ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Valentine's Day: ಪ್ರೇಮಿಗಳ ದಿನದಂದು ನಿಮ್ಮ ಪಾರ್ಟ್ನರ್ ಜೊತೆ ಈ ಸೌತ್‌ ರೊಮ್ಯಾಂಟಿಕ್‌ ಸಿನಿಮಾಗಳನ್ನು ನೋಡಿ!

Romantic Movies: ಯಾವುದೇ ಜೋಡಿಗೂ ಪ್ರೇಮಿಗಳ ದಿನವು ತುಂಬಾ ವಿಶೇಷವಾದ ದಿನ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವವರಿಗೆ ಇದು ಇನ್ನೂ ವಿಶೇಷವಾಗಿರುತ್ತದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಹಿಟ್‌ಗಳನ್ನು ಒಳಗೊಂಡಿರುವ ಈ ಚಲನಚಿತ್ರಗಳನ್ನು ನಿಮ್ಮ ಪ್ರೇಮಿ ಜೊತೆ ಕುಳಿತು ಮನೆಯಲ್ಲಿಯೇ ಸಿನಿಮಾ ನೋಡಬಹುದು. ಧನುಷ್ , ನಿತ್ಯಾ ಮೆನನ್, ವಿಜಯ್ ದೇವರಕೊಂಡ (Vijay), ಗಣೇಶ್ ಮತ್ತು ದುಲ್ಕರ್ ಸಲ್ಮಾನ್‌ರಂತಹ ತಾರೆಯರ ಸಿನಿಮಾಗಳಿವು. ಯಾವುದೆಲ್ಲ ಅವು?

ನಿಮ್ಮ ಪಾರ್ಟ್ನರ್ ಜೊತೆ ಈ ಸೌತ್‌ ರೊಮ್ಯಾಂಟಿಕ್‌ ಸಿನಿಮಾಗಳನ್ನು ನೋಡಿ!

ಒಟಿಟಿ ಸಿನಿಮಾಗಳು -

Yashaswi Devadiga
Yashaswi Devadiga Feb 13, 2026 8:13 PM

ಯಾವುದೇ ಜೋಡಿಗೂ ಪ್ರೇಮಿಗಳ ದಿನವು (Valentine’s Day) ತುಂಬಾ ವಿಶೇಷವಾದ ದಿನ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವವರಿಗೆ ಇದು ಇನ್ನೂ ವಿಶೇಷವಾಗಿರುತ್ತದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಹಿಟ್‌ಗಳನ್ನು ಒಳಗೊಂಡಿರುವ ಈ ಚಲನಚಿತ್ರಗಳನ್ನು ನಿಮ್ಮ ಪ್ರೇಮಿ ಜೊತೆ ಕುಳಿತು ಮನೆಯಲ್ಲಿಯೇ ಸಿನಿಮಾ ನೋಡಬಹುದು. ಧನುಷ್ (Dhanush), ನಿತ್ಯಾ ಮೆನನ್, ವಿಜಯ್ ದೇವರಕೊಂಡ (Vijay), ಗಣೇಶ್ ಮತ್ತು ದುಲ್ಕರ್ ಸಲ್ಮಾನ್‌ರಂತಹ ತಾರೆಯರ ಸಿನಿಮಾಗಳಿವು. ಯಾವುದೆಲ್ಲ ಅವು?

ಲಿಟಲ್ ಹಾರ್ಟ್ಸ್

ಮೌಳಿ ತನುಜ್ ಪ್ರಶಾಂತ್ ಮತ್ತು ಶಿವಾನಿ ನಗರಂ, ಅಖಿಲ್ ಮತ್ತು ಖತ್ಯಾಯಿನಿ ಈ ಸಿನಿಮಾದಲ್ಲಿ ಇದ್ದಾರೆ. ಸ್ನೇಹ, ಪ್ರೀತಿ, ಹಾಸ್ಯ ಮತ್ತು ಮುದ್ದಾದ ಕ್ಷಣಗಳು ಸಿನಿಮಾದಲ್ಲಿದೆ, ಈ ಟಿವಿ ವಿನ್‌ನಲ್ಲಿ ಈ ಸಿನಿಮಾ ಇದೆ.

ಇದನ್ನೂ ಓದಿ: Golden Star Ganesh Brother: ಅಣ್ಣ ಹಾಕಿಕೊಟ್ಟ 4 ಕೋಟಿ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್‌ ಸಹೋದರ ಬೇಸರ

ಪೆಲ್ಲಿ ಚೂಪುಲು

ವಿಜಯ್ ದೇವರಕೊಂಡ ಮತ್ತು ರಿತು ವರ್ಮಾ ಪ್ರಶಾಂತ್ ಮತ್ತು ಚಿತ್ರಾ ಪಾತ್ರದಲ್ಲಿ ನಟಿಸಿದ್ದಾರೆ . ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು ತರುಣ್ ಭಾಸ್ಕರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ರಾಜ್ ಕಂದುಕುರಿ ಮತ್ತು ಯಶ್ ರಂಗಿನೇನಿ ನಿರ್ಮಿಸಿದ್ದಾರೆ. ಸನ್‌ ನೆಕ್ಟ್‌ನಲ್ಲಿ ಸಿನಿಮಾ ಇದೆ.

