ಬೆಂಗಳೂರು: ಒಮ್ಮೊಮ್ಮೆ ನಮ್ಮ ಜೀವನದಲ್ಲಿ(Life) ಎದುರಾಗುವ ಸಮಸ್ಯೆಗಳಿಗೆ, ಅನಾರೋಗ್ಯಕ್ಕೆ, ಕೈ ಹಿಡಿದ ಕೆಲಸ ವಿಫಲಗೊಳ್ಳುವುದಕ್ಕೆ ಮನೆಯ ವಾಸ್ತು ದೋಷ(Vastu Dosha) ಕಾರಣ ಕಾರಣವಾಗುತ್ತದೆ. ಕೆಲವೊಮ್ಮೆ ಮನೆಯ ವಾಸ್ತು ಸರಿಯಾಗಿರದಿದ್ದರೆ ಮಾತ್ರವಲ್ಲ, ಮನೆಯೊಳಗೆ ಇಡುವ ಕೆಲವು ವಸ್ತುಗಳ ಕಾರಣಕ್ಕೂ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ವಾಸ್ತು ಶಾಸ್ತ್ರ(Vastu Shastra) ಹೇಳುತ್ತದೆ. ಆರೋಗ್ಯ, ಉದ್ಯೋಗ ಮತ್ತು ಹಣಕಾಸು ವ್ಯವಹಾರಗಳು ಸುಗಮವಾಗಿರಲು ಮನೆಯಲ್ಲಿರುವ ವಸ್ತುಗಳು ಹಾಗೂ ಅವುಗಳ ದಿಕ್ಕು ಅತ್ಯಂತ ಮುಖ್ಯ. ಆ ವಸ್ತುಗಳ ಸ್ಥಾನದಲ್ಲಿ ಸಣ್ಣ ಬದಲಾವಣೆಯಾದರೂ ಋಣಾತ್ಮಕ ಶಕ್ತಿಗಳು(Negative Energy) ಹೆಚ್ಚಾಗುವ ಸಾಧ್ಯತೆ ಇದೆ.
ಹಾಗಾದ್ರೆ ವಾಸ್ತು ಸಲಹೆ(Vastu Tips) ಪ್ರಕಾರ ಯಾವ ವಸ್ತುಗಳು ವಾಸ್ತು ದೋಷವನ್ನು ಉಂಟು ಮಾಡುತ್ತದೆ..? ಮನೆಯಲ್ಲಿ ಯಾವ ವಸ್ತುಗಳನ್ನು ಹಿಡಬಾರದು...? ಎಂಬುದನ್ನು ನೋಡೋಣ..
ವಾಸ್ತುಶಾಸ್ತ್ರದ ಪ್ರಕಾರ, ಮನೆಯೊಳಗೆ ಭಿನ್ನವಾಗಿ ಕಾಣುವ ವಿಗ್ರಹಗಳು ಅಥವಾ ಒಡೆದ ಫೋಟೋಗಳು ಇದ್ದರೆ ಅವು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ವಿಶೇಷವಾಗಿ ಮನೆಯ ಯಜಮಾನರು ಅಥವಾ ಪ್ರಮುಖ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂತಹ ವಿಗ್ರಹಗಳು ಅಥವಾ ಫೋಟೋಗಳು ಮನೆಯಲ್ಲಿ ಇದ್ದರೆ ಅವುಗಳನ್ನು ತಕ್ಷಣ ತೆಗೆದುಹಾಕುವುದು ಒಳಿತು.
ಮನೆಯೊಳಗೆ ಒಡೆದುಹೋಗಿರುವ ಅಥವಾ ಮುರಿದ ಕಸದ ಡಬ್ಬಿಗಳನ್ನು ಇಟ್ಟುಕೊಳ್ಳುವುದೂ ಕೂಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವಾಸ್ತು ಶಾಸ್ತ್ರ ಎಚ್ಚರಿಸುತ್ತದೆ. ಇಂತಹ ವಸ್ತುಗಳಿಂದ ಕುಟುಂಬದ ಸದಸ್ಯರು ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಚಿಕಿತ್ಸೆ ಪಡೆದರೂ ಸಂಪೂರ್ಣವಾಗಿ ಗುಣಮುಖರಾಗಲು ಅಡಚಣೆ ಉಂಟಾಗುತ್ತದೆ.
Vastu Tips: ಕುಬೇರ ದಿಕ್ಕು ಅಥವಾ ಅಗ್ನಿ ಮೂಲೆ- ಅಡುಗೆ ಮನೆ ಎಲ್ಲಿದ್ದರೆ ಒಳ್ಳೆಯದು? ಇಲ್ಲಿದೆ ಉತ್ತರ
ಅದೇ ರೀತಿ, ಮುರಿದ ಅಥವಾ ಒಡೆದ ವಸ್ತುಗಳನ್ನು ಮನೆಯಲ್ಲಿ ಉಳಿಸಿಕೊಂಡರೆ ಸಂಕಷ್ಟಗಳು ನಿರಂತರವಾಗಿ ಎದುರಾಗುತ್ತವೆ ಎನ್ನುವ ನಂಬಿಕೆಯಿದೆ. ಅಡುಗೆಮನೆಯಲ್ಲಿರುವ ಒಡೆದ ಪಾತ್ರೆಗಳು, ಬಿಂದಿಗೆಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ ಇವುಗಳನ್ನು ತಕ್ಷಣವೇ ಮನೆಯಿಂದ ಹೊರ ಹಾಕಬೇಕು.
ಮನೆಯೊಳಗೆ ಅಥವಾ ಅಂಗಳದಲ್ಲಿ ಒಣಗಿದ ಗಿಡಗಳನ್ನು ಇಟ್ಟುಕೊಳ್ಳುವುದೂ ವಾಸ್ತು ದೃಷ್ಟಿಯಿಂದ ಅಶುಭಕರ. ಅದರಲ್ಲೂ ಒಣಗಿದ ತುಳಸಿ ಸಸಿ ಇದ್ದರೆ ಅದು ಮನೆಯ ಹಿರಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಒಣಗಿದ ಸಸ್ಯಗಳನ್ನು ತಕ್ಷಣ ತೆಗೆದುಹಾಕುವುದು ಒಳಿತು.
ವಾಸ್ತುಶಾಸ್ತ್ರದ ಪ್ರಕಾರ, ಹಳೆಯ ಪತ್ರಿಕೆಗಳು, ಹರಿದ ಪುಸ್ತಕಗಳು ಮನೆಯಲ್ಲಿ ಇದ್ದರೆ ಮನಸ್ಸಿಗೆ ಅಶಾಂತಿ ಉಂಟಾಗುತ್ತದೆ. ಇವುಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಮನೆಯ ವಾತಾವರಣ ಹದಗೆಡುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲೊಬ್ಬ ಸದಸ್ಯರು ಮಾನಸಿಕ ಒತ್ತಡ ಅಥವಾ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇಂತಹ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸದೇ, ಯಾರಿಗಾದರೂ ದಾನವಾಗಿ ನೀಡುವುದು ಉತ್ತಮ ಎಂದು ವಾಸ್ತು ವಿಜ್ಞಾನ ಸಲಹೆ ನೀಡುತ್ತದೆ.