Valentine’s Week Teddybears Trend 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಹಗ್ ಮಾಡಲು ರೆಡಿಯಾದ ಮುದ್ದು ಮುದ್ದಾದ ಟೆಡ್ಡಿಬೇರ್ಸ್!
Valentine’s Week Teddybears Trend 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಆಗಮಿಸುವ ಟೆಡ್ಡಿಬೇರ್ ಡೇ ಅಂಗವಾಗಿ ಯುವತಿಯರನ್ನು ಹಗ್ ಮಾಡಲು ನಾನಾ ಬಗೆಯ ಮುದ್ದು ಮುದ್ದಾದ ಸಾಫ್ಟ್ ಟೆಡ್ಡಿಬೇರ್‌ಗಳು ಮಾರುಕಟ್ಟೆಗೆ ಬಂದಿವೆ. ಯಾವ್ಯಾವ ಬಗೆಯವು ಬಂದಿವೆ? ಈ ಕುರಿತಂತೆ ಇಲ್ಲಿದೆ ವರದಿ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನ ರಂಗು ಹೆಚ್ಚಿಸಲು ಈಗಾಗಲೇ ಮುದ್ದುಮುದ್ದಾದ ಟೆಡ್ಡಿಬೇರ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿವೆ, ಆಕರ್ಷಕವಾಗಿವೆ. ಅಂದಹಾಗೆ, ಎಲ್ಲರಿಗೂ ಗೊತ್ತಿರುವಂತೆ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟೆಡ್ಡಿಬೇರ್ ಡೇ (Valentine’s Week Teddybears Trend 2025) ಕೂಡ ಒಂದು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಾನಾ ಬಗೆಯ ಲೆಕ್ಕವಿಲ್ಲದಷ್ಟು ಬಗೆಯ ಟೆಡ್ಡಿಬೇರ್‌ಗಳು ಎಂಟ್ರಿ ನೀಡುತ್ತವೆ. ನಾನಾ ಕಲರ್‌ನ ಕಪಲ್ ಟೆಡ್ಡಿ, ಟೈನಿ ಟೆಡ್ಡಿ, ಬಿಗ್ ಟೆಡ್ಡಿ, ಅತಿ ಎತ್ತರದ ಬಿಗ್ ಜೈಂಟ್ ಟೆಡ್ಡಿಬೇರ್‌ಗಳು ಕಾಲಿಟ್ಟಿವೆ.
ಇದಕ್ಕೆ ಪೂರಕ ಎಂಬಂತೆ, ಹುಡುಗರು ಅಷ್ಟೇ.! ಹುಡುಗಿಯರನ್ನು ಮೆಚ್ಚಿಸಲು ಅವರಿಗೆ ಇಷ್ಟವಾದ ನಾನಾ ಬಗೆಯ ಟೆಡ್ಡಿಬೇರ್‌ಗಳನ್ನು ಕೊಳ್ಳತೊಡಗಿದ್ದಾರೆ. ಪರಿಣಾಮ, ಒಂದಿಂಚಿನ ಕೀ ಚೈನ್ –ಬ್ಯಾಗ್ ಚೈನ್ ಟೆಡ್ಡಿಬೇರ್‌ನಿಂದಿಡಿದು, ಆಳೆತ್ತರದ ಟೆಡ್ಡಿಬೇರ್‌ಗಳಿಗೂ ಪ್ರತಿ ವರ್ಷದಂತೆ ಈ ವರ್ಷವೂ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರಾದ ಜಗಜೀವನ್ ಹಾಗೂ ರಾಮನ್.
ಟ್ರೆಂಡಿಯಾಗಿರುವ ಕ್ಯೂಟ್ ಟೆಡ್ಡಿಬೇರ್ಸ್‌ಗಳಿವು
ಇನ್ನು, ಟೆಡ್ಡಿಬೇರ್ಸ್‌ನಲ್ಲಿ ಬ್ಯಾಗ್‌ಗಳಿಗೆ ಕೀ ಚೈನ್‌ನಂತೆ ಹಾಕಬಹುದಾದ ಸಾಫ್ಟ್ ಫ್ಯಾಬ್ರಿಕ್‌ನ ಟೈನಿ ಟೆಡ್ಡಿಬೇರ್ಸ್ ಹಾಗೂ ಚಾಕೋಲೇಟ್ ಇಲ್ಲವೇ ಗ್ರೀಟಿಂಗ್ ಕಾರ್ಡ್‌ನೊಂದಿಗೆ ನೀಡಬಹುದಾದ ಪುಟ್ಟ ಪುಟ್ಟ ಕ್ಯೂಟ್ ಸ್ಟಿಕ್ಕರ್ ಟೆಡ್ಡಿಬೇರ್‌ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲೂ ತಿಳಿ ಗುಲಾಬಿ, ಪಾಸ್ಟೆಲ್ ಶೇಡ್‌ನವು, ಕ್ರೀಮ್, ಲೈಟ್ ಬ್ರೌನ್ ಟೆಡ್ಡಿಗಳು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರು.
ಈ ಸುದ್ದಿಯನ್ನೂ ಓದಿ | Valentines Day Fashion 2025: ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕೆ ಸಾಥ್ ನೀಡಲು ಬಂತು ಹೃದಯಾಕಾರದ ಕಿವಿಯೊಲೆಗಳು
ಆನ್‌ಲೈನ್‌ನಲ್ಲಿ ಹೆಚ್ಚಾದ ಖರೀದಿ
ಆರ್ಚೀಸ್‌ನಂತಹ ಪ್ರತಿಷ್ಠಿತ ಬ್ರಾಂಡ್‌ನಿಂದಿಡಿದು ಲೋಕಲ್ ರಸ್ತೆ ಬದಿಯಲ್ಲಿ ಮಾರುವ ಟೆಡ್ಡಿಬೇರ್ಸ್‌ಗಳನ್ನು ಕೂಡ ಇದೀಗ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು. ಅಷ್ಟೇಕೆ! ದೂರದಲ್ಲಿರುವ ಸಂಗಾತಿಗೆ ಹೋಮ್ ಡಿಲಿವೆರಿ ಮಾಡಿ ಸರ್ಪೈಸ್ ಮಾಡಬಹುದು ಎನ್ನುತ್ತಾರೆ ಆನ್‌ಲೈನ್ ಟೆಡ್ಡಿಬೇರ್ಸ್ ಮಾರಾಟಗಾರರಾದ ರಾಕೇಶ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)