Teddy Day 2025: ಪ್ರೀತಿಯ ಸಂಕೇತವಾಗಿ ನೀವು ನೀಡುವ ಟೆಡ್ಡಿ ಬೇರ್ ಇತಿಹಾಸ ಏನು ಅನ್ನೋದು ನಿಮಗೆ ಗೊತ್ತಾ..?
ವ್ಯಾಲೆಂಟೈನ್ಸ್ ಡೇ ನಿಮ್ಮ ವಿಶೇಷ ವ್ಯಕ್ತಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ದಿನವಾಗಿದೆ. ಅದಕ್ಕೂ ಮೊದಲೇ ಬರುವ ಟೆಡ್ಡಿ ದಿನದಂದು ಜನರು ತಮ್ಮ ಪ್ರೀತಿಯನ್ನು ಪರಸ್ಪರ ತೋರಿಸಲು ಮೃದುವಾದ ಟಾಯ್ಸ್ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಟೆಡ್ಡಿ ಡೇ ಆಚರಣೆಯ ದಿನಾಂಕ, ಅದರ ಮಹತ್ವ ಮತ್ತು ಈ ವರ್ಷ ಏನು ಪ್ಲಾನ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
![ಟೆಡ್ಡಿ ಡೇ ಯಾವಾಗ?; ಇದರ ಇತಿಹಾಸ, ಮಹತ್ವವೇನು?](https://cdn-vishwavani-prod.hindverse.com/media/original_images/Happy_Teddy_Day.jpg)
ಟೆಡ್ಡಿ ಡೇ ಆಚರಣೆ, ಮಹತ್ವ ಮತ್ತು ಪ್ರಾಮುಖ್ಯತೆ
![Profile](https://vishwavani.news/static/img/user.png)
ಬೆಂಗಳೂರು,ಫೆ.10: 'ಟೆಡ್ಡಿ ಡೇ' ( Teddy Day)ಅನ್ನು ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರಿಗೆ ಟೆಡ್ಡಿ (ಗೊಂಬೆ) (Teddy)ಅನ್ನು ಉಡುಗೊರೆಯಾಗಿ ನೀಡುವುದು ವಿಶೇಷ. ಪ್ರೀತಿ, ಬಾಂಧವ್ಯ ಮತ್ತು ಸಂಬಂಧವನ್ನು ಸಂಭ್ರಮಿಸಲು ಈ ದಿನ ಬೆಸ್ಟ್ ಆಗಿದ್ದು, ಸಂಗಾತಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದೊಳ್ಳೆ ಅವಕಾಶವಿದು.
ಅಲ್ಲದೇ ಈ ಟೆಡ್ಡಿಬೇರ್ ಗಳು ಎಂದರೆ ಅದು ಪ್ರೀತಿಯ ಸಂಕೇತವಾಗಿದ್ದು, ಪ್ರತಿಯೋರ್ವರಿಗೂ ಟೆಡ್ಡಿ ನೋಡಿದ ತಕ್ಷಣ ತುಂಬಾ ಖುಷಿಯಾಗುತ್ತದೆ. ಮಕ್ಕಳಿಗೆ ಅದೊಂದು ಸ್ನೇಹಿತರಂತೆ ಇದ್ದರೆ, ಪ್ರೇಮಿಗಳಿಗೆ ಅದು ತಮ್ಮ ಪ್ರೇಮದ ಪ್ರತಿರೂಪವೇ ಆಗಿರುತ್ತದೆ. ಪ್ರೇಮಿಕೊಟ್ಟ ಟೆಡ್ಡಿ ಬೇರ್ ಮುದ್ದಾಡುತ್ತಾ ತಾನು ಅವನ ಜೊತೆಯೇ ಮಾತನಾಡುತ್ತದ್ದೇನೆ ಎಂಬ ಭ್ರಮಾ ಲೋಕದಲ್ಲಿ ತೇಲುತ್ತಾರೆ.
