇಂತಹ ವ್ಯಕ್ತಿಗಳು ಹೃದಯವಂತರು, ಸಹಾಯ ಮಾಡಲು ಸದಾ ಸಿದ್ಧರಾಗಿರುವವರು. ಅವರ ಸುತ್ತಲೂ ಜನರು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಯಾವಾಗಲೂ ಇದ್ದೇ ಇರುತ್ತಾರೆ.. ಆದರೆ ಚಾಣಕ್ಯ ನೀತಿಯ(Chanakya Niti) ಪ್ರಕಾರ, ಎಲ್ಲರಿಗೂ ಸಲಹೆ ಹಾಗೂ ಸಹಾಯ ನೀಡುವುದು ಸೂಕ್ತವಲ್ಲ.

ಹೀಗೆ ಕೇಳಿದವರಿಗೆಲ್ಲಾ ಸಹಾಯ ಹಸ್ತ (Helping) ಚಾಚುವುದು ನಿಮಗೇ ಮುಳ್ಳಾಗಬಹುದು ಎಂದು ಚಾಣಕ್ಯ ಹೇಳುತ್ತಾರೆ. ಯಾಕೆಂದರೆ ಜಗತ್ತಿನಲ್ಲಿ ಇರುವ ಕೆಲವು ಜನರು ಅವರಿಗೆ ಸಮಸ್ಯೆ ಇದ್ದಾಗ ಸಲಹೆ -ಸಹಾಯ ಕೇಳುತ್ತಾರೆ. ಆದರೆ ಸಮಸ್ಯೆ ಬಗೆಹರಿಯದಿದ್ದರೆ ಅಥವಾ ಅವರಿಗೆ ಅಂದುಕೊಂಡಿದ್ದ ಫಲಿತಾಂಶ ಸಿಗದಿದ್ದರೆ ತಪ್ಪನ್ನು ಸಲಹೆ ನೀಡಿದವರ ಮೇಲೆಯೇ ಹಾಕುತ್ತಾರೆ. ಈ ಕಾರಣಕ್ಕಾಗಿಯೇ ಆಚಾರ್ಯ ಚಾಣಕ್ಯ (Chanakya) ಸಹಾಯ ನೀಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಕೇವಲ ಯೋಗ್ಯರಿಗಷ್ಟೇ ನಿಮ್ಮ ಮಾರ್ಗದರ್ಶನ ಸಿಗಲಿ ಎಂದು ಹೇಳಿದ್ದಾರೆ.

ಚಾಣಕ್ಯ ನೀತಿಯ ಪ್ರಕಾರ, ತಪ್ಪು ನಿರ್ಧಾರ ತೆಗೆದುಕೊಂಡಾಗ ಜವಾಬ್ದಾರಿ ಹೊರದ, ಇತರರ ಮೇಲೆ ದೂರನ್ನು ಹಾಕುವ ಸ್ವಭಾವದವರು ಅತ್ಯಂತ ಅಪಾಯಕಾರಿ. ಅವರು ಸಂಕಷ್ಟಕ್ಕೆ ತಮ್ಮ ತಪ್ಪನ್ನು ಪರಿಗಣಿಸುವ ಬದಲು-ಸಲಹೆ ನೀಡಿದವನೇ ಕಾರಣ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ.

ಹಾಗಾಗಿ ಚಾಣಕ್ಯ ಪ್ರಕಾರ ಸಲಹೆ ನೀಡುವುದು ಒಳ್ಳೆಯ ಗುಣ ಆದರೂ, ಅದನ್ನು ಯಾರು ಕೇಳುತ್ತಿದ್ದಾರೆ ಮತ್ತು ಅವರು ಆ ಸಹಾಯನ್ನ ಪಡೆದುಕೊಳ್ಳಲು ಅರ್ಹರೇ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಮನೆಯ ಸಂತೋಷ, ಸಂಪತ್ತು ವೃದ್ಧಿಯಾಗಬೇಕಾ? ಅರಿಶಿನವನ್ನು ಹೀಗೆ ಬಳಸಿ

