ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಗಿಡವಿದ್ದರೆ ಸಂಪತ್ತನ್ನು ಆಕರ್ಷಿಸುವುದು

ಬಿದಿರಿನ ಮನೆಯೊಳಗೆ ಇದ್ದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಗೂ ಈ ಸಸ್ಯಕ್ಕೂ ಸಂಬಂಧವಿದೆ. ಆದ್ದರಿಂದ ಇದನ್ನು ಮನೆಯಲ್ಲಿ ಬೆಳೆಸುವುದರಿಂದ ಸಂಪತ್ತು ಬರುತ್ತದೆ. ಹಾಗಾದ್ರೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಬಿದಿರಿನ ಗಿಡಗಳನ್ನು ನೆಟ್ಟರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಹಣದ ಕೊರತೆ ಇರುವುದಿಲ್ಲ ಎಂದು ತಿಳಿಯೋಣ

ಅದೃಷ್ಟದ ಬಿದಿರಿನ ಗಿಡ ಮನೆಯಲ್ಲಿ ಎಲ್ಲಿ ಇಡಬೇಕು..?

ಬಿದಿರಿನ ಗಿಡ

Profile Sushmitha Jain Mar 8, 2025 8:23 AM

ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ, ಮನೆಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಬೆಳೆಸುವುದರಿಂದ ಅವು ಆರ್ಥಿಕ ಸಮೃದ್ಧಿಯನ್ನು ತರುತ್ತವೆ ಮತ್ತು ವ್ಯಕ್ತಿಯ ಜೀವನದಲ್ಲಿ ಅಪಾರ ಪ್ರಗತಿಯನ್ನು ಉಂಟುಮಾಡುತ್ತವೆ. ವಾಸ್ತು ಶಾಸ್ತ್ರದಲ್ಲಿ ಅನೇಕ ಮಂಗಳಕರ ಸಸ್ಯಗಳ ಬಗ್ಗೆ ತಿಳಿಸಲಾಗಿದೆ.ವಾಸ್ತು ಶಾಸ್ತ್ರದ ಪ್ರಕಾರ, ಮರಗಳನ್ನು ನೆಡುವುದು ಲಕ್ಷ್ಮಿ ದೇವಿ(Lakshmi Devi)ಯನ್ನು ಮೆಚ್ಚಿಸುತ್ತದೆ. ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ನೆಡುವುದರಿಂದ ಪರಿಸರವು ಉತ್ತಮವಾಗಿ ಉಳಿಯುತ್ತದೆ, ಜೊತೆಗೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.