ಅದರಲ್ಲೂ ವಿಶೇಷವಾಗಿ ಹುಡುಗಿಯರನ್ನು ಆಕರ್ಷಿಸುವ ವಸ್ತುಗಳಲ್ಲಿ ಟೆಡ್ಡಿಬೇರ್ ಕೂಡ ಒಂದಾಗಿದ್ದು, ಪ್ರೇಮಿಗಳಿಗೆ ತಮ್ಮ ಭಾವನೆಗಳನ್ನು ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯವಾಗಿದೆ. ರೋಸ್ ಡೇ, ಚಾಕೊಲೇಟ್ ಡೇಗಳ ಸಾಲಿನಲ್ಲಿಯೇ ನಂತರ ಬರುವ ವಿಶೇಷ ದಿನವೇ ಟೆಡ್ಡಿ ಡೇ ಆಗಿದ್ದು, ನಿಮ್ಮ ಜೀವನ ಸಂಗಾತಿಗೆ ಟೆಡ್ಡಿ ಕೊಡುವ ಮುನ್ನ ಒಮ್ಮೆ ಅದು ಪ್ರಾರಂಭವಾಗಿದ್ದೇಗೆ ಎಂಬುದನ್ನು ತಿಳಿಯಿರಿ.
ಈ ಸುದ್ದಿಯನ್ನು ಓದಿ: Valentine’s Day 2025: ಪ್ರೇಮಿಗಳ ದಿನ ನಿಮ್ಮ ಪ್ರೇಯಸಿಗೆ ಈ ಗಿಫ್ಟ್ ನೀಡಿ..! ಇಲ್ಲಿವೆ ಕೆಲವು ಟಿಪ್ಸ್
ಟೆಡ್ಡಿ ಡೇಗೂ ಅಮೆರಿಕಾಗೂ ಇದೆ ನಂಟು
ಟೆಡ್ಡಿ ಡೇ ಅಮೆರಿಕಾ ರಾಷ್ಟ್ರಪತಿ ಜೊತೆ ಸಂಬಂಧ ಹೊಂದಿದೆ. ಅಮೆರಿಕದ 26 ನೇ ಅಧ್ಯಕ್ಷರಾದ ಥಿಯೋಡರ್ ಟೆಡ್ಡಿ ರೂಸ್ವೆಲ್ಟ್ ಮಿಸ್ಸಿಸ್ಸಿಪ್ಪಿ ರಾಜ್ಯದ ಗವರ್ನರ್ ಆಂಡ್ರ್ಯೂ ಹೆಚ್. ಲಾಂಗಿನೊ ಆಹ್ವಾನದ ಮೇರೆಗೆ ಕರಡಿಯನ್ನು ಬೇಟೆಯಾಡಲು ಹೋಗಿದ್ದರು. ಆದ್ರೆ ಅವರಿಗೆ ಕರಡಿ ಬೇಟೆಯಾಡಲು ಸಾಧ್ಯವಾಗ್ಲಿಲ್ಲ. ಇದನ್ನು ನೋಡಿದ ರೂಸ್ವೆಲ್ಟ್ ಅವರ ಸಹಾಯಕ ಹೋಲ್ಟ್ ಕೊಲಿಯರ್, ಕಪ್ಪು ನಕಲಿ ಕರಡಿಯನ್ನು ಮರಕ್ಕೆ ಕಟ್ಟಿ ಹಾಕಿ, ಶೂಟ್ ಮಾಡುವಂತೆ ಹೇಳಿದ. ಆದ್ರೆ ಕರಡಿಯ ಮುಗ್ದತೆ ನೋಡಿ ರೂಸ್ವೆಲ್ಟ್ ರಿಗೆ ಗುಂಡು ಹಾರಿಸಲು ಸಾಧ್ಯವಾಗ್ಲಿಲ್ಲ. ಈ ಸುದ್ದಿ ಎಲ್ಲೆಡೆ ಹರಡಿತು. ಇದನ್ನು ತಿಳಿದ ಬ್ರೂಕ್ಲಿನ್ ಎಂಬ ಅಂಗಡಿ ವ್ಯಾಪಾರಿ ಕರಡಿ ತಯಾರಿಸಿ ಅದಕ್ಕೆ ಟೆಡ್ಡಿ ಬೇರ್ ಎಂದು ಹೆಸರಿಟ್ಟರು. ಅದನ್ನು ಅಮೆರಿಕಾ ಅಧ್ಯಕ್ಷರಿಗೆ ನೀಡಿದ್ರು.
