ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಗುರುವಾರದಂದು ಪತ್ನಿ ಈ ಕೆಲಸ ಮಾಡಿದರೆ ಪತಿಯ ಸಮೃದ್ಧಿ ಕುಂಠಿತ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರದಂದು ಕೆಲವು ಕಾರ್ಯಗಳನ್ನು ಮಾಡುವುದು ಅಶುಭ ಎಂಬ ಉಲ್ಲೇಖವಿದ್ದು, ಗುರುವಾರವು ಗುರು ಗ್ರಹಕ್ಕೆ ಸಂಬಂಧಿಸಿದ ದಿನವಾದ ಕಾರಣ ಈ ದಿನ ಕೆಲ ಕಾರ್ಯಗಳನ್ನು ಮಾಡಿದರೆ ಬ್ರಹಸ್ಪತಿ ದೇವರ ಅನುಗ್ರಹ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ವಿದ್ಯಾಭ್ಯಾಸ, ಆಧ್ಯಾತ್ಮಿಕ ಪ್ರಗತಿ ಹಾಗೂ ಜೀವನದ ಉನ್ನತಿಗೆ ಅಡ್ಡಿ ಉಂಟಾಗಬಹುದು. ಆದ್ದರಿಂದ ಗುರುವಾರ ಮಾಡಬಾರದ ಕೆಲವು ಕೆಲಸಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಹಿಳೆಯರು ತಪ್ಪಿಯೂ ಈ ಕೆಲಸ ಮಾಡಬೇಡಿ

ಸಾಂದರ್ಭಿಕ ಚಿತ್ರ -

Profile
Sushmitha Jain Dec 25, 2025 8:02 AM

ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Religion) ಅನೇಕ ಆಚರಣೆಗಳ ಮತ್ತು ನಂಬಿಕೆಗಳು ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿದ್ದರೆ, ಇನ್ನು ಕೆಲವು ಭಕ್ತಿಯ ಹಾಗೂ ದೇವರ ಮೇಲಿನ ಆಸ್ಥೆಯಿಂದ ಪರಂಪರೆಯಾಗಿ ಬಂದಿರುವಂತವು. ಹಿಂದೂ ಸಂಪ್ರದಾಯದ ಪ್ರಕಾರ ವಾರದ ಪ್ರತಿಯೊಂದು ದಿನವನ್ನು ನಿರ್ದಿಷ್ಟ ದೇವರಿಗೆ ಅರ್ಪಿಸಲಾಗಿದೆ. ಆ ದಿನಕ್ಕೆ ಸಂಬಂಧಿಸಿದ ದೇವರನ್ನು ಪೂಜಿಸುವುದರ ಜೊತೆಗೆ, ಕೆಲವೊಂದು ನಿಯಮಗಳನ್ನು ಪಾಲಿಸುವುದು ಕೂಡ ಅತ್ಯಂತ ಮುಖ್ಯವೆಂದು ನಂಬಲಾಗುತ್ತದೆ. ಈ ನಿಯಮಗಳು ನಮ್ಮ ಜೀವನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಜ್ಯೋತಿಷ್ಯಶಾಸ್ತ್ರ(Astro Tips) ಹೇಳುತ್ತದೆ.

ಗುರುವಾರವನ್ನು ವಿಷ್ಣು ದೇವರಿಗೆ(Vishnu Devaru) ಸಮರ್ಪಿತವಾದ ದಿನವಾಗಿದ್ದು, ಈ ದಿನ ಬ್ರಹಸ್ಪತಿ ದೇವರ ಪೂಜೆಯೂ ಮಹತ್ವ ಪಡೆದಿದೆ. ಬ್ರಹಸ್ಪತಿ ದೇವರನ್ನು ದೇವರುಗಳ ಗುರು ಎಂದು ಕರೆಯಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ ಬ್ರಹಸ್ಪತಿ ದೇವರನ್ನು ವಿಷ್ಣುವಿನ ಅವತಾರವೆಂದೂ ಹೇಳಲಾಗುತ್ತದೆ. ವಿಷ್ಣು ದೇವರ ಪತ್ನಿಯಾಗಿರುವ ಲಕ್ಷ್ಮೀ ದೇವಿಯನ್ನು ಕೂಡ ಗುರುವಾರ ಪೂಜಿಸುವ ಪದ್ಧತಿ ಇದೆ. ಈ ದಿನ ಉಪವಾಸ ವ್ರತ ಆಚರಿಸಿ ವಿಷ್ಣು ಹಾಗೂ ಬ್ರಹಸ್ಪತಿ ದೇವರನ್ನು ಒಲಿಸಿಕೊಳ್ಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರದಂದು ಕೆಲವು ಕಾರ್ಯಗಳನ್ನು ಮಾಡುವುದು ಅಶುಭ ಎಂ ಉಲ್ಲೇಖವಿದ್ದು, ಗುರುವಾರವು ಗುರು ಗ್ರಹಕ್ಕೆ ಸಂಬಂಧಿಸಿದ ದಿನವಾದ ಕಾರಣ ಈ ದಿನ ಕೆಲ ಕಾರ್ಯಗಳನ್ನು ಮಾಡಿದರೆ ಬ್ರಹಸ್ಪತಿ ದೇವರ ಅನುಗ್ರಹ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ವಿದ್ಯಾಭ್ಯಾಸ, ಆಧ್ಯಾತ್ಮಿಕ ಪ್ರಗತಿ ಹಾಗೂ ಜೀವನದ ಉನ್ನತಿಗೆ ಅಡ್ಡಿ ಉಂಟಾಗಬಹುದು. ಆದ್ದರಿಂದ ಗುರುವಾರ ಮಾಡಬಾರದಾದ ಕೆಲವು ಕೆಲಸಗಳು ಬಗ್ಗೆ ಇಲ್ಲಿದೆ ಮಾಹಿತಿ.