ಇದರರ್ಥ ಅಂಥ ನಿವಾಸದ ಆರ್ಥಿಕ ಸ್ಥಿತಿಯು ಯಾವಾಗಲೂ ಉತ್ತಮವಾಗಿರುತ್ತದೆ. ಅಂತಹ ಗಿಡಗಳಲ್ಲಿ ಬಿದಿರಿನ ಗಿಡ ಕೂಡ ಒಂದಾಗಿದ್ದು, ಈ ಸಸ್ಯ ಮನೆಯೊಳಗೆಇದ್ದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಗೂ ಈ ಸಸ್ಯಕ್ಕೂ ಸಂಬಂಧವಿದೆ. ಆದ್ದರಿಂದ ಇದನ್ನು ಮನೆಯಲ್ಲಿ ಬೆಳೆಸುವುದರಿಂದ ಸಂಪತ್ತು ಬರುತ್ತದೆ. ಹಾಗಾದ್ರೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಬಿದಿರಿನ ಗಿಡಗಳನ್ನು ನೆಟ್ಟರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಹಣದ ಕೊರತೆ ಇರುವುದಿಲ್ಲ ಎಂದು ತಿಳಿಯೋಣ.
ಈ ಗಿಡ ಇಡಲು ಉತ್ತಮ ದಿಕ್ಕು ಯಾವುದು?
ನೀವು ಮನೆ ಬಿದಿರಿನ ಗಿಡವನ್ನು ನೆಡಲು ಬಯಸಿದರೆ, ಇದಕ್ಕೆ ಉತ್ತಮ ದಿಕ್ಕು ಪೂರ್ವ. ಈ ದಿಕ್ಕಿನಲ್ಲಿ ಬಿದಿರಿನ ಗಿಡ ನೆಟ್ಟರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಇದರೊಂದಿಗೆ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ವಾಸ್ತು ಪ್ರಕಾರ 2 ರಿಂದ 3 ಅಡಿ ಎತ್ತರಕ್ಕೆ ಬೆಳೆಯುವ ಬಿದಿರು ಗಿಡಗಳು ಶುಭ. ಮನೆಯಲ್ಲಿ ಬಿದಿರಿನ ಗಿಡವನ್ನು ನೆಡುವುದರಿಂದ ಪರಿಸರವನ್ನು ಉತ್ತಮವಾಗಿಡುತ್ತದೆ. ಅದೇ ಸಮಯದಲ್ಲಿ ನಕಾರಾತ್ಮಕತೆಯನ್ನು ಹೋಗಲಾಡಿಸಿ ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತೆ.
ಮನೆಯ ಈ ಭಾಗಗಳಲ್ಲಿ ಇಡಬಹುದು?
ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಬಿದಿರಿನ ಸಸ್ಯಗಳನ್ನು ಡೈನಿಂಗ್ ಟೇಬಲ್‌ನ ಮಧ್ಯದಲ್ಲಿ ಇರಿಸಿ. ಜೊತೆಗೆ ಮಲಗುವ ಕೋಣೆಗಳಲ್ಲಿಯೂ ಇಟ್ಟಬಹುದು. ಇದಕ್ಕೆ ಕನಿಷ್ಠ ಕಾಳಜಿ ಮತ್ತು ಕಡಿಮೆ ಸೂರ್ಯನ ಬೆಳಕು ಅಗತ್ಯವಿರುವುದರಿಂದ, ಮನೆಯಲ್ಲಿ ಬಿದಿರಿನ ಸಸ್ಯವನ್ನು ಸೇರಿಸಲು ಮಲಗುವ ಕೋಣೆಗಳು ಸೂಕ್ತ ಸ್ಥಳವಾಗಿವೆ.
ಅದೃಷ್ಟದ ಬಿದಿರು ಬೆಳವಣಿಗೆ, ಆರಂಭ ಮತ್ತು ಕುಟುಂಬದ ಸಾಮರಸ್ಯವನ್ನು ಸಂಕೇತಿಸುತ್ತದೆ. ಈ ಎಲ್ಲಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಮನೆಯ ಪ್ರವೇಶದ್ವಾರದ ಬಳಿ ಸಸ್ಯವನ್ನು ಇರಿಸಿ.

ಈ ಸುದ್ದಿಯನ್ನು ಓದಿ: Vastu Tips: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ ಆರ್ಥಿಕ ಸಮಸ್ಯೆ ಗ್ಯಾರಂಟಿ!

ಗಿಡ ಹೇಗಿರಬೇಕು?
ಬಿದಿರಿನ ಸಸ್ಯವು ವಾಸ್ತು ಶುದ್ಧಿಕಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಬಿದಿರಿನ ಗಿಡಗಳು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿ. ಇಂತಹ ಪರಿಸ್ಥಿತಿಯಲ್ಲಿ 2-3 ಅಡಿ ಎತ್ತರಕ್ಕೆ ಬೆಳೆಯುವ ಬಿದಿರು ಗಿಡಗಳನ್ನು ನೆಡುವುದು ಸೂಕ್ತ ಎಂದು ಹೇಳಲಾಗುತ್ತದೆ.
ಇನ್ನೂ ವಾಸ್ತು ಪ್ರಕಾರ ಮನೆಯಲ್ಲಿ ಬಿದಿರು ಗಿಡವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೇ ಬಿದಿರಿನ ಸಸ್ಯವನ್ನು ನೋಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ವಾಸ್ತು ಪ್ರಕಾರ, ಬಿದಿರಿನ ಕೆಲವು ಕಾಂಡಗಳನ್ನು ಕೆಂಪು ರಿಬ್ಬನ್‌ನೊಂದಿಗೆ ಒಟ್ಟಿಗೆ ಕಟ್ಟುವುದು ಅದೃಷ್ಟದ ಸಂಕೇತವಾಗಿದೆ.