ಇನ್ನು ಮೊದಲು ಟೆಡ್ಡಿ ಡೇ ವೆಸ್ಟರ್ನ್ ದೇಶಗಳಲ್ಲಿ ಜನಪ್ರಿಯವಾಗಿದ್ದು, ಕಾಲಾಂತರದಲ್ಲಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿತ್ತು. ಈ ದಿನದಂದು ಜನರು ತಮ್ಮ ಸಂಗಾತಿಗೆ ಟೆಡ್ಡಿ ಉಡುಗೊರೆಯಾಗಿ ನೀಡುವ ಮೂಲಕ, ಪ್ರೇಮ ಪತ್ರಗಳನ್ನು ಬರೆಯುವ ಮೂಲಕ ಅಥವಾ ಮುದ್ದಾದ ಸಂದೇಶಗಳನ್ನು ಕಳುಹಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಇದರ ಹೊರತಾಗಿ ಪ್ರೀತಿ ಎನ್ನುವುದು ಎಲ್ಲಾ ಸಂಬಂಧಗಳಲ್ಲೂ ಇರುತ್ತದೆ. ನಿಸ್ವಾರ್ಥ ಸ್ನೆಹ, ಪ್ರೀತಿ ಹಾಗೂ ನಂಬಿಕೆಯು ಎಲ್ಲಿ ಇರುತ್ತದೆಯೋ ಅಲ್ಲಿ ಪ್ರೀತಿ, ಕಾಳಜಿ ಇರುತ್ತದೆ. ಇಂತಹ ಪ್ರೀತಿ ಯಾವೆಲ್ಲಾ ಸಂಬಂಧಗಳಲ್ಲಿ ಇರುವುದೋ ಆ ಸಂಬಂಧಗಳು ಸಹ ಸಿಹಿಯಾಗಿಯೇ ಉಳಿದುಕೊಳ್ಳುತ್ತವೆ. ಹಾಗಾಗಿ ಸ್ನೇಹಿತರಿಗೆ, ಪಾಲಕರಿಗೆ, ಬಂಧುಗಳಿಗೆ, ಸಹೋದರ, ಸಹೋದರಿಯರಿಗೂ ಸಹ ಟೆಡ್ಡಿ ದಿನದಂದು ವಿಶೇಷವಾದ ಟೆಡ್ಡಿ ಗೊಂಬೆ ನೀಡಿ ನಿಮ್ಮ ಪ್ರೀತಿ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಬಹುದು. ಪ್ರೇಮಿಗಳ ದಿನದ ಅರ್ಥ ಪ್ರೀತಿಯನ್ನು ಹಂಚಿಕೊಳ್ಳುವುದು ಅಥವಾ ಹೇಳಿಕೊಳ್ಳುವುದು ಎನ್ನುವ ಅರ್ಥವನ್ನು ನೀಡುತ್ತದೆ. ಅಂದು ನೀವು ನಿಮ್ಮ ಸಂಗಾತಿ ಅಥವಾ ಪ್ರೇಮಿಗಳಿಗೆ ಮಾತ್ರ ಶುಭ ಕೋರುವುದು ಎಂದರ್ಥವಲ್ಲ. ನೀವು ಜೀವನದಲ್ಲಿ ಪ್ರೀತಿಸುವ ಬಂಧುಗಳು, ಸ್ನೇಹಿತರು ಮತ್ತು ಕುಟುಂಬದವರಿಗೂ ಶುಭ ಕೋರಬಹುದು.