Pinafore Dress Fashion 2025: ಮುಂಬರುವ ಸೀಸನ್‌ಗೆ ಈಗಲೇ ಲಗ್ಗೆ ಇಟ್ಟ ಪೈನಾಪೋರ್ ಔಟ್‌ಫಿಟ್ಸ್!
Pinafore Dress Fashion 2025: ಮುಂಬರುವ ಸೀಸನ್‌ಗೆ ಈಗಾಗಲೇ ನಾನಾ ಬಗೆಯ ಪೈನಾಫೋರ್ ಡ್ರೆಸ್‌ಗಳು ಲಗ್ಗೆ ಇಟ್ಟಿವೆ. ಯಾವುದೇ ವಯಸ್ಸಿನ ಮಾನಿನಿಯರಿಗೂ ಯಂಗ್‌ಲುಕ್ ನೀಡುವ ಈ ಉಡುಗೆಗಳು, ಯಾವ್ಯಾವ ಡಿಸೈನ್‌ನಲ್ಲಿ ಬಂದಿವೆ? ಆಯ್ಕೆ ಹೇಗೆ? ಈ ಎಲ್ಲದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಸೀಸನ್ ಇನ್ನೂ ಅಧಿಕೃತವಾಗಿ ಎಂಟ್ರಿ ನೀಡಿಲ್ಲ! ಆಗಲೇ ಪೈನಾಫೊರ್ ಫ್ಯಾಷನ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ (Pinafore Dress Fashion 2025) ಲಗ್ಗೆ ಇಟ್ಟಿವೆ. ಬಗೆಬಗೆ ಶೇಡ್‌ಗಳಲ್ಲಿ, ಸಿಂಪಲ್ ವಿನ್ಯಾಸಗಳಲ್ಲಿ ಮಾನಿನಿಯರನ್ನು ಬರಸೆಳೆದಿವೆ. ಟೂ ಪೀಸ್ ಇರುವ ಈ ಔಟ್‌ಫಿಟ್ಸ್, ಡಾರ್ಕ್-ಲೈಟ್ ಶೇಡ್ಸ್‌ನಲ್ಲಿ ಟ್ರಾಪಿಕಲ್, ಫ್ಲೋರಲ್, ಜೆಮೆಟ್ರಿಕಲ್, ಫ್ಲೋರಲ್ ಪ್ರಿಂಟ್ಸ್‌ನಲ್ಲಿ ಕಾಣಿಸಿಕೊಂಡಿವೆ. ಧರಿಸಿದರೂ ಭಾರವೆನಿಸದ, ಉಸಿರುಗಟ್ಟಿಸದ, ಆರಾಮ ಎನಿಸುವ, ಯಾವುದೇ ಟೀ ಶರ್ಟ್ ಮೇಲೂ ಧರಿಸಬಹುದಾದ ಡಿಸೈನ್‌ಗಳಲ್ಲಿ ಎಂಟ್ರಿ ನೀಡಿವೆ. ಅಂದಹಾಗೆ, ಇವು ತಕ್ಷಣಕ್ಕೆ ನೋಡಲು ಏಪ್ರಾನ್‌ನಂತೆ ಕಂಡರೂ ಅದೇ ರೀತಿ ಡಿಸೈನ್ ಆದ ಡ್ರೆಸ್‌ಗಳಿವು. ಪ್ರತಿ ವರ್ಷ ನಾನಾ ವೆರೈಟಿ ಡಿಸೈನ್‌ನಲ್ಲಿ ಆಗಮಿಸುತ್ತಲೇ ಇರುತ್ತವೆ.

