ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೋಪ್‌ ಆವಿಷ್ಕಾರದ ಮೊದಲು ಜನರು ಬಟ್ಟೆ ವಾಶ್ ಹೇಗೆ ಮಾಡ್ತಿದ್ರು ಗೊತ್ತಾ?

ನಮ್ಮ ಪೂರ್ವಜರು ಯಾವುದೇ ರೀತಿಯ ರಾಸಾಯನಿಕ ಸೋಪ್ ಮತ್ತು ಡಿಟರ್ಜೆಂಟ್ ಪೌಡರ್‌ ಬಳಕೆ ಮಾಡುತ್ತಿರಲಿಲ್ಲ. ಹಾಗಾದರೆ ಅವರು ಬಟ್ಟೆ ಒಗೆಯಲು ಏನನ್ನು ಬಳಸುತ್ತಿದ್ದರು ಎಂಬುದೆ ಮಿಲಿಯನ್‌ ಡಾಲರ್‌ ಪ್ರಶ್ನೆ. ಅವರು ಬಟ್ಟೆ ತೊಳೆಯಲು ಕೆಲವು ಹಣ್ಣುಗಳು, ಕಾಯಿ ಸೇರಿ ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

ರಾಜರ ಕಾಲದಲ್ಲಿ ಬಟ್ಟೆ ವಾಶ್‌ಗೆ ಯಾವ ಟ್ರಿಕ್ಸ್ ಬಳಕೆ ಮಾಡ್ತಿದ್ರು ಗೊತ್ತಾ?

ಸಾಂದರ್ಭಿಕ ಚಿತ್ರ.

Profile Pushpa Kumari Mar 18, 2025 6:31 PM

ನವದೆಹಲಿ: ನಾವು ಧರಿಸುವ ಬಟ್ಟೆಗಳು (Clothes) ಶುಭ್ರವಾಗಿಟ್ಟುಕೊಳ್ಳಬೇಕೆಂದು ತರಹೇವಾರಿ ಡಿಟರ್ಜೆಂಟ್ ಸೋಪ್, ಸೋಪ್‌ ಪೌಡರ್ ಬಳಸುತ್ತೇವೆ. ಒಂದು ವೇಳೆ ಅಚಾನಕ್ ಆಗಿ ಕೊಳೆಯಾದರೆ ಅದನ್ನು ಮತ್ತೆ ಶುಭ್ರಗೊಳಿಸಲು ಕ್ಲೋತ್ ವಾಶ್, ಲಿಕ್ವಿಡ್ ಎಂದೆಲ್ಲ ಅನೇಕ ಪ್ರಯೋಗಗಳನ್ನು ಮಾಡುತ್ತೇವೆ. ಈ ಸೋಒ, ಡಿಟರ್ಜೆಂಟ್ ಪೌಡರ್ ಬಳಕೆಗೂ ಮುನ್ನ ಜನರು ಯಾವ ರೀತಿ ಬಟ್ಟೆ ಒಗೆಯುತ್ತಿದ್ದರು ಎಂಬ ಬಗ್ಗೆ ನೀವೆಂದಾದರೂ ಯೋಚನೆ ಮಾಡಿದ್ದೀರಾ? ಡಿಟರ್ಜೆಂಟ್, ಲಿಕ್ವಿಡ್ ಎಲ್ಲವೂ ಇತ್ತೀಚಿನ ಹೊಸ ಆವಿಷ್ಕಾರಗಳ ಸಾಲಿನಲ್ಲಿ ಸೇರಿದ್ದು. ರಾಜ ಮಹಾರಾಜರ ಕಾಲದಲ್ಲಿ ಬಟ್ಟೆ ಒಗೆಯಲು ಏನು ಬಳಸುತ್ತಿದ್ದರು? ಸೋಪ್ ಬದಲು ಅಲ್ಲಿ ಯಾವ ವಸ್ತುವನ್ನು ಬಟ್ಟೆ ಉಜ್ಜಲು ಬಳಸುತ್ತಿದ್ದರು ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಅಂಟುವಾಳವೇ ಸೂಪರ್ ಸೋಪ್

