ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಕ್ಯಾಟ್ ಸೂಟ್‌ ಟ್ರೆಂಡಿಯಾಗಿಸಿದ ಶನಾಯಾ ಕಪೂರ್‌

Shanaya Kapoor: ಶೀರ್‌ ವಿನ್ಯಾಸದ ಟರ್ಟಲ್‌ ನೆಕ್‌ ಲೈನ್‌ನ ಕ್ಯಾಟ್‌ ಸೂಟನ್ನು ಧರಿಸಿದ ಶನಾಯಾ ಈ ಉಡುಗೆ ಮತ್ತೊಮ್ಮೆ ಟ್ರೆಂಡಿಯಾಗಲು ಕಾರಣಕರ್ತರಾಗಿದ್ದಾರೆ. ಇದ್ಯಾವ ಬಗೆಯ ಔಟ್‌ಫಿಟ್‌? ಇದರ ವಿಶೇಷತೆ ಏನು? ಈ ಕುರಿತ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಶನಾಯಾ ಕಪೂರ್‌, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ಶನಾಯಾ ಕಪೂರ್‌ ಧರಿಸಿದ್ಧ ಕ್ಯಾಟ್‌ ಸೂಟ್‌ ಟ್ರೆಂಡಿಯಾಗಿದೆ.

2/5

ಫ್ಯಾಷನ್‌ ಶೂಟ್‌ವೊಂದರಲ್ಲಿ ಯುವ ನಟಿ ಶನಾಯಾ ಕಪೂರ್‌ ಧರಿಸಿದ್ದ, ಶೀರ್‌ ವಿನ್ಯಾಸದ ಟರ್ಟಲ್‌ ನೆಕ್‌ ಲೈನ್‌ನ ಕ್ಯಾಟ್‌ ಸೂಟ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದ್ದು, ಟ್ರೆಂಡಿಯಾಗಿದೆ.

3/5

ಕ್ಯಾಟ್‌ ಸೂಟ್‌ ಎಂದರೇನು?

ಸಿಂಪಲ್ಲಾಗಿ ಹೇಳುವುದಾದಲ್ಲಿ, ಕತ್ತಿನಿಂದ ಕೈಗಳು ಹಾಗೂ ಮೈಗೆ ಅಂಟಿಕೊಂಡತಿರುವ ಸ್ಲಿಮ್‌ ಫಿಟ್‌ ಇದು. ಅದು ಶೀರ್‌ನದ್ದಾಗಬಹುದು ಅಥವಾ ಇನ್ನಿತರೇ ಫ್ಯಾಬ್ರಿಕ್‌ನದ್ದಾಗಬಹುದು. ಆಂಗ್ಲ ಸಿನಿಮಾ ಬ್ಯಾಟ್‌ಮೆನ್‌ ಸೀರೀಸ್‌ನಲ್ಲಿ ಕ್ಯಾಟ್‌ ವುಮೆನ್‌ ಪಾತ್ರದಾರಿ ಈ ಔಟ್‌ಫಿಟ್‌ ಧರಿಸಿದ ನಂತರ ಇಂತಹ ಉಡುಗೆಗೆ ಕ್ಯಾಟ್‌ ಸೂಟ್‌ ಎಂದು ಕರೆಯುವುದು ರೂಢಿಯಾಯಿತು. ಅದೇ ಕ್ಯಾಟ್‌ ಸೂಟ್‌ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

4/5

ಶನಾಯಾ ಧರಿಸಿದ ಕ್ಯಾಟ್‌ ಸೂಟ್‌ ಔಟ್‌ಫಿಟ್‌ ವಿಶೇಷತೆ

ಅಂದಹಾಗೆ ಎಲ್ಲಾ ಕ್ಯಾಟ್‌ ಸೂಟ್‌ಗಳು ಒಂದೇ ಬಗೆಯದ್ದಾಗಿ ಇರುವುದಿಲ್ಲ. ಸ್ಟಿಚ್ಚಿಂಗ್‌ ಹಾಗೂ ವಿನ್ಯಾಸ ಬದಲಾಗಬಹುದು. ಇನ್ನು, ಶನಾಯಾ ಧರಿಸಿದ ಕ್ಯಾಟ್‌ ಸೂಟ್‌ ಟರ್ಟಲ್‌ ನೆಕ್‌ಲೈನ್‌ ಹಾಗೂ ಲಾಂಗ್‌ ಸ್ಲೀವ್‌ ಹೊಂದಿದೆ. ಇಡೀ ಡ್ರೆಸ್‌ ತುಂಬೆಲ್ಲಾ ಫಾಲಿಂಗ್‌ ಫ್ಲವರ್ಸ್ ವಿನ್ಯಾಸವಿದೆ. ಇದಕ್ಕೆ ಹೊಂದುವಂತೆ ಬೂಟ್ಸ್ ಧರಿಸಿದ್ದಾರೆ. ಒಟ್ಟಾರೆ, ಶನಾಯ ಮೂಲಕ ಈ ಡ್ರೆಸ್‌ ಮತ್ತೆ ಟ್ರೆಂಡಿಗೆ ಬಂದಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

5/5

ಫ್ಯಾಷನೆಬಲ್‌ ಹುಡುಗಿ ಶನಾಯಾ

ಅಂದಹಾಗೆ, ಶನಾಯಾ ಕಪೂರ್‌ ಯುವ ನಟಿ. ಒಂದೆರಡು ಸಿನಿಮಾಗಳಲ್ಲಿ ನಟಿಸಿರುವ ಈಕೆಯ ತಂದೆ ಕೂಡ ನಟ. ಶನಾಯಾ ಅನಿಲ್‌ ಕಪೂರ್‌ ತಮ್ಮ ಸಂಜಯ್‌ ಕಪೂರ್‌ನ ಮಗಳು. ಮೊದಲಿನಿಂದಲೇ ಫ್ಯಾಷನ್‌ ಶೋ ಹಾಗೂ ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶನಾಯಾ, ಇದೀಗ ಬಾಲಿವುಡ್‌ನಲ್ಲಿ ತಳವೂರುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸಖತ್‌ ಫ್ಯಾಷೆನಬಲ್‌ ಹುಡುಗಿ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author