ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ನೋವು ಎನ್ನುವುದು ಸಾಮಾನ್ಯ ಸಂಗತಿ. ಹೊಟ್ಟೆ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಈ ಮಾಸಿಕ ದಿನಗಳಲ್ಲಿ ನೋವು ನಿವಾರಕಗಳು (Menstrual Periods Health Tips) ಹೆಚ್ಚಾಗಿ ಪರಿಹಾರವಾಗಿದ್ದರೂ, ಅನೇಕ ಮಹಿಳೆಯರು ಈಗ ಮುಟ್ಟಿನ ಚಕ್ರದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಅಧಿಕ ರಕ್ತಸ್ರಾವವಾಗಿ ಆಯಾಸ ಹಾಗೂ ತಲೆ ಸುತ್ತುವಿಕೆ ಇರುತ್ತದೆ. ಅಧಿಕ ರಕ್ತಸ್ರಾವಕ್ಕೆ ಹಲವು ಕಾರಣಗಳಿದ್ದು, ಸಾಮಾನ್ಯ ಕಾರಣಗಳಲ್ಲಿ ಹಾರ್ಮೋನುಗಳ ಅಸಮತೋಲನವೂ ಸೇರಿದೆ. ಈಸ್ಟ್ರೊಜೆನ್ ಅಥವಾ ಪ್ರೊಜೆಸ್ಟರಾನ್ ಅಥವಾ ಅವುಗಳ ಸರಿಯಾದ ಸಮತೋಲನದ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಅಧಿಕ ರಕ್ತಸ್ರಾವದಿಂದ ಸುಸ್ತು, ತಲೆ ಸುತ್ತುವಿಕೆ ಮಾತ್ರ ಅಲ್ಲದೇ ಹಲವು ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಅಧಿಕ ರಕ್ತಸ್ರಾವವಾಗುವ ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಬಹುದು. ಕಬ್ಬಿಣದ ಕೊರತೆಯಿಂದಾಗಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಕಷ್ಟವಾಗಬಹುದು. ಅಷ್ಟೇ ಅಲ್ಲದೇ ಪಿರಿಯೆಡ್ಸ್‌ನಲ್ಲಿ ಏರುಪೇರಾಗಲು ಹಾಗೂ ಅಧಿಕ ರಕ್ತಸ್ರಾವವಾಗಲೂ ಥೈರಾಯ್ಡ್ ಕೂಡಾ ಕಾರಣ ಎನ್ನಲಾಗುತ್ತದೆ. ಇನ್ನೂ ಕೆಲವರಿಗೆ ರಕ್ತದೊತ್ತಡ ಇಳಿಯುತ್ತದೆ. ದಿನ ನಿತ್ಯದ ಕೆಲವೊಂದು ಸಣ್ಣ ಬದಲಾವಣೆಯಿಂದ ಈ ಸಮಸ್ಯೆಯನ್ನು ನಾವು ಕಡಿಮೆ ಮಾಡಿಕೊಳ್ಳಬಹುದು.
ಜೀವನ ಶೈಲಿ ಬದಲಾವಣೆ ಹೇಗೆ?
ಸಮತೋಲಿತ ಆಹಾರ: ಯಾವುದೇ ಸಮಸ್ಯೆಯನ್ನು ಸರಿಪಡಿಸುವ ಗುಣ ಆಹಾರಕ್ಕಿರುತ್ತದೆ. ಸರಿಯಾದ ಪ್ರಮಾಣದಲ್ಲಿ ಸೇವಿದರೆ ಆಹಾರ ಅಮೃತವಾಗುತ್ತದೆ. ತರಕಾರಿಗಳು, ದ್ವಿದಳ ಧಾನ್ಯಗಳು, ಕಡಿಮೆ ಕೊಬ್ಬಿನ ಮಾಂಸ, ಬೀಜಗಳು ಮತ್ತು ಬಲವರ್ಧಿತ ಧಾನ್ಯಗಳು ಸೇರಿದಂತೆ ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸಬೇಕು. ಇದರಿಂದ ದೇಹದಲ್ಲಿ ರಕ್ತ ಉತ್ಪಾದನೆಯಾಗಲು ಸಹಾಯವಾಗುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.
ನೀರಿನಂಶವನ್ನು ಕಾಪಾಡಿಕೊಳ್ಳಿ: ಸರಿಯಾದ ನೀರಿನಂಶವು ಕಳೆದುಹೋದ ರಕ್ತದ ಪ್ರಮಾಣವನ್ನು ಸರಿದೂಗಿಸುವುದಲ್ಲದೆ, ಭಾರೀ ರಕ್ತಸ್ರಾವದ ಸಮಯದಲ್ಲಿ ತಲೆತಿರುಗುವಿಕೆ ಮತ್ತು ಆಯಾಸವನ್ನು ಸಹ ಕಡಿಮೆ ಮಾಡುತ್ತದೆ.
ನಿಯಮಿತ ದೈಹಿಕ ಚಟುವಟಿಕೆ: ಆರೋಗ್ಯಕರ ತೂಕ ನಿರ್ವಹಣೆಯಿಂದ ಈ ಸಮಸ್ಯೆ ಕೊಂಚ ಮಟ್ಟಿಗೆ ಕಡಿಮೆಯಾಗಬಹುದು. ಸೈಕ್ಲಿಂಗ್‌ನಂತಹ ನಿಯಮಿತ ಚಟುವಟಿಕೆಯೊಂದಿಗೆ ಸೇರಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Menstrual Leave: ಮಹಿಳಾ ನೌಕರರಿಗೆ ಮುಟ್ಟಿನ ರಜೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆ
ಒತ್ತಡ ನಿರ್ವಹಣೆ: ಹಾರ್ಮೋನುಗಳ ಸಮತೋಲನ ಮತ್ತು ಋತುಚಕ್ರವನ್ನು ಬದಲಾಯಿಸುವ ಅಂಶಗಳಲ್ಲಿ ಒತ್ತಡವೂ ಒಂದು. ಯೋಗ, ಧ್ಯಾನ ಮತ್ತು ಸರಿಯಾದ ನಿದ್ರೆಯ ಅಭ್ಯಾಸಗಳು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
ಅರಿಶಿಣ ಹಾಗೂ ಅಲೋವೆರಾ: ಮುಟ್ಟಿನ ಸಮಯದಲ್ಲಿ ಹೆಚ್ಚು ಹೊಟ್ಟೆ ನೋವು ಹಾಗೂ ರಕ್ತಸ್ರಾವವಿದ್ದರೆ, ಅರ್ಧ ಚಮದಷ್ಟು ಅರಿಶಿಣವನ್ನು ಹಾಲು ಅಥವಾ ನೀರಿಗೆ ಹಾಕಿ ಕುಡಿಯಿರಿ. ಇಲ್ಲವೇ ಅಲೋವೆರಾ ರಸವನ್ನು ಕುಡಿದರೂ ಸ್ರಾವ ನಿಲ್ಲಬಹುದು.