Astro Tips: ಶುಭ ಶುಕ್ರವಾರ ಈ ದಿಕ್ಕಿನಲ್ಲಿ ದೀಪ ಹಚ್ಚಿದರೆ ಲಕ್ಷ್ಮೀ ದೇವಿಯ ಕೃಪೆ, ಧನಾಗಮನ

ಗುರುವಾರ ಉಗುರು ಕತ್ತರಿಸಬಾರದು

ಗುರುವಾರದಂದು ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಅಥವಾ ಗಡ್ಡ ತೆಗೆಸಿಕೊಳ್ಳುವುದು ಶುಭಕರವಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂತಹ ಕೆಲಸಗಳಿಂದ ದೇಹದ ಮೇಲೆ ಇರುವ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲ ಜ್ಯೋತಿಷಿಗಳು ಇದರಿಂದ ಆಯುಷ್ಯಕ್ಕೂ ಹಾನಿಯಾಗಬಹುದು ಎಂದು ಹೇಳುತ್ತಾರೆ.

ಗುರುವಾರ ತಲೆ ಸ್ನಾನ ನಿಷಿದ್ಧ


ಗುರುವಾರದಂದು ತಲೆಗೆ ಸ್ನಾನ ಮಾಡಬಾರದು ಎನ್ನುವ ನಂಬಿಕೆಯೂ ಇದೆ. ಜಾತಕದಲ್ಲಿ ಗುರು ಗ್ರಹವನ್ನು ಮಹಿಳೆಯರಿಗೆ ಪತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಗುರುವಾರ ತಲೆಗೆ ಸ್ನಾನ ಮಾಡಿದರೆ ಪತಿಯ ಸಮೃದ್ಧಿ ಮತ್ತು ಶುಭಕ್ಕೆ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತದೆ.

ಬಟ್ಟೆ ಒಗೆಯುವುದು ಮತ್ತು ನೆಲ ಒರೆಸುವುದು

ಗುರುವಾರದಂದು ಬಟ್ಟೆ ಒಗೆಯುವುದು ಅಥವಾ ಮನೆ ನೆಲ ಒರೆಸುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಇಂತಹ ಕೆಲಸಗಳಿಂದ ಮನೆಯ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಜೊತೆಗೆ ಕುಟುಂಬದ ಆರ್ಥಿಕ ಸ್ಥಿತಿಗೂ ಇದು ಅನುಕೂಲಕರವಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಜೇಡರ ಬಲೆ ತೆಗೆಯುವುದು

ಹಿಂದೂ ಪುರಾಣಗಳ ಪ್ರಕಾರ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಮನೆ ಶುಚಿಯಾಗಿಲ್ಲದಿದ್ದರೆ ಲಕ್ಷ್ಮೀ ದೇವಿಯ ಕೃಪೆ ದೊರೆಯುವುದಿಲ್ಲ ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ ಜೇಡರ ಬಲೆಗಳನ್ನು ತೆಗೆದು ಮನೆ ಸ್ವಚ್ಛಗೊಳಿಸಲಾಗುತ್ತದೆ. ಆದರೆ ಗುರುವಾರದಂದು ಜೇಡರ ಬಲೆ ತೆಗೆದುಹಾಕುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಸ್ವಚ್ಛತೆ ಅಗತ್ಯವಿದ್ದರೆ, ಅದನ್ನು ಗುರುವಾರದ ಹಿಂದಿನ ದಿನವೇ ಮಾಡಿಕೊಳ್ಳುವುದು ಉತ್ತಮ ಎಂದು ಪರಿಗಣಿಸಲಾಗಿದೆ.