ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Tradition: ಮಕ್ಕಳಿಗೆ ತಿಳಿಸಿಕೊಡಲೇಬೇಕಾದ ಭಾರತೀಯ ಸಂಪ್ರದಾಯಗಳಿವು

Indian Tradition: ಭಾರತೀಯ ಸಂಪ್ರದಾಯ ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದೆ. ಆದರೆ ನಿಧಾನವಾಗಿ ಭಾರತೀಯ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ ಮರೆಯಾಗುತ್ತಿದೆ. ಹೀಗಾಗಿ ಇದನ್ನು ಮುಂದಿನ ತಲೆಮಾರಿಗೆ ದಾಟಿಸಲು, ಮಕ್ಕಳಿಗೆ ನಾವು ತಿಳಿಸಿಕೊಡಲೇಬೇಕಾದ ಸಂಪ್ರದಾಯಗಳು ಯಾವುವು ಎನ್ನುವ ವಿವರ ಇಲ್ಲಿದೆ.

ಮಕ್ಕಳಿಗೆ ತಿಳಿಸಿಕೊಡಲೇಬೇಕಾದ ಭಾರತೀಯ ಸಂಪ್ರದಾಯಗಳಿವು

ಸಾಂದರ್ಭಿಕ ಚಿತ್ರ.

Profile Ramesh B Mar 10, 2025 6:00 AM

ಬೆಂಗಳೂರು: ಸಾವಿರಾರು ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ವೈವಿಧ್ಯತೆಯಲ್ಲಿ ಏಕತೆ ಕಂಡುಬರುವ ಇಲ್ಲಿನ ಜೀವನ ಶೈಲಿ, ಆಚಾರ-ವಿಚಾರ, ಸಂಪ್ರದಾಯ ಬೇರೆಲ್ಲೂ ಕಂಡುಬರಲು ಸಾಧ್ಯವಿಲ್ಲ (Indian Tradition). ಅದರಲ್ಲಿಯೂ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ವೈಜ್ಞಾನಿಕತೆ ಸಮ್ಮಿಳಿತವಾಗಿದೆ ಎನ್ನುವುದು ವಿಶೇಷ. ಆದರೆ ಬೇಸರದ ಸಂಗತಿ ಎಂದರೆ ನಿಧಾನವಾಗಿ ಭಾರತೀಯ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ ಮರೆಯಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಭರಾಟೆಗೆ ಸಿಲುಕಿ ಇಂದಿನ ತಲೆಮಾರು ಅಂಧಾನುಕರಣೆಯಲ್ಲಿ ತೊಡಗಿದೆ ಎನ್ನುವುದು ಹಿರಿಯರ ನೋವಿನ ಮಾತು.

ಭಾರತೀಯ ಸಂಸ್ಕೃತಿಯು ಮೌಲ್ಯಗಳು ಮತ್ತು ಸಂಪ್ರದಾಯಗಳಿಂದ ಸಮೃದ್ಧವಾಗಿದೆ. ಯಾರು ಯಾವ ರೀತಿ ಬದುಕಬೇಕು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಗಳು ಯಾವುವು, ಯಾವೆಲ್ಲ ಶಿಸ್ತು ರೂಢಿಸಿಕೊಳ್ಳಬೇಕು ಎನ್ನುವುದನ್ನು ಇದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಬಗ್ಗೆ ನಾವು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಅರಿವು ಮೂಡಿಸಬೇಕು ಎನ್ನುತ್ತಾರೆ ಹಿರಿಯರು. ಮಕ್ಕಳಿಗೆ ತಿಳಿಸಿ ಕೊಡಲೇಬೇಕಾದ ಭಾರತೀಯ ಸಂಪ್ರದಾಯಗಳು ಯಾವುವು ಎನ್ನುವ ವಿವರ ಇಲ್ಲಿದೆ.