ಮಾದಕ ವ್ಯಸನಿಗಳು

ಚಾಣಕ್ಯ ಪ್ರಕಾರ, ಡ್ರಗ್ಸ್ ಅಥವಾ ಅಮಲು ಪದಾರ್ಥಗಳಿಗೆ ಒಳಗಾದ ವ್ಯಕ್ತಿಗಳನ್ನು ನಂಬುವುದು ಕಷ್ಟ. ಇಂತಹವರು ಸದಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಇವರ ದುರಾಭ್ಯಾಸಕ್ಕಾಗಿ ಹಣವನ್ನು ವ್ಯಯಿಸುವುದಲ್ಲದೇ ಅಸಭ್ಯ ವರ್ತನೆಯಿಂದ ಇತರರಿಗೂ ತೊಂದರೆ ಕೊಡುತ್ತಾರೆ. ಅವರ ಮನಸ್ಥಿತಿ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಇಂತಹವರಿಗೆ ಸಹಾಯ ಮಾಡಿದರೂ ಯಾವುದೇ ಫಲ ದೊರಯುವುದಿಲ್ಲ.

ಅತೃಪ್ತ ಮನೋಭಾವದವರು

ಜೀವನದಲ್ಲಿ ತೃಪ್ತಿ ಬಹಳ ಮುಖ್ಯ. ಆದರೆ ಯಾವುದು ನೀಡಿದರೂ, ಏನೇ ಸಿಕ್ಕಿದರೂ ಸಮಾಧಾನ ಇರುವುದಿಲ್ಲ...ಅಂತವರು ಯಾವಾಗಲೂ ಅತೃಪ್ತ ಮನೋಭಾವದಿಂದ ಇರುತ್ತಾರೆ. ಈ ಸ್ವಭಾವವುಳ್ಳವವರು ಎಂದಿಗೂ ಸಂತೋಷಪಡುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಇವರಿಗೆ ಎಷ್ಟು ಸಹಾಯ ಮಾಡಿದರೂ ಅಸಮಾಧಾನವೇ. ಇವರು ತಮ್ಮ ಸ್ಥಿತಿಗೆ ಇತರರನ್ನೇ ಹೊಣೆ ಮಾಡುತ್ತಾ ಬದುಕುತ್ತಾರೆ. ಇಂತಹವರಿಗೆ ನೆರವಾಗಿ ಪ್ರಯೋಜನವಿಲ್ಲ ಎಂಬುದು ಚಾಣಕ್ಯ ಅವರ ಸಲಹೆ.

ಕೆಟ್ಟ ಸ್ವಭಾವದವರು

ದುಷ್ಟ ಗುಣಗಳುಳ್ಳವರಿಂದ ದೂರವಿರುವುದು ಉತ್ತಮ. ಇವರಿಗೆ ಸಮಾಜದಲ್ಲಿ ಗೌರವ ಕಡಿಮೆ, ಕೆಲವೊಮ್ಮೆ ಇತರರ ಘನತೆಯನ್ನೂ ಹಾಳು ಮಾಡುವರು. ಇಂತಹ ಜನರಿಗೆ ಸಹಾಯ ಮಾಡುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಸ್ವಾರ್ಥಿಗಳು

ಸ್ವಾರ್ಥ ಮತ್ತು ದುರಾಸೆಗೆ ಮಿತಿ ಇಲ್ಲ. ಸ್ವಾರ್ಥಿಗಳು ತಮ್ಮ ಲಾಭಕ್ಕಾಗಿ ಮಾತ್ರ ಯೋಚಿಸುತ್ತಾರೆ. ತೊಂದರೆಯಲ್ಲಿದ್ದಾಗ ಇತರರನ್ನು ಬಳಸಿಕೊಳ್ಳುವ ಗುಣ ಇವರದ್ದು. ಇಂತಹವರಿಗೆ ಸಹಾಯ ಮಾಡಿದರೂ ಅವರು ಕೃತಜ್ಞರಾಗುವುದಿಲ್ಲ. ಚಾಣಕ್ಯ ಇಂತಹ ವ್ಯಕ್ತಿಗಳಿಂದ ಸಂಪೂರ್ಣ ದೂರವಿರಲು ಸಲಹೆ ನೀಡುತ್ತಾರೆ.