Rose Day 2025: ಪ್ರೀತಿ ಹಾದಿಯ ಮೊದಲ ಹೆಜ್ಜೆ – ರೋಸ್ ಡೇ ಬಗ್ಗೆ ನಿಮಗೆಷ್ಟು ಗೊತ್ತು..?
ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ ಡೇ ಹತ್ತಿರ ಬರುತ್ತಿದೆ. ನಿಮ್ಮ ಹೃದಯ ಸಂಗಾತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ದಿನ ಇದಾಗಿದ್ದು, ಇದಕ್ಕೆ ಪೂರಕವಾಗಿ ವ್ಯಾಲೆಂಟೈನ್ಸ್ ವೀಕ್ ಆಚರಿಸಲಾಗುತ್ತದೆ. ಹಾಗಾದ್ರೆ ಈ ವ್ಯಾಲೆಂಟೈನ್ ವೀಕ್ ನ ಮೊದಲ ದಿನವಾಗಿರುವ ರೋಸ್ ಡೇಯ ವಿಶೇಷತೆಗಳು ಇಲ್ಲಿವೆ.
ಪ್ರೇಮಿಗಳ ದಿನ (Valentine Day) ಬಂತೆಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮ. ಪವಿತ್ರ ಪ್ರೇಮವನ್ನು ಸಂಕೇತಿಸುವ ಪ್ರೇಮಿಗಳ ದಿನವನ್ನು ಒಂದು ವಾರಗಳ ಕಾಲ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ವೀಕ್ (Valentines Week) ಎಂದು ಕರೆಯುವ ಈ ಸಂಭ್ರಮದ ವಾರದ ಮೊದಲ ದಿನವನ್ನು ರೋಸ್ ಡೇ (Rose Day) ಎಂದು ಆಚರಿಸಲಾಗುತ್ತದೆ. ರೋಸ್ ಡೇ ದಿನ ನಮ್ಮೊಲವಿನ ವ್ಯಕ್ತಿಗೆ ಗುಲಾಬಿ ನೀಡುವ ಮೂಲಕ ಮನದ ಭಾವನೆಯನ್ನು ಅವರ ಮುಂದೆ ವ್ಯಕ್ತಪಡಿಸಬಹುದು. ಹಾಗಾದರೆ ರೋಸ್ ಡೇ ಆಚರಣೆಯ ಇತಿಹಾಸ ಹಾಗೂ ಮಹತ್ವವೇನು ಎಂಬುದನ್ನು ತಿಳಿಯಿರಿ.
ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನ ರೋಸ್ ಡೇ, ಅಂದರೆ ಇದು ಪ್ರೀತಿ ಹಾದಿಯ ಮೊದಲ ಹೆಜ್ಜೆ. ನಿಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂ ನೀಡುವ ಮೂಲಕ ಈ ದಿನವನ್ನು ಆಚರಿಸಬಹುದು. ರೋಸ್ ಡೇ ದಿನ ನೀವು ಇಷ್ಟಪಟ್ಟು ಪ್ರೀತಿ ಮಾಡುವವರಿಗೆ ಮಾತ್ರವಲ್ಲ, ಸ್ನೇಹಿತರಿಗೂ ಗುಲಾಬಿ ನೀಡಬಹುದು. ಪ್ರತಿ ಬಣ್ಣದ ಗುಲಾಬಿಗೂ ಒಂದೊಂದು ಮಹತ್ವವಿದೆ. ನೀವು ಯಾರೊಂದಿಗೆ ಪ್ರಯಣ ಜೀವನವನ್ನು ಮುಂದುವರಿಸಬೇಕು ಎಂದುಕೊಂಡಿದ್ದೀರಿ ಅವರಿಗೆ ಕೆಂಪು ಗುಲಾಬಿ ನೀಡಬಹುದು. ನಿಮ್ಮ ಆತ್ಮೀಯ ಸ್ನೇಹಿತರಿಗೆ ಹಳದಿ ಬಣ್ಣದ ಗುಲಾಬಿ ನೀಡುವ ಮೂಲಕ ಖುಷಿ ಪಡಿಸಬಹುದು. ಈ ದಿನ ಪಿಂಕ್, ಆರೆಂಜ್, ಲ್ಯಾವೆಂಡರ್ ಹೀಗೆ ವಿವಿಧ ಬಣ್ಣದ ಹೂಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿ ಅಥವಾ ಅಭಿಮಾನವನ್ನು ವ್ಯಕ್ತಪಡಿಸಬಹುದು.