ನಮಸ್ಕಾರ

ಭಾರತೀಯ ಸಂಸ್ಕೃತಿಯಲ್ಲಿ ಇತರರಿಗೆ ಗೌರವ ಕೊಡುವುದನ್ನು ಮುಖ್ಯವಾಗಿ ಹೇಳಿ ಕೊಡಲಾಗುತ್ತದೆ. ಇದಕ್ಕಾಗಿ ನಿಮ್ಮ ಮಕ್ಕಳಿಗೆ ಎದುರಿಗೆ ಸಿಕ್ಕವರಿಗೆ, ಹಿರಿಯರಿಗೆ ನಮಸ್ಕರಿಸುವುದನ್ನು ಕಲಿಸಿಕೊಡಿ. ನಮಸ್ಕಾರ ಎಂದು ಹೇಳುವುದರಿಂದ ಎದುರಿಗೆ ಸಿಕ್ಕವರ ಮನಸ್ಸು ಕೂಡ ಅರಳುತ್ತದೆ. ನಮಸ್ಕಾರ ಎನ್ನುವುದು ಮಾನವೀಯತೆಯ, ಧನಾತ್ಮಕತೆಯ ಸಂಕೇತ ಎನಿಸಿಕೊಂಡಿದೆ. ಹೀಗಾಗಿ ಅಭ್ಯಾಸವನ್ನು ಮಕ್ಕಳಲ್ಲಿ ರೂಢಿಸಿ.

ಈ ಸುದ್ದಿಯನ್ನೂ ಓದಿ: Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಗಿಡವಿದ್ದರೆ ಸಂಪತ್ತನ್ನು ಆಕರ್ಷಿಸುವುದು

ಕೈಯಲ್ಲೇ ತಿನ್ನುವುದನ್ನು ಹೇಳಿಕೊಡಿ

ಹಿರಿಯರು ಯಾವುದೇ ಆಹಾರವನ್ನು ಕೈಯಲ್ಲೇ ಸೇವಿಸುತ್ತಿದ್ದರು. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇಲ್ಲದಿಲ್ಲ. ಕೈಯಲ್ಲೇ ಆಹಾರ ಸೇವಿಸುವಿದರಿಂದ ಜೀರ್ಣ ಕ್ರಿಯೆ ಸರಾಗವಾಗುತ್ತದೆ, ಆಹಾರದೊಂದಿಗಿನ ನಮ್ಮ ಸಂಬಂಧ ಇನ್ನಷ್ಟು ಗಾಢವಾಗುತ್ತದೆ ಎನ್ನುತ್ತಾರೆ ಹಿರಿಯರು. ಹೀಗಾಗಿ ಸ್ಪೂನ್‌, ಫೋರ್ಕ್‌ ಬಿಟ್ಟು ಕೈಯಲ್ಲೇ ಆಹಾರ ಸೇವಿಸುವುದನ್ನು ಮಕ್ಕಳಿಗೆ ಹೇಳಿಕೊಡಿ.

ಪ್ರಕೃತಿಗೆ ಗೌರವ

ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಗೆ ಬಹುಮುಖ್ಯ ಸ್ಥಾನವಿದೆ. ಪ್ರಕೃತಿಯನ್ನು ದೇವರಂತೆ ಪೂಜಿಸುವ ಸಂಪ್ರದಾಯ ನಮ್ಮದು. ಹೀಗಾಗಿ ಮಕ್ಕಳಿಗೆ ಪ್ರಕೃತಿಯ ಮಹತ್ವ ತಿಳಿಸಿ. ಅದು ನಮ್ಮ ಬದುಕಿಗೆ ಹೇಗೆ ಅನಿವಾರ್ಯ ಎನ್ನುವುದನ್ನು ಹೇಳಿಕೊಡಿ. ಸಸ್ಯ, ನದಿ, ಗಾಳಿ, ಪ್ರಾಣಿ, ಪಕ್ಷಿ, ಕೀಟಗಳನ್ನೊಳಗೊಂಡ ಪ್ರಕೃತಿಯ ಸಂಪರ್ಕಕ್ಕೆ ಮಕ್ಕಳನ್ನು ತನ್ನಿ. ಗಿಡ ನೆಡುವುದು, ಗಿಡಗಳಿಗೆ ನೀರುಣಿಸುವುದು ಮುಂತಾದ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ.