ದಿಯಾ

ದಿಯಾ (2020) ಕೆ.ಎಸ್. ಅಶೋಕ್ ನಿರ್ದೇಶನದ ಜನಪ್ರಿಯ ಕನ್ನಡ ಪ್ರಣಯ ನಾಟಕ ಚಿತ್ರವಾಗಿದ್ದು, ಕುಶೀ ರವಿ, ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ನಿಮ್ಮ ಕಣ್ಣಲ್ಲಿ ನೀರು ತರುತ್ತದೆ. ಅಮೆಜಾನ್‌ ಪ್ರೈಂನಲ್ಲಿ ಇದೆ.

ಮುಂಗಾರು ಮಳೆ

ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಸಿನಿಮಾ 'ಮುಂಗಾರು ಮಳೆ'. ಯೋಗರಾಜ್ ಭಟ್ ನಿರ್ದೇಶಿಸಿದ ಈ ಸಿನಿಮಾ 2006ರ ಡಿಸೆಂಬರ್ 29ರಂದು ತೆರೆಗೆ ಬಂದಿತ್ತು. ಚಿತ್ರವನ್ನು ತೆಲುಗಿನಲ್ಲಿ ವಾನ, ಬೆಂಗಾಲಿಯಲ್ಲಿ ಪ್ರೇಮೆರ್ ಕಹಿನಿ, ಒಡಿಯಾನಲ್ಲಿ ರೋಮಿಯೋ- ದ ಲವರ್ ಬಾಯ್ ಮತ್ತು ಮರಾಠಿಯಲ್ಲಿ ಪ್ರೇಮಾಯ ನಮಃ ಎಂದು ರಿಮೇಕ್ ಮಾಡಲಾಯಿತು, ಸಿನಿಮಾ youtube ನಲ್ಲಿ ಇದೆ.

ತಿರುಚಿತ್ರಂಬಲಂ

ಧನುಷ್ ಪಜಮ್ ಪಾತ್ರವನ್ನು ನಿರ್ವಹಿಸುತ್ತಾರೆ, ಒಬ್ಬ ಆಹಾರ ವಿತರಣಾ ಏಜೆಂಟ್, ಹಿಂದಿನ ಪ್ರೀತಿಯಿಂದ ಉಂಟಾದ ದುಃಖ ಮತ್ತು ಅವನು ಇಷ್ಟಪಡದ ತಂದೆಯನ್ನು ಎದುರಿಸುತ್ತಾನೆ. 2022ರಲ್ಲಿ ತೆರೆಕಂಡ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಧನುಷ್‌ಗೆ (Dhanush) ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದರು. ಮಿತ್ರನ್ ಆರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ನೀವು ಈ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು.



ಓಕಾದಲ್ ಕನಮಣಿ

ಧನುಷ್ ಮತ್ತು ನಿತ್ಯಾ ಮೆನನ್ ನಟಿಸಿದ್ದಾರೆ. ಲಿವ್-ಇನ್ ಸಂಬಂಧದಲ್ಲಿರುವ ಆದಿತ್ಯ ಮತ್ತು ತಾರಾ ಪಾತ್ರದಲ್ಲಿ ನಟಿಸಿದ್ದಾರೆ, ಸವಾಲುಗಳು, ಬದ್ಧತೆಯ ಭಯಗಳು ಮತ್ತು ಸಾಮಾಜಿಕ ನಿರೀಕ್ಷೆಗಳನ್ನುಕುರಿತು ಇದೆ. ಜಿಯೋ ಹಾಟ್‌ ಸ್ಟಾರ್‌ನಲ್ಲಿ ಸಿನಿಮಾ ಇದೆ.

ಪ್ರೇಮಲು

ಹೈದರಾಬಾದ್‌ಗೆ ತರಬೇತಿಗಾಗಿ ತೆರಳುವ ನಿರುದ್ಯೋಗಿ ಪದವೀಧರ ಸಚಿನ್ ಪಾತ್ರವನ್ನು ನಸ್ಲೆನ್ ಕೆ. ಗಫೂರ್ ನಿರ್ವಹಿಸುತ್ತಾರೆ. ತ್ರಿಕೋನ ಪ್ರೇಮಕಥೆ ಇದರಲ್ಲಿದೆ. ಪ್ರೇಮಲು ಸಿನಿಮಾ 2024ರ ಫೆಬ್ರವರಿ 9ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಗಿರಿಶ್ ಎಡಿ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ನಸ್ಲೆನ್​ ಗಫೂರ್, ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.ಜಿಯೋ ಹಾಟ್‌ ಸ್ಟಾರ್‌ನಲ್ಲಿದೆ.

ಇದನ್ನೂ ಓದಿ: Gilli Nata: ಗಿಲ್ಲಿ ಗೆದ್ದಿದ್ದೇ ಡಿ ಬಾಸ್‌ ಫ್ಯಾನ್ಸ್‌ನಿಂದ, ಅದೃಷ್ಟದಿಂದ; ಜಾಹ್ನವಿ

ಪ್ರೇಮಂ

ಜೀವನದ ಮೂರು ಹಂತಗಳ ಕುರಿತು ಇದೆ. ಜಾರ್ಜ್ ಪಾತ್ರವನ್ನು ನಿವಿನ್ ಪೌಲಿ ನಿರ್ವಹಿಸುತ್ತಾರೆ. ಹಾಸ್ಯ ಮತ್ತು ಭಾವನಾತ್ಮಕ ಕ್ಷಣಗಳಿಂದ ತುಂಬಿದ ಕಥೆಯಲ್ಲಿ ಸಾಯಿ ಪಲ್ಲವಿ ತನ್ನ ಕಾಲೇಜು ಕ್ರಶ್ ಮಲಾರ್ ಪಾತ್ರವನ್ನು ನಿರ್ವಹಿಸಿದ್ದಾರೆ, ನೀವು ಈ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು.