ಮನಃ ಸಾಂತ್ವನ: ಸಹಾಯಹಸ್ತ ಚಾಚುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
ಕಷ್ಟದಲ್ಲಿರುವವರನ್ನು ಕಂಡಾಗ ಅನುಕಂಪ ತೋರಿಸಿ ಸಹಾಯ ಮಾಡುವುದು ನಿಮ್ಮ ಒಳ್ಳೆಯತನ ಮತ್ತು ಕನಿಕರವನ್ನು ತೋರಿಸುತ್ತದೆ. ಹೀಗೆ ಸಹಾಯ ಮಾಡುವುದರಿಂದ ನಿಮಗೆ ಸಂತೋಷ ಮತ್ತು ಸಮಾಧಾನ ಆಗುತ್ತಗೆಯೆಂದು ಭಾವಿಸುತ್ತೇನೆ. ಒಂದು ವೇಳೆ ನೀವು ಸಹಾಯ ಮಾಡಲಿಲ್ಲವೆಂದರೆ ಬಹುಶಃ ನಿಮಗೆ ಬೇಸರವೆನಿಸಿ ಪಾಪಪ್ರಜ್ಞೆಯಿಂದ ಪಶ್ಚಾತ್ತಾಪ ಪಡಬಹುದಲ್ಲವೇ ?
-
ನಾನು ಬೇರೆಯವರಿಗೆ ನನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಯಾರನ್ನಾದರೂ ಕಷ್ಟದಲ್ಲಿ ನೋಡಿದರೆ, ಅನುಕಂಪ ಉಕ್ಕಿ ಬರುತ್ತದೆ. ಕೆಲವು ಸಲ ಮಿತಿ ಮೀರಿ ಸಹಾಯ ಮಾಡಿಬಿಡುತ್ತೇನೆ. ಆದರೆ ನಾನು ಕಷ್ಟ ಕಾಲದಲ್ಲಿ ಇದ್ದಾಗ ಬೇರೆಯವರು ನನಗೆ ಸಹಾಯ ಮಾಡುವುದೇ ಕಡಿಮೆ, ಕೇಳಿದರೂ ಕೂಡ ನೆರವಿಗೆ ಬರುವುದಿಲ್ಲ. ಜನರ ಈ ರೀತಿಯ ವತ೯ನೆಯಿಂದ ಬಹಳ ನೋವಾಗುತ್ತದೆ. ಅನುಕಂಪವೇ ಇಲ್ಲದವರು, ಸ್ವಾಥಿ೯ಗಳು, ಕೃತಜ್ಞ ಹೀನರೆಂದು ಬೈದುಕೊಂಡು ಕೂತಿರುತ್ತೇವೆ ಇಂತ ಸಂದರ್ಭಗಳಲ್ಲಿ ನಾನು ಏನು ಮಾಡಬೇಕು?
- ವಿವೇಕ್, 40ವಷ೯, ಬೆಂಗಳೂರು
ನಿಮ್ಮ ಪ್ರಶ್ನೆಯನ್ನು ಹಂಚಿಕೆೊಂಡದ್ದಕ್ಕೆ ಧನ್ಯವಾದಗಳು. ನಿಮ್ಮ ತೊಳಲಾಟ ಸಹಜವೇ ಸರಿ. ನಿಮ್ಮ ಪರಿಸ್ಥಿಯಲ್ಲಿ ಸಹಾಯ ಮಾಡಿದವರು ಯಾರೇ ಇದ್ದರೂ ಕೂಡ, ಹೀಗೆ ಅಂದುಕೊಳ್ಳುವುದು ಸಹಜ.
ಕಷ್ಟದಲ್ಲಿರುವವರನ್ನು ಕಂಡಾಗ ಅನುಕಂಪ ತೋರಿಸಿ ಸಹಾಯ ಮಾಡುವುದು ನಿಮ್ಮ ಒಳ್ಳೆಯತನ ಮತ್ತು ಕನಿಕರವನ್ನು ತೋರಿಸುತ್ತದೆ. ಹೀಗೆ ಸಹಾಯ ಮಾಡುವುದರಿಂದ ನಿಮಗೆ ಸಂತೋಷ ಮತ್ತು ಸಮಾಧಾನ ಆಗುತ್ತಗೆಯೆಂದು ಭಾವಿಸುತ್ತೇನೆ. ಒಂದು ವೇಳೆ ನೀವು ಸಹಾಯ ಮಾಡಲಿಲ್ಲವೆಂದರೆ ಬಹುಶಃ ನಿಮಗೆ ಬೇಸರವೆನಿಸಿ ಪಾಪಪ್ರಜ್ಞೆಯಿಂದ ಪಶ್ಚಾತ್ತಾಪ ಪಡಬಹುದಲ್ಲವೇ ?