ನಮ್ಮ ಪೂರ್ವಜರ ಕಾಲದಲ್ಲಿ ಯಾವುದೇ ರೀತಿಯ ರಾಸಾಯನಿಕಯುಕ್ತ ಸೋಪ್ ಮತ್ತು ಡಿಟರ್ಜೆಂಟ್ ಪೌಡರ್‌ ಬಳಕೆ ಮಾಡುತ್ತಿರಲಿಲ್ಲ. ಹಾಗಾದರೆ ಅವರು ಏನನ್ನು ಬಳಸುತ್ತಿದ್ದರು ಎನ್ನುವುದೇ ಯಕ್ಷ ಪ್ರಶ್ನೆ. ಹಿಂದಿನ ಕಾಲದಲ್ಲಿ ಬಟ್ಟೆ ತೊಳೆಯಲು ಕೆಲವು ಹಣ್ಣುಗಳು, ಕಾಯಿ ಮತ್ತಿತರ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದರು ಎಂದರೆ ನೀವು ನಂಬಲೇಬೇಕು. ಶ್ರೀ ಕೃಷ್ಣ ಮತ್ತು ಶ್ರೀರಾಮನ ಕಾಲದಲ್ಲಿ ಬಟ್ಟೆ ಒಗೆಯಲು ಅಂಟುವಾಳದ ಹಣ್ಣುಗಳನ್ನು ಬಳಸುತ್ತಿದ್ದರು ಎಂಬುದು ಕೆಲವೆಡೆ ಉಲ್ಲೇಖಿಸಲಾಗಿದೆ. ಅಂಟುವಾಳದ ಸಿಪ್ಪೆಯಲ್ಲಿ ನೊರೆ ಅಂಶವಿದ್ದು ಇದರಲ್ಲಿ ಬಟ್ಟೆ ಉಜ್ಜಲಾಗುತ್ತಿತ್ತು. ಇದು ಪ್ರಾಚೀನ ಆಯುರ್ವೇದದಲ್ಲಿಯೂ ಕೂಡ ಉಲ್ಲೇಖಿಸಲ್ಪಟ್ಟಿದೆ. ಅಂಟುವಾಳದಿಂದ ಬಳಕೆಯಿಂದ ಬಟ್ಟೆ ಶುಭ್ರವಾಗುವ ಜತೆಗೆ ಅನೇಕ ಆರೋಗ್ಯ ಪ್ರಯೋಜನಗಳು ಸಹ ಸಿಗುತ್ತವೆ. ಅದೇ ರೀತಿ ಉಡುಪಿನಲ್ಲಿ ಯಾವುದೇ ಕಲೆಗಳಿದ್ದಾಗ ಲಿಂಬೆ ರಸ ಹಾಕಿ ಅದನ್ನು ತೆಗೆಯಲಾಗುತ್ತಿತ್ತು. ಅಂಟುವಾಳವನ್ನು ಪ್ರಾಚೀನ ಭಾರತದ ಸೂಪರ್ ಸೋಪ್ ಎಂಬ ಹೆಸರಿನಿಂದ ಸಹ ಕರೆಯಲಾಗುತ್ತದೆ.

ಬಿಸಿನೀರ ಪ್ರಯೋಗ

ರಾಜರ ಕಾಲದಲ್ಲಿ ಬಿಸಿ ನೀರಿಗೆ ಬಟ್ಟೆ ಹಾಕಿ ತೊಳೆಯುವ ವ್ಯವಸ್ಥೆ ಇತ್ತು. ಮೊದಲಿಗೆ ಬಿಸಿ ನೀರಿಗೆ ಬಟ್ಟೆ ಹಾಕಿ ನೆನೆಸಿಟ್ಟು ನೀರಿನ ಬಿಸಿ ತಣಿದ ಮೇಲೆ ಬಟ್ಟೆಯನ್ನು ಕಲ್ಲಿಗೆ ಹೊಡೆದು ಸ್ವಚ್ಛ ಮಾಡಲಾಗುತ್ತಿತ್ತು. ರಾಜ ಮಹಾರಾಜರ ಮನೆ ಬಟ್ಟೆಗಳನ್ನು ಶುಭ್ರಗೊಳಿಸಲು ಅಗಸರ (ಧೋಬಿ) ಸಮುದಾಯ ಹುಟ್ಟಿಕೊಂಡ ಬಳಿಕ ಬಟ್ಟೆಯನ್ನು ಒಗೆಯಲು ಮಡಕೆ ಹಾಗೂ ಕುಲುಮೆ ಬಳಕೆ ಮಾಡಲಾಗುತ್ತಿತ್ತು. ಕೆಲವರು ಕೆರೆ ನದಿಯ ಕಡೆಗೆ ಬಟ್ಟೆ ಕೊಂಡೊಯ್ದು ಅಂಟುವಾಳದಿಂದ ಒಗೆದು ನೀಡುವ ವ್ಯವಸ್ಥೆ ಕ್ರಮೇಣ ಚಿರಪರಿಚಿತವಾಯ್ತು.

