ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Valentine’s Day: ಪ್ರೇಮಿಗಳ ದಿನದ ಹಿಂದೆ ರಕ್ತರಂಜಿತ ಇತಿಹಾಸ; ಯುದ್ಧದ ನಡುವೆ ಅರಳಿದ ಪ್ರೀತಿಯ ಕಥೆ

ಪ್ರೇಮಿಗಳಿಗೂ ತಮ್ಮ ಸಿಹಿ-ಕಹಿ ನೆನಪುಗಳನ್ನು ಅಚರಿಸಿಕೊಳ್ಳಲು ಒಂದು ದಿನ ಬೇಕಲ್ಲವೇ? ಅದಕ್ಕೆ ಫೆ.14ರಂದು ಅವರ ದಿನವನ್ನಾಗಿ ಆಚರಿಸಲಾಗುತ್ತ ಬರಲಾಗುತ್ತಿದೆ. ಇಂದು ಪ್ರೇಮಿಗಳು ತಮ್ಮ ಮನಸ್ಸಂಗಾತಿಯ ಜೊತೆ ಕಾಲ ಕಳೆಯುವ ಮೂಲಕ ಆಚರಿಸಿ, ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ ಖುಷಿ ಪಡಿಸುತ್ತಾರೆ.

ಪ್ರೇಮಿಗಳ ದಿನ

ಬೆಂಗಳೂರು: ಇಂದು ಪ್ರೇಮಿಗಳ ದಿನ (Valentine's Day). ಪ್ರತಿ ಪ್ರೇಮಿಯ ಮನಸ್ಸಿನಲ್ಲಿ ನವಿರಾದ ಭಾವನೆ, ಪುಳಕ ಮನೆಮಾಡಿರುತ್ತದೆ. ಮನದಲ್ಲಿ ಬಚ್ಚಿಟ್ಟದ್ದ ಪ್ರೀತಿಯನ್ನು ಹೇಳಿಕೊಳ್ಳುವ ತವಕ. ಅದಕ್ಕಾಗಿ ಫೆಬ್ರವರಿ 14ನೇ ತಾರೀಕಿಗಾಗಿ ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಹಲವರು ತಮ್ಮ ಪ್ರೇಮ ನಿವೇದನೆಗೆ ಇದೇ ಸೂಕ್ತ ದಿನ ಎಂದು ಎಂದುಕೊಂಡಿದ್ದರೆ, ಇನ್ನೂ ಕೆಲವರು ತಮ್ಮೊಲವಿನ ಸಂಗಾತಿಯೊಂದಿಗೆ ಕಾಲ ಕಳೆಯಲು, ಉಡುಗೊರೆ ನೀಡಿ ಸಂಭ್ರಮಿಸಲು ಈ ದಿನಕ್ಕಾಗಿ ಕಾಯುತ್ತಾರೆ. ಪ್ರತಿ ವರ್ಷ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಆಚರಿಸುತ್ತಾ ಬಂದಿದ್ದಾರೆ. ಫೆಬ್ರವರಿ 7 ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ.

ವ್ಯಾಲೆಂಟೈನ್‌ ವೀಕ್‌ (Valentine's Week) ಆರಂಭದಿಂದ ಪ್ರೇಮಿ, ತನ್ನ ಸಂಗಾತಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಮೆಚ್ಚಿನ ಉಡುಗೊರೆ ನೀಡುವ ಮೂಲಕ ಅವರನ್ನು ಇಂಪ್ರೆಸ್‌ ಮಾಡುತ್ತಾರೆ. ಆದರೆ ಪ್ರೇಮಿಗಳ ದಿನ ಆಚರಿಸುವುದು ಏಕೆ..? ವ್ಯಾಲೆಂಟೈನ್‌ ಡೇ ಎಂದರೇನು..? ಈ ವ್ಯಾಲೆಂಟೈನ್‌ ಎಂದರೆ ಯಾರು..? ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಪ್ರತಿಯೊಂದು ಆಚರಣೆ ಹಿಂದೆ ಒಂದು ಹಿನ್ನೆಲೆ ಇರುತ್ತದೆ. ಹಾಗೇ ಪ್ರೇಮಿಗಳ ದಿನ ಸೆಲಬ್ರೇಷನ್‌ಗೆ ಒಂದು ಮಹತ್ವ ಇದೆ.