ಕಷ್ಟದಲ್ಲಿರುವವರನ್ನು ಕಂಡಾಗ ಅನುಕಂಪ ತೋರಿಸಬೇಕೆಂಬ ಧೃಢವಾದ ನಂಬಿಕೆ ನಿಮ್ಮದಾಗಿರುವುದರಿಂದ ಈ ನಂಬಿಕೆಯನ್ನು ನೀವು ಬಹುಕಾಲ ಪಾಲಿಸಿಕೊಂಡು ಬಂದಿದ್ದೀರಾ. ಆದಕಾರಣವೇ ನಿಮಗೆ ಅನುಕಂಪವೆನ್ನುವುದು ಸಹಜವಾಗಿಯೇ ಬಂದುಬಿಡುತ್ತದೆ. ಹಾಗಾಗಿಯೇ, ನೀವು ನಿಮ್ಮ ಮಿತಿ ಮೀರಿ ಇನ್ನೊಬ್ಬರಿಗೆ ನೆರವು ನೀಡಲು ಸಿದ್ಧರಿರುತ್ತೀರ. ಇದು ನಿಮ್ಮ ಆಯ್ಕೆಯೂ ಕೂಡ ಆಗಿದೆ. ನೀವೇ ಮನಸಾರೆ ಬಯಸಿ, ನಿಧ೯ರಿಸಿ ತೆಗೆದುಕೊಳ್ಳುವ ತೀಮಾ೯ನವಾಗಿರುತ್ತದೆ. ಈ ಗುಣ ನಿಮ್ಮ ಮನಸ್ಸಿಗೆ ಸಂತೋಷ, ಸಾಮಾಧಾನ ಹಾಗೂ ತೃಪ್ತಿ ಕೊಡುವುದಾದರೇ, ದಯವಿಟ್ಟು ಮುಂದುವರೆಸಿ.
ಒಂದು ಕಡೆ, ಈ ಅಂಶಗಳೆಲ್ಲಾ ನಿಮ್ಮ ಗುಣ, ನಂಬಿಕೆ ಮತ್ತು ಸಂತೋಷವನ್ನು ವಿವರಿಸಿದರೇ, ಮತ್ತೊಂದು ಕಡೆ ಕೆಲವು ಅಂಶಗಳು ಮತ್ತೊಬ್ಬರ ಗುಣ, ನಂಬಿಕೆಗಳನ್ನು ಬಿಂಬಿಸುತ್ತವೆ. ಇವುಗಳನ್ನು ತಿಳಿದುಕೊಳ್ಳೋಣ ಬನ್ನಿ. ಅನುಕಂಪ, ದಯೆ, ಕನಿಕರ, ಸಹಾನುಭೂತಿಯ ಗುಣಗಳು ವ್ಯಕ್ತಿಯ ನಂಬಿಕೆ ಮತ್ತು ಮೌಲ್ಯಗಳ ಮೇಲೆ ಆಧಾರಿತವಾಗಿರುತ್ತವೆ. ಬೆಳೆದು ಬಂದ ವಾತಾವರಣ ಮತ್ತು ಅನುಭವಗಳಿಂದ ಈ ನಂಬಿಕೆ ಮತ್ತು ಮೌಲ್ಯಗಳನ್ನು ತಮ್ಮ ಗುಣದಲ್ಲಿ ತಮಗೆ ಅರಿವಿಲ್ಲದೇ ಅಥವ ಸಂಪೂರ್ಣ ಅರಿವಿನೊಂದಿಗೆ ಬೆಳೆಸಿಕೊಂಡಿರುತ್ತಾರೆ. ಇದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಭಿನ್ನವಿರಬಹುದು.