ಅದೇನೇ ಇರಲಿ, ನೀವು ಮನಸಾರೆ ಇಷ್ಟಪಡುವ, ಅವರೊಂದಿಗೆ ಜೀವನ ಸಾಗಿಸಬೇಕು ಎಂದುಕೊಂಡಿರುವ ವ್ಯಕ್ತಿಗೆ ಪ್ರೀತಿಯ ಸಂಕೇತವಾಗಿ ಗುಲಾಬಿ ಹೂ ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ಅಭಿವ್ಯಕ್ತಿಸಬಹುದು. ಆ ಕಾರಣದಿಂದ ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನ ಅಂದರೆ ಫೆಬ್ರುವರಿ 7 ರಂದು ರೋಸ್ ಡೇ ಆಚರಿಸಲಾಗುತ್ತದೆ.
ವ್ಯಾಲೆಂಟೈನ್ಸ್ ವೀಕ್‌ನ ಮೋಸ್ಟ್ ಇಂಪಾರ್ಟೆಂಟ್ ಡೇ ಎಂದೇ ಕರೆಸಿಕೊಳ್ಳುವ ರೋಸ್ ಡೇಯನ್ನು ಪವಿತ್ರ ಪ್ರೀತಿ ಅಥವಾ ಸ್ನೇಹದ ಆರಂಭದ ದಿನ ಎಂದು ಪರಿಗಣಿಸಲಾಗುತ್ತದೆ. ನೀವು ಇಷ್ಟಪಡುವವರಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ನಿಮ್ಮ ಪ್ರೇಮ ಅಥವಾ ಸ್ನೇಹದ ಹಾದಿಯನ್ನು ಆರಂಭಿಸಬಹುದು. ಗುಲಾಬಿ ಹೂ ನೀಡುವ ಮೂಲಕ ನೀವು ಅವರನ್ನು ಇಷ್ಟಪಡುತ್ತೀರಿ ಹಾಗೂ ನಿಮ್ಮ ಬದುಕಿನ ಮುಂದಿನ ಪಯಣವನ್ನು ಅವರೊಂದಿಗೆ ಜೊತೆಯಾಗಿ ಹೆಜ್ಜೆ ಹಾಕಲು ಇಷ್ಟಪಡುತ್ತೀರಿ ಎಂಬುದನ್ನು ವ್ಯಕ್ತಪಡಿಸಬಹುದು.
ಗುಲಾಬಿ ಹೂ ಎಂದರೆ ಸೌಂದರ್ಯ, ಪ್ರೀತಿ ಹಾಗೂ ಒಲುಮೆಯ ಸಂಕೇತ. ನಿಮ್ಮ ಜೀವನದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ನೀವು ನೀಡುವ ಬೆಸ್ಟ್ ಗಿಫ್ಟ್ ಕೂಡ ಇದಾಗಿರಲಿದೆ. ನಿಮಗೆ ಯಾರ ಮೇಲಾದರೂ ಒಲವು ಇದ್ದರೆ ನೀವು ಅವರಿಗೆ ಗುಲಾಬಿ ಹೂ ನೀಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು.
ರೋಸ್ ಡೇ ಇತಿಹಾಸ
ಅನಾದಿಕಾಲದಿಂದಲೂ ಗುಲಾಬಿ ಹೂ ಪ್ರೀತಿ ಹಾಗೂ ಒಲವಿನ ಸಂಕೇತವಾಗಿದೆ. ಪ್ರಾಚೀನ ರೋಮ್ ಸಂಸ್ಕೃತಿಯಲ್ಲಿ ಗುಲಾಬಿ ಹೂಗಳು ತಮ್ಮ ಸೌಂದರ್ಯ ಹಾಗೂ ಸೆಳೆಯುವ ನೋಟನೊಂದಿಗೆ ಕ್ಯೂಪಿಡ್‌ನೊಂದಿಗೆ ಸಂಬಂಧ ಹೊಂದಿದೆ ಎಂದು ನಂಬುತ್ತಿದ್ದರು. ಅರೇಬಿಯನ್ ದೇಶಗಳಲ್ಲೂ ಗುಲಾಬಿ ಹೂಗಳನ್ನು ಪ್ರೀತಿ ಹಾಗೂ ಒಲುಮೆಯ ಸಂಕೇತ ಎಂದು ಪರಿಗಣಿಸಲಾಗಿದೆ. ಒಟ್ಟಾರೆ ನಮ್ಮ ಪ್ರೀತಿಯನ್ನು, ಒಲುಮೆಯನ್ನು ಆಪ್ತರಿಗೆ ವ್ಯಕ್ತಪಡಿಸಲು ಗುಲಾಬಿ ಹೂಗಳಿಗಿಂತ ಉತ್ತಮವಾದುದು ಇನ್ನೊಂದಿಲ್ಲ.