ಪ್ರೇಮಿಗಳ ದಿನದ ಇತಿಹಾಸ ಮತ್ತು ಮಹತ್ವ:

ವಾಲೈಂಟೈನ್ (St. Valentine) ಎಂಬ ಸಂತರು ಮರಣ ಹೊಂದಿದ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂತ ವ್ಯಾಲೆಂಟೈನ್‌ ಅವರು ಸಂತರಾಗಿದ್ದರೂ ಕೂಡ ಪ್ರೇಮಿಗಳನ್ನು ಒಟ್ಟು ಮಾಡಲು ಜೀವವನ್ನೇ ಮುಡಿಪಾಗಿಟ್ಟವರು.

ಅವರ ಕಾಲದಲ್ಲಿ ರೋಮ್ ಸಾಮ್ರಾಜ್ಯವನ್ನು ಎರಡನೇ ಕ್ಲಾಡಿಯಸ್ ಎಂಬ ರಾಜ ಆಳುತ್ತಿದ್ದ. ಸರ್ವಾಧಿಕಾರಿ ಧೋರಣೆ ಹೊಂದಿದ್ದ ಅವನು ತನ್ನ ಸೈನಿಕರಿಗೆ ಯುದ್ಧ ಮುಗಿಯುವವರೆಗೂ ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಯುವಕರು ಮದುವೆಯಾಗಬಾರದು ಎಂದು ಕಟ್ಟಪ್ಪಣೆಯನ್ನು ಹೊರಡಿಸಿದ್ದ. ಆದರೆ ವ್ಯಾಲೆಂಟೈನ್ ಅವರು ರಾಜನ ಧೋರಣೆಗೆ ವಿರುದ್ಧವಾಗಿದ್ದರು. ಅಲ್ಲದೇ ಅವರು ಮದುವೆಯಾಗಲು ಇಚ್ಛಿಸುವ ಹಾಗೂ ಪ್ರೀತಿಯಲ್ಲಿ ಬಿದ್ದಿರುವ ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡಿಸುತ್ತಿದ್ದರು.

Valentine's Day: ಪ್ರೇಮಿಗಳ ದಿನದಂದು ನಿಮ್ಮ ಪಾರ್ಟ್ನರ್ ಜೊತೆ ಈ ಸೌತ್‌ ರೊಮ್ಯಾಂಟಿಕ್‌ ಸಿನಿಮಾಗಳನ್ನು ನೋಡಿ!

ಈ ವಿಷಯ ರಾಜನಿಗೆ ತಿಳಿದು ವ್ಯಾಲೆಂಟೈನ್‌ ಅವರನ್ನು ಫೆಬ್ರುವರಿ 14 ರಂದು ಸೆರೆಮನೆಗೆ ತಳ್ಳುತ್ತಾನೆ. ಅವರು ಸೆರೆಮನೆಯಲ್ಲೇ ಮರಣ ಹೊಂದುತ್ತಾರೆ. ಹಾಗಾಗಿ ಆ ದಿನವನ್ನು ರೋಮ್ ಫಾದರ್‌ಗಳು ಪ್ರೇಮಿಗಳ ದಿನವನ್ನಾಗಿ ಆಚರಿಸಲು ನಿರ್ಧರಿಸುತ್ತಾರೆ. ಹೀಗಾಗಿ ಪ್ರೇಮಿಗಳು ಹಾಗೂ ಸೈನಿಕರ ಪಾಲಿಗೆ ಪ್ರೇಮ ಗುರುವಾಗಿದ್ದ ವಾಲೈಂಟೈನ್ ಅವರ ಮರಣ ದಿನವನ್ನು ವಾಲೆಂಟೈನ್ಸ್ ದಿನ ಎಂದು ಆಚರಿಸಲಾಗುತ್ತದೆ.

ಇನ್ನು ಈ ದಿನದಂದು ನೀವು ಮನಸ್ಸಂಗಾತಿಯ ಜೊತೆ ಕಾಲ ಕಳೆಯುವ ಮೂಲಕ ಆಚರಿಸಿ, ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ ಖುಷಿ ಪಡಿಸಿ. ಅವರೊಂದಿಗೆ ರೆಸ್ಟೋರೆಂಟ್‌ನಲ್ಲಿ ಜೊತೆಗೆ ಕುಳಿತು ಊಟ ಮಾಡುವುದು, ಪ್ರವಾಸ ಆಯೋಜಿಸುವುದು, ಲಾಂಗ್‌ ಡ್ರೈವ್‌ ಹೋಗುವುದು ಇಂತಹ ಸರ್ಪ್ರೈಸ್ ನೀಡುವ ಮೂಲಕ ಪ್ರೇಮಿಗಳ ದಿನವನ್ನು ಸೆಲೆಬ್ರೇಟ್ ಮಾಡಿ.