ಸಹಾಯ ಮಾಡುವ ಗುಣ ವ್ಯಕ್ತಿಯ ನಂಬಿಕೆ ಮತ್ತು ಅನೂಕೂಲದ ಆಧಾರಿತವಾದ ಆಯ್ಕೆಯಾಗಿರುತ್ತದೆ. ಸಹಾಯ ಮಾಡಬೇಕೆಂಬ ಗುಣ ವ್ಯಕ್ತಿಯ ನಂಬಿಕೆ ಮೌಲ್ಯಗಳು ಮತ್ತು ಅನುಕೂಲಗಳ ಮೇಲೆ ಆಧರಿತವಾಗಿರುತ್ತದೆ. ಕಷ್ಟದ ಅರಿವು ಮತ್ತು ಅನುಭವ ಯಾರಿಗೆ ಹೆಚ್ಚಾಗಿ ಇರುತ್ತದೆಯೋ ಅಂಥವರಿಗೆ ಬೇರೊಬ್ಬರು ಅದೇ ಪರಿಸ್ಥಿಯಲ್ಲಿದ್ದಾಗ ಸಹಾಯ ಮಾಡುವ ಸಾಧ್ಯತೆ ಇರುತ್ತದೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಗುಣವೂ ಕೂಡ ಮುಖ್ಯವಾಗಿರುತ್ತದೆ. ಇದು ಗುಣವೂ ಕೂಡ ಅವರ ಅನುಭವ ಮತ್ತು ಮೌಲ್ಯಗಳ ಮೇಲೆ ಆಧಾರಿತವಾಗಿರುತ್ತದೆ. ಹಾಗೆಯೇ, ಅಗತ್ಯವಿರುವವರಿಗೆ ನನ್ನ ಕೈಲಾದ ಸಹಾಯ ಮಾಡಬೇಕೆನ್ನುವ ನಿರ್ಧಾರವೂ ಕೂಡ ಮೌಲ್ಯಗಳ ಮೇಲೆ ಆಧಾರಿತವಾಗಿರುತ್ತವೆ. ಸಹಾಯ ನೀಡುವ ವ್ಯಕ್ತಿಯಿಂದ ಯಾರಿಗೆ ಹೆಚ್ಚಿನ ನಿರೀಕ್ಷೆಗಳು ಇರುವುದಿಲ್ಲವೋ, ಅಂಥವರೂ ಕೂಡ ಸಹಾಯಗಳನ್ನು ಹೆಚ್ಚಾಗಿ ನೀಡುತ್ತಾರೆ.
ಕೆಲವೊಬ್ಬರು, ಬಹಳ ಎಚ್ಚರಿಕೆಯಿಂದ, ಆಯ್ಕೆ ಮಾಡಿ ಬರೀ ಮಹಿಳೆಯರಿಗೆ ಸಹಾಯ ಮಾಡಬಹುದು ಅಥವಾ ಮಕ್ಕಳಿಗೆ ಮಾತ್ರ ಮಾಡುವಂತದ್ದು. ಮತ್ತೆ ಕೆಲವರು ವೃದ್ಧರಿಗೆ ಮಾತ್ರ ನೆರವು ನೀಡುವಂತದ್ದು. ಇನ್ನೂ ಕೆಲವರು ಪ್ರಾಣಿ ಪಕ್ಷಿ, ಗಿಡ ಮರಗಳಿಗೆ ಮಾತ್ರ ಆಶ್ರಯ ಮತ್ತು ನೆರವು ನೀಡುವಂತದ್ದು. ಹಾಗೆಯೇ ಮತ್ತೊಂದಿಷ್ಟು ಜನ ಯಾವ ಭೇಧವಿಲ್ಲದೇ ಎಲ್ಲಾರಿಗೂ ಸಹಾಯ ಮಾಡುವಂತದ್ದು. ಮತಷ್ಟು ಕೆಲವರು ತಮ್ಮ ಲಾಭವನ್ನು ನೋಡಿಕೊಂಡು ಸಹಾಯ ಮಾಡುವುದುಂಟು, ಏನೂ ಲಾಭವಿಲ್ಲದಿದ್ದರೇ, ಸಹಾಯ ಮಾಡದೇ ಇರವುದುಂಟು. ಇನ್ನೊಬ್ಬರಿಗೆ ತಮಗೆ ನಷ್ಟವಾದಿತೂ ಎಂಬ ಕಾರಣಕ್ಕೂ ಕೂಡ ಸಹಾಯ ಮಾಡದೇಯಿರುವುದುಂಟು.