ಇದನ್ನು ಓದಿ: Pinafore Dress Fashion 2025: ಮುಂಬರುವ ಸೀಸನ್‌ಗೆ ಈಗಲೇ ಲಗ್ಗೆ ಇಟ್ಟ ಪೈನಾಪೋರ್ ಔಟ್‌ಫಿಟ್ಸ್!

ರೆಹ್ ಪುಡಿ

ಹಳೆ ಕಾಲದಲ್ಲಿ ನದಿ ಮತ್ತು ಕೊಳಗಳ ತೀರದಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಬಟ್ಟೆ ಒಗೆಯಲು ರೆಹ್ ಪುಡಿ ಬಳಸುತ್ತಿದ್ದರು. ಗ್ರಾಮೀಣ ಭಾಗದ ನದಿ ಕೊಳ ತೀರದಲ್ಲಿ, ಖಾಲಿ ಭೂಮಿ ಮತ್ತು ಹೊಲದಲ್ಲಿ ಬಿಳಿ ಬಣ್ಣದ ಪುಡಿ ಕಂಡು ಬರುತ್ತದೆ. ಇದನ್ನು ರೆಹ್ ಎಂದು ಕರೆಯುತ್ತಾರೆ. ಹೆಚ್ಚಾಗಿ ನದಿ ತೀರದ ಪ್ರದೇಶದಲ್ಲಿ ಈ ರೆಹ್ ಪುಡಿ ಹೆಚ್ಚಾಗಿ ಕಾಣಸಿಗುತ್ತದೆ. ಇದನ್ನು ನೀರಿನಲ್ಲಿ ಬೆರೆಸಿ ಬಟ್ಟೆ ನೆನಸಿ ಬಳಿಕ ಒಗೆಯುತ್ತಿದ್ದರು.

ಬೇರು ನಾರಿನಿಂದ ಸ್ವಚ್ಛತೆ

ಬಟ್ಟೆಯನ್ನು ನೀರಿನಲ್ಲಿ ಹಾಕಿದಾಗಲೂ ಸ್ವಚ್ಛಗೊಳ್ಳದಿದ್ದಾಗ ಅರಮನೆಯ ದಾಸಿಯರು ತಮ್ಮ ಕೂದಲಿನ ಮೂಲಕ ಅರಮನೆಯ ರಾಜ, ರಾಣಿಯ ಬಟ್ಟೆ ಶುಭ್ರಗೊಳಿಸುತ್ತಿದ್ದರಂತೆ ಎನ್ನುವ ಉಲ್ಲೇಖವೂ ಇದೆ. ಕಾಲ ಕ್ರಮೇಣ ಕೂದಲಿನ ಬದಲು ಮರದ ನಾರು, ತೆಂಗಿನ ನಾರು ಎಲ್ಲ ಬಳಕೆಗೆ ಬಂದು ಬಟ್ಟೆ ಒಗೆಯುವ ಬ್ರಶ್ ಆವಿಷ್ಕಾರಗೊಂಡಿತು. ಈಗ ನಾವು ವಿವಿಧ ರೀತಿಯ ಸೋಪ್‌, ವಾಶಿಂಗ್‌ ಪೌಡರ್ ಬಳಸುತ್ತಿದ್ದರೂ ಇವೆಲ್ಲ ಅಂದಿನ ಕಾಲದ ಆವಿಷ್ಕಾರಗಳ ಮೂಲಕ ಜನ್ಮ ತಳೆದಿದ್ದು ಎನ್ನುವುದು ವಿಶೇಷ.