ಹಿರಿಯರಿಗೆ ಗೌರವ

ಹಿರಿಯರನ್ನು ಗೌರವಿಸುವುದು ಮುಖ್ಯ. ಇದು ಕೂಡ ಭಾರತೀಯ ಸಂಪ್ರದಾಯದ ಮುಖ್ಯ ಅಂಗ ಎನಿಸಿಕೊಂಡಿದೆ. ಮನೆಯಲ್ಲೇ ಇದನ್ನು ಹೇಳಿಕೊಡಿ. ಹಿರಿಯರೊಂದಿಗೆ ಯಾವ ರೀತಿ ಮಾತನಾಡಬೇಕು, ಯಾವ ರೀತಿ ವರ್ತಿಸಬೇಕು ಎನ್ನುವುದನ್ನು ಚಿಕ್ಕಂದಿನಿಂದಲೇ ತಿಳಿಸಿಕೊಡಿ.

ಹಬ್ಬಗಳ ಆಚರಣೆ

ಭಾರತೀಯ ಸಂಸ್ಕೃತಿಯ ಹೆಗ್ಗುರುತೇ ಹಬ್ಬಗಳು. ಇಲ್ಲಿ ಹಲವು ಹಬ್ಬಳಿದ್ದರೂ ಒಂದಕ್ಕಿಂತ ಒಂದು ಭಿನ್ನ. ಆಚರಣೆಯೂ ವ್ಯತ್ಯಸ್ತವಾಗಿರುತ್ತದೆ. ಹೀಗಾಗಿ ಹಬ್ಬದ ಆಚರಣೆಯಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳಿ. ಚಿಕ್ಕಪುಟ್ಟ ಕೆಲಸದಲ್ಲಿ ಅವರನ್ನೂ ತೊಡಗಿಸಿಕೊಳ್ಳುವ ಮೂಲಕ ಆಸಕ್ತಿ ಮೂಡಿಸಿ. ಜತೆಗೆ ಹಬ್ಬದ ಮಹತ್ವವೇನು? ಹಿನ್ನೆಲೆ ಏನು? ಯಾಕಾಗಿ ಆಚರಿಸಬೇಕು ಎನ್ನುವುದನ್ನು ತಿಳಿಸಿಕೊಡಿ.

ಅತಿಥಿ ದೇವೋಭವ

ಇದು ಕೂಡ ಭಾರತೀಯ ಸಂಸ್ಕೃತಿಯ ಮುಖ್ಯ ಭಾಗ. ಅತಿಥಿಗಳನ್ನು ದೇವರಂತೆ ಪರಿಗಣಿಸಿ ಅವರಿಗೆ ಸೂಕ್ತ ಗೌರವ ನೀಡಬೇಕು ಎನ್ನುತ್ತಾರೆ ಹಿರಿಯರು. ಅತಿಥಿಗಳ ಮುಂದೆ ಹೇಗೆ ವರ್ತಿಸಬೇಕು, ಅವರನ್ನು ಹೇಗೆ ಆದರಿಸಬೇಕು ಎನ್ನುವುದನ್ನು ತಿಳಿಸಿಕೊಡಿ.

ಕಾಲು ತುಳಿದರೆ ನಮಸ್ಕರಿಸುವುದನ್ನು ಹೇಳಿಕೊಡಿ

ಯಾರಿಗಾದರೂ ಅಪ್ಪಿ ತಪ್ಪಿ ತುಳಿದರೆ ಸಾರಿ ಎಂದು ಹೇಳಿ ಅವರ ಕೈ ಸ್ಪರ್ಶಿಸಿ ನಮಸ್ಕರಿಸುವುದನ್ನು ಮಕ್ಕಳಿಗೆ ತಿಳಿಸಿ. ಅಲ್ಲದೆ ಪುಸ್ತಕ, ಪೇಪರ್‌ ಇತ್ಯಾದಿ ವಸ್ತುಗಳನ್ನು ತುಳಿಯದಂತೆ ತಿಳಿಸಿ. ಆಕಸ್ಮಿಕವಾಗಿ ಕಾಲು ಸೋಕಿದರೆ ನಮಸ್ಕಾರ ಮಾಡುವುದನ್ನು ಹೇಳಿಕೊಡಿ.