ಧನ ಸಹಾಯ ವಿಚಾರದಲ್ಲಿ, ಆ ವ್ಯಕ್ತಿಯು ಕೊಟ್ಟ ಹಣವನ್ನು ಹಿಂದಿರುಗಿಸುತ್ತಾನೆ/ಳೆ ಎನ್ನುವ ವಿಶ್ವಾಸವಿದ್ದರೇ ಮಾತ್ರ ಸಹಾಯ ಮಾಡುವುದುಂಟು. ಹೀಗೆೇ, ಪ್ರತಿಯೊಬ್ಬರೂ ಕೂಡ ತಮ್ಮ ನಂಬಿಕೆ ಮತ್ತು ಅನುಕೂಲವನ್ನು ನೋಡಿಕೊಂಡು ಸಹಾಯ ಮಾಡುವವರಿದ್ದಾರೆ. ಹಾಗೆಯೇ, ಸಹಾಯ ಮಾಡದೇ ನಿರಾಕರಿಸುವವರಿದ್ದಾರೆ.
ನಿಮ್ಮ ನಿರೀಕ್ಷೆಯನ್ನು ಪರಿಶೀಲಿಸಿ
ಹಾಗಾಗಿ, ನೀವು ಇನ್ನೊಬ್ಬರಿಗೆ ಸಹಾಯ ಮಾಡುವ ಮುನ್ನ, ಒಮ್ಮೆ ನಿಮ್ಮ “ನಿರೀಕ್ಷೆ “ ಏನಿದೇ ಎಂದು ಪರಿಶೀಲಿಸಿ ನೋಡಿ. ಸಹಾಯ ತೆಗೆದುಕೊಂಡಿರುವ ವ್ಯಕ್ತಿ ನಿಮಗೆ ಬದಲಾಗಿ ಸಹಾಯ ನೀಡಬೇಕೆನ್ನುವ ನೀರೀಕ್ಷೆಯಿದ್ದು, ಒಂದು ವೇಳೆ ಸಹಾಯ ನೀಡದಿದ್ದರೇ, ಅತಿಯಾದ ಬೇಸರವನ್ನು ಮಾಡಿಕೊಳ್ಳಬೇಡಿ. ಆ ವ್ಯಕ್ತಿಯು ಯಾವ ಕಾರಣಕ್ಕೆ ನಿಮಗೆ ಸಹಾಯ ನೀಡುವುದಕ್ಕೆ ನಿರಾಕರಿಸದರೆಂದು ತಿಳಿದುಕೊಳ್ಳಿ. ಅವರ ನಂಬಿಕೆಗಳು ಮತ್ತು ನಿರೀಕ್ಷೆಗಳು ಭಿನ್ನವಿರಬಹುದು. ಇದನ್ನರಿತಾಗ, ನಿಮಗೆ ಸಾಮಾಧಾನವಾಗಬಹುದು. ಒಂದು ವೇಳೆ, ಅವರು ನಿಮಗೆ ಸಹಾಯ ನೀಡಲು ನಿರಾಕರಿಸಿದಾಗ ನಿಮಗೆ ದೀಘ೯ಕಾಲದವರೆಗೆ ಅತಿಯಾದ ಬೇಸರ ಕೋಪ ನಿರಾಸೆಗಳಾದರೆ, ನೀವು ಮುಂದಿನ ಸಲ ಮತ್ತೆ ಅವರಿಗೆ ಸಾಹಾಯ ನೀಡುವಾಗ ಮುನ್ನೆಚ್ಚರಿಕೆ ತೆಗೆದುಕೆೊಳ್ಳುವುದು ಉತ್ತಮ. ಸಹಾಯ ಮಾಡುವುದು ನಿಮ್ಮ ಆಯ್ಕೆಯಾದರೆ, ಮಾಡದಿರುವುದು ಮತ್ತೊಬ್ಬರ ಆಯ್ಕೆ, ಇದನ್ನು ತಿಳಿದುಕೊಂಡರೆ ಬೇಸರವಾಗುವುದನ್ನು ತಡೆಯಬಹುದು