BBK 12: ಕಾವ್ಯ ತಾಯಿ ವಿಷ್ಯಕ್ಕೆ ಹೋದ ಅಶ್ವಿನಿ ಗೌಡಗೆ ಸಿಕ್ತು ಸಖತ್ ಕ್ಲಾಸ್; ʻಅವ್ರ ಅಮ್ಮನ ಬಗ್ಗೆ ಮಾತಾಡಿದ್ಯಾಕೆʼ ಎಂದು ಗರಂ ಆದ ʻಕಿಚ್ಚʼ ಸುದೀಪ್!
BBK 12 Weekend Update: ಬಿಗ್ ಬಾಸ್ ಕನ್ನಡ 12ರ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರ ಅಶಿಸ್ತಿನ ಮಾತಿನ ಬಗ್ಗೆ ಗಂಭೀರವಾಗಿ ಪ್ರಶ್ನಿಸಿದ್ದಾರೆ. ನೀರಿನ ಟಬ್ ಟಾಸ್ಕ್ ವೇಳೆ ಕಾವ್ಯ ಶೈವ ಅವರ ಜೊತೆ ಜಗಳವಾಡುವಾಗ ಅಶ್ವಿನಿ ಅವರು ಕಾವ್ಯ ತಾಯಿಯನ್ನು ಎಳೆತಂದಿದ್ದರು. "ನಿನ್ನ ಅಮ್ಮನ ಬಳಿ ಹೇಳ್ಕೋ" ಎಂಬ ಅಶ್ವಿನಿ ಮಾತನ್ನು ಕಿಚ್ಚ ತೀವ್ರವಾಗಿ ಖಂಡಿಸಿದರು.
-
ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ.ಅದರಲ್ಲೂ ಅವರು ನೆಗೆಟಿವ್ ವಿಚಾರಗಳಿಗೆ ಜಾಸ್ತಿ ಸುದ್ದಿಯಾಗಿದ್ದಾರೆ. ಈ ಹಿಂದೆ ರಕ್ಷಿತಾ ಶೆಟ್ಟಿ ವಿಚಾರ ಅಶ್ವಿನಿ ಗೌಡಗೆ ಎಷ್ಟೊಂದು ಡ್ಯಾಮೇಜ್ ಮಾಡಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ವಿಚಾರಕ್ಕೆ ಸುದೀಪ್ ಅವರಿಂದ ಅಶ್ವಿನಿಗೆ ಸಖತ್ ಕ್ಲಾಸ್ ಸಿಕ್ಕಿದೆ. ಏನದು? ಮುಂದೆ ಓದಿ.
ಕಾವ್ಯ ತಾಯಿ ಬಗ್ಗೆ ಮಾತನಾಡಿದ್ದ ಅಶ್ವಿನಿ
ಕಳೆದ ವಾರ ನಡೆದ ನೀರಿನ ಟಬ್ ಟಾಸ್ಕ್ ವೇಳೆ ಕಾವ್ಯ ಮತ್ತು ಅಶ್ವಿನಿ ನಡುವೆ ವಾಕ್ಸಮರ ನಡೆದಿತ್ತು. ಮಾತಿಗೆ ಮಾತು ಬೆಳೆದು, "ಆಯ್ತು ಹೋಗಮ್ಮ" ಅಂತ ಅಶ್ವಿನಿಗೆ ಕಾವ್ಯ ಹೇಳಿದ್ದರು. ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡ ಅಶ್ವಿನಿ, "ಅದನ್ನೆಲ್ಲಾ ನಿನ್ನ ಅಮ್ಮನ ಬಳಿ ಹೇಳ್ಕೋ" ಎಂದು ಕಾವ್ಯಗೆ ಆವಾಜ್ ಹಾಕಿದ್ದರು. ಅದಕ್ಕೆ ಖಡಕ್ ಆಗಿ ರಿಯಾಕ್ಟ್ ಮಾಡಿದ್ದ ಕಾವ್ಯ, "ನನ್ನ ಅಮ್ಮನ ಬಗ್ಗೆ ಮಾತನಾಡಬೇಡಿ, ಅವರ 10% ಕೂಡ ನೀವು ಇಲ್ಲ" ಎಂದು ನೇರವಾಗಿ ಅಶ್ವಿನಿಗೆ ಟಾಂಗ್ ಕೊಟ್ಟಿದ್ದರು. ಆದರೂ ಅಶ್ವಿನಿ ಅಂದು ಅಮ್ಮನ ವಿಚಾರದ ತನಕ ಹೋಗಬಾರದಿತ್ತು ಎಂಬ ಅಭಿಪ್ರಾಯ ಕೇಳಿಬಂದಿತ್ತು.
BBK 12: ಬಿಗ್ ಬಾಸ್ ಕಾಲೇಜ್ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ
ಈ ವಿಚಾರ ಪಸ್ತಾಪಿಸಿದ ಕಿಚ್ಚ
ಇದೀಗ ಶನಿವಾರ (ಡಿ.20) ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. "ಮನೆಯಲ್ಲಿ ಇರುವವರನ್ನು ಬಿಗ್ ಬಾಸ್‌ಗೆ ಯಾಕೆ ತರುತ್ತೀರಿ? ಕಾವ್ಯ ಅವರ ತಾಯಿಯ ವಿಷಯ ನಿಮಗ್ಯಾಕೆ? ನಿಮ್ಮ ಜಗಳ ಕಾವ್ಯ ಜೊತೆಗೆ, ಅವರ ಜೊತೆ ಜಗಳ ಮಾಡಿ. ಆದರೆ ಅವರ ಮನೆಯವರ ವಿಷಯ ನಿಮಗೆ ಯಾಕೆ? ಅವರ ತಾಯಿಯೂ ಸಹ ಬಿಗ್ ಬಾಸ್ ಶೋ ನೋಡುತ್ತಿರುತ್ತಾರೆ. ಬಹುಶಃ ಕಾವ್ಯ ಅವರ ಅಮ್ಮ ನಿಮಗೂ ಅಭಿಮಾನಿ ಆಗಿರಬಹುದು? ಆದರೆ ನೀವು ಆಡಿದ ಮಾತಿನಿಂದ ಅವರ ಮನಸ್ಸಿಗೆ ನೋವು ಆಗಿರಬಹುದು" ಎಂದು ಸುದೀಪ್ ಕ್ಲಾಸ್ ತೆಗೆದುಕೊಂಡರು.
Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
ಸುದೀಪ್ ಯಾವಾಗ ಈ ವಿಚಾರವನ್ನು ಪ್ರಸ್ತಾಪ ಮಾಡಿದರೋ, ಕೂಡಲೇ ಅದಕ್ಕೆ ಸಮಜಾಯಿಷಿ ನೀಡಲು ಅಶ್ವಿನಿ ಗೌಡ ಪ್ರಯತ್ನ ಮಾಡಿದರು. ಆದರೆ ಅದನ್ನು ಸುದೀಪ್ ಒಪ್ಪಿಕೊಳ್ಳಲಿಲ್ಲ. "ನೀವು ಏನೇ ಹೇಳಿ, ನಾನಂತೂ ಅದನ್ನು ಒಪ್ಪೋದಿಲ್ಲ" ಎಂದು ಖಡಕ್ ಆಗಿ ಹೇಳಿದರು. ಅಂತಿಮವಾಗಿ ತಾನು ಮಾತಾಡಿದ್ದು ತಪ್ಪಾಯ್ತು ಎಂದು ಅಶ್ವಿನಿ ಗೌಡ ಕ್ಷಮೆ ಕೇಳಿದರು.