Valentines Day Fashion 2025: ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕೆ ಸಾಥ್ ನೀಡಲು ಬಂತು ಹೃದಯಾಕಾರದ ಕಿವಿಯೊಲೆಗಳು
Valentines Day Fashion 2025: ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕೆ ಸಾಥ್ ನೀಡುವ ಹೃದಯಾಕಾರದ ಕಿವಿಯೊಲೆಗಳು, ಸ್ಟಡ್ಸ್ ಹಾಗೂ ಹ್ಯಾಂಗಿಂಗ್‌ಗಳು ಸೀಸನ್ ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ. ಯಾವ್ಯಾವ ಶೈಲಿಯವು ಬಂದಿವೆ? ಯಾವ್ಯಾವ ಮೆಟೀರಿಯಲ್‌ನಲ್ಲಿ ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ಡೇ ಫ್ಯಾಷನ್‌ಗೆ (Valentines Day Fashion 2025) ಇದೀಗ ಹೃದಯಾಕಾರದ ಇಯರಿಂಗ್ಸ್ ಎಂಟ್ರಿ ನೀಡಿವೆ. ಟ್ರೆಂಡಿಯಾಗಿವೆ. ಸಂಗಾತಿಗೆ ಉಡುಗೊರೆಯಾಗಿ ನೀಡಬಲ್ಲಂತಹ ನಾನಾ ವಿನ್ಯಾಸದ ಹೃದಯಾಕಾರದ ಕಿವಿಯೊಲೆಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.
ಹಾರ್ಟ್ ಶೇಪ್ ಇಯರಿಂಗ್ಸ್ ಫ್ಯಾಷನ್
ಈ ಸೀಸನ್‌ನಲ್ಲಿ, ವೆರೈಟಿ ವಿನ್ಯಾಸದ ಹೃದಯಾಕಾರದ ಇಯರಿಂಗ್ಸ್ ಹೆಚ್ಚು ಚಾಲ್ತಿಯಲ್ಲಿವೆ. ಮೆಟಲ್, ಪ್ಲಾಸ್ಟಿಕ್, ಫೈಬರ್, ಜಂಕ್, ಫಂಕಿ ಹೀಗೆ ನಾನಾ ಬಗೆಯಲ್ಲಿ ಹಾಗೂ ಶೇಡ್‌ನಲ್ಲಿ ದೊರೆಯುತ್ತಿವೆ. ಅದರಲ್ಲೂ ಸ್ಟಡ್ಸ್ ಹಾಗೂ ಹ್ಯಾಂಗಿಂಗ್ಸ್ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಒಂದಕ್ಕಿಂತ ಹೆಚ್ಚು ಹೃದಯಗಳನ್ನು ಜೋಡಿಸಿದಂತಿರುವ ಮಲ್ಟಿಪಲ್ ಹೃದಯಾಕಾರದ ಹ್ಯಾಂಗಿಂಗ್ಸ್ ಹುಡುಗಿಯರನ್ನು ಸೆಳೆಯುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಬೆಳ್ಳಿ-ಬಂಗಾರದ ಹೃದಯಾಕಾರದ ಇಯರಿಂಗ್ಸ್
ಇನ್ನು, ಇದೀಗ ಬೆಳ್ಳಿ-ಬಂಗಾರದ ಹೃದಯಾಕಾರದ ಡಿಸೈನ್‌ನ ಇಯರಿಂಗ್ಸ್ ಮಹಿಳೆಯರನ್ನು ಹಾಗೂ ಮಕ್ಕಳನ್ನು ಸೆಳೆದಿವೆ. ಜೆನ್ ಜಿ ಹುಡುಗಿಯರನ್ನು ಪುಟ್ಟ ಡಿಸೈನ್‌ನ ಸ್ಟಡ್ಸ್ ಆಕರ್ಷಿಸಿವೆ. ಹೆಚ್ಚು ವಿನ್ಯಾಸ ಇಷ್ಟಪಡದವರಿಗೆಂದೇ ಲೈಟ್‌ವೇಟ್ ಗೋಲ್ಡ್ ಕವರಿಂಗ್ ಹೃದಯಾಕಾರದ ಸಿಂಪಲ್ ಕಿವಿಯೊಲೆಗಳು ಕೂಡ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್ ರತನ್.
ಹಾರ್ಟ್ ಶೇಪ್ ಇಯರಿಂಗ್ಸ್ ಪ್ರಿಯರಿಗೆ ಟಿಪ್ಸ್
- ಇವನ್ನು ವ್ಯಾಲೆಂಟೈನ್ಸ್ ಡೇ ಮಾತ್ರವಲ್ಲದೇ, ಇತರೇ ದಿನಗಳಲ್ಲೂ ಧರಿಸಬಹುದು.
- ರೆಡ್ ಶೇಡ್‌ನವು ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಧರಿಸಬಹುದು.
- ಫಂಕಿ ಹಾಗೂ ಜಂಕ್ ಹಾರ್ಟ್ ಶೇಪ್‌ನವನ್ನು ವೆಸ್ಟೆರ್ನ್ ಔಟ್‌ಫಿಟ್‌ಗಳಿಗೆ ಧರಿಸಬಹುದು.
- ಡಿಸೆಂಟ್ ಡಿಸೈನ್ ಇರುವಂತಹ ಬೆಳ್ಳಿ- ಬಂಗಾರದ್ದು ಯಾರೂ ಬೇಕಾದರೂ ಬೇಕಾದರೂ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Valentines Day Shopping 2025: ಆಗಲೇ ಶುರುವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್ !