ವೆರೈಟಿ ಪ್ರಿಂಟ್ಸ್‌ನಲ್ಲಿ ಪೈನಾಪೋರ್ ಡ್ರೆಸ್‌ಗಳು
ಜೀಬ್ರಾ ಪ್ರಿಂಟ್ಸ್, ಸ್ಟ್ರೈಫ್ಸ್, ಫ್ಲೋರಲ್, ಪ್ರಿಂಟೆಡ್‌ನಲ್ಲೂ ಪೈನಾಫೊರ್ ಡಿಸೈನ್ಸ್ ಲಭ್ಯ. ಇನ್ನು ರಾಯಲ್ ಬ್ಲ್ಯೂ, ಪೀಚ್, ಚಾಕೋಲೇಟ್, ಟಾಫಿ, ಮಜೆಂತಾ, ತಿಳಿ ಗುಲಾಬಿ, ತಿಳಿ ಹಳದಿ, ಕೆಂಪು, ನೀಲಿ, ಹಸಿರು, ರೇಡಿಯಂ, ಕೇಸರಿ ಬಣ್ಣಗಳು ಪೈನಾಫೊರ್ ಉಡುಪಿನಲ್ಲಿರುವ ಟ್ರೆಂಡಿ ಕಲರ್ಸ್. ಫ್ಯಾಷನಿಸ್ಟಾ ರಾಜ್ ಪ್ರಕಾರ, ಇಂದು ಹೆಚ್ಚು ಟ್ರೆಂಡ್ನಲ್ಲಿರುವುದು ಮಿಕ್ಸ್ ಅಂಡ್ ಮ್ಯಾಚ್ ಮಾಡಬಹುದಾದ ಪೈನಾಫೊರ್ ಉಡುಪುಗಳು.

ಗ್ಲಾಮರಸ್ ಪೈನಾಪೋರ್ ಔಟ್‌ಫಿಟ್ಸ್
ಕೆಲವೊಂದು ಪೈನಾಫೊರ್ ಡ್ರೆಸ್‌ಗಳಿಗೆ ಟೀ ಶರ್ಟ್ ಧರಿಸುವ ಅಗತ್ಯವಿರುವುದಿಲ್ಲ. ಮೆಗಾ ಸ್ಲೀವ್ ಇಲ್ಲವೇ ಅಗಲವಾದ ಶೌಲ್ಡರ್ ಡಿಸೈನ್ ಹೊಂದಿರುತ್ತವೆ. ಇನ್ನು ಕೆಲವು ಉದ್ದನಾದ ಸ್ಲೀವ್‌ಗಳನ್ನು ಹೊಂದಿರುತ್ತವೆ. ಸೆಲೆಬ್ರೆಟಿಗಳು ಈ ಔಟ್‌ಫಿಟ್ ಪ್ರಿಯರು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಯಾರಿಗೆ ಯಾವುದು?
ಉದ್ದಗಿರುವವರಿಗೆ ಯಾವುದೇ ಬಗೆಯದ್ದಾದರೂ ಪೈನಾಫೊರ್ ಡ್ರೆಸ್ ಸೂಟ್ ಆಗುತ್ತವೆ. ಕೊಂಚ ದಪ್ಪಗಿನ ದೇಹ ಹೊಂದಿರುವವರು ಮಾತ್ರ ಆದಷ್ಟು ಸ್ಲಿಮ್ ಲುಕ್ ನೀಡುವ ಕ್ರೆಪ್, ಜಾರ್ಜೆಟ್‌ನ ಪೈನಾಪೋರ್ ಡ್ರೆಸ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ವಿಂಟೇಜ್ ಹಾಗೂ ರಾಯಲ್ ಕಲರ್‌ಗಳ ಪೈನಾಫೊರ್ ಕ್ಲಾಸಿ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಈ ಸುದ್ದಿಯನ್ನೂ ಓದಿ | Star Fashion Interview 2025: ಸೂಟ್‌ನಲ್ಲಿ ಸ್ಯಾಂಡಲ್‌ವುಡ್ ನಟ ನಿರಂಜನ್ ಸುಧೀಂದ್ರ ಸೂಪರ್ ಮಾಡೆಲ್ ಲುಕ್
ಪೈನಾಫೋರ್ ಡ್ರೆಸ್‌ಗಳ ಸೀಕ್ರೇಟ್
- ಪ್ರಿಂಟೆಡ್-ಫ್ಲೋರಲ್ ಸಮ್ಮರ್ ಪಾರ್ಟಿಗೆ ಸೂಕ್ತ.
- ತೀರಾ ದಪ್ಪಗಿರುವವರಿಗೆ ಹೊಂದದು.
- ಫಿಟ್ಟಿಂಗ್ ಇದ್ದರೆ ಮಾತ್ರ ಸೂಟ್ ಆಗುತ್ತದೆ.
- ಮಾರ್ಡರ್ನ್ ಲುಕ್ ಬಯಸುವವರಿಗೆ ಹೇಳಿಮಾಡಿಸಿದ ಡ್ರೆಸ್‌ಗಳಿವು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)