ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu tips: ತುಳಸಿ ಗಿಡ ಮನೆಯ ಈ ದಿಕ್ಕಿನಲ್ಲಿದ್ದರೆ ತುಂಬಾ ಶ್ರೇಷ್ಠ, ಇದು ನಿಮ್ಮ ಮನೆಯಲ್ಲಿದ್ದರೆ ಸಾಕ್ಷಾತ್‌ ಲಕ್ಷ್ಮಿಯೇ ಇದ್ದಂತೆ!

ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಡುವುದು ತುಂಬಾ ಶುಭ. ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದೇ ರೀತಿ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ತುಳಸಿ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ತುಳಸಿ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ. ಹಾಗಾಗಿ ಮನೆಯ ಯಾವ ದಿಕ್ಕಿನಲ್ಲಿ ತುಳಸಿ ನೆಟ್ಟರೆ ಒಳಿತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ತುಳಸಿ ಗಿಡ

ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Dharma) ತುಳಸಿ ಗಿಡವನ್ನು(Tulasi Plant) ಭಕ್ತಿಯಿಂದ ಪೂಜಿಸುತ್ತಾರೆ. ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ವಿಶೇಷ ಸ್ಥಾನವಿದ್ದು, ನಮ್ಮ ಹಿರಿಯರ ಕಾಲದಿಂದಲೂ, ಪ್ರತಿಯೊಂದು ಹಿಂದೂ ಧರ್ಮೀಯರ ಮನೆಯಲ್ಲೂ ತುಳಸಿ ಗಿಡವನ್ನು ನೆಡುವ ಸಂಪ್ರದಾಯವಿದೆ. ಧರ್ಮಗ್ರಂಥಗಳಲ್ಲಿ, ತುಳಸಿಯನ್ನು ಪೂಜ್ಯ, ಪವಿತ್ರ ಮತ್ತು ದೇವತೆ ಎಂದು ಉಲ್ಲೇಖ ಮಾಡಲಾಗಿದ್ದು, ಮನೆಯಲ್ಲಿ ತುಳಸಿ ಇದ್ದರೆ, ಕೆಲವು ವಿಷಯಗಳನ್ನು ತಿಳಿದುಕೊಂಡು ಪಾಲಿಸುವುದು ಅತ್ಯಗತ್ಯ ಆಗುತ್ತದೆ.

ಹೌದು ತುಳಸಿಯನ್ನು ಲಕ್ಷ್ಮಿ ದೇವಿಯ ದರ್ಶನಕ್ಕೆ ಮಾಡುವುದು ಅವತಾರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಶಾಂತಿಯ ದೇವತೆ. ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ. ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅದರಲ್ಲೂ ತುಳಸಿಯನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಮನೆಯಲ್ಲಿ ಇಟ್ಟುಕೊಂಡರೆ
ಮುಕ್ಕೋಟಿ ದೇವತೆಗಳ ವಿಶೇಷ ಅನುಗ್ರಹವು ನಿಮ್ಮ ಮನೆಯ ಮೇಲಿರುತ್ತದೆ. ಮನೆಯಲ್ಲಿ ಸಕಾರಾತ್ಮಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ, ಹಣದ ಕೊರತೆಯಿರುವುದಿಲ್ಲ ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತವೆ. ಹಾಗಾದ್ರೆ ಬನ್ನಿ ವಾಸ್ತು ಪ್ರಕಾರ ಮನೆಯ ಯಾವ ಭಾಗದಕ್ಕೆ ತುಳಸಿ ಗಿಡವನ್ನು ನೆಡಬೇಕು..? ತುಳಸಿ ಗಿಡ ಮನೆಯಲ್ಲಿ ಇರುವುದರಿಂದ ಏನು ಪ್ರಯೋಜನ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ

ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ, ಮನೆಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಬೆಳೆಸುವುದರಿಂದ ಅವು ಆರ್ಥಿಕ ಸಮೃದ್ಧಿಯನ್ನು ತರುತ್ತವೆ ಮತ್ತು ಅವರ ಜೀವನದಲ್ಲಿ ಅಪಾರ ಪ್ರಗತಿಯನ್ನು ಉಂಟುಮಾಡುತ್ತವೆ ಎಂಬ ನಂಬಿಕೆ ಇದೆ. ಅಲ್ಲದೇ ವಾಸ್ತು ಶಾಸ್ತ್ರದಲ್ಲಿ ಅನೇಕ ಮಂಗಳಕರ ಸಸ್ಯಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಅಂತಹ ಗಿಡಗಳಲ್ಲಿ ತುಳಸಿ ಗಿಡ ಕೂಡ ಒಂದಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡ ನೆಡುವುದು ಲಕ್ಷ್ಮಿ ದೇವಿ(Lakshmi Devi)ಯನ್ನು ಒಲಿಸಿ ಕೊಳ್ಳಬಹುದಾಗಿದ್ದು. ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಗೂ ಈ ಸಸ್ಯಕ್ಕೂ ಸಂಬಂಧವಿದೆ. ಆದ್ದರಿಂದ ಇದನ್ನು ಮನೆಯ ಬಳಿ ಬೆಳೆಸುವುದರಿಂದ ಸಂಪತ್ತು ಬರುತ್ತದೆ.

ಈ ಸುದ್ದಿಯನ್ನು ಓದಿ : Astro Tips: ಶುಕ್ರವಾರ ಲಕ್ಷ್ಮಿ ದೇವಿಯನ್ನ ಹೀಗೆ ಪೂಜೆ ಮಾಡಿದ್ರೆ ನಿಮ್ಮ ಮನೆಯಲ್ಲಿ ಸಂಪತ್ತು ಅಭಿವೃದ್ಧಿಯಾಗುತ್ತದೆ


ಈ ದಿಕ್ಕಿನಲ್ಲಿ ನೆಡಿ

ವಾಸ್ತು ಪ್ರಕಾರ, ತುಳಸಿ ಗಿಡವನ್ನು ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭಕರ. ಈ ದಿಕ್ಕುಗಳು ಧನಾತ್ಮಕ ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸಲಿದ್ದು, ಅಲ್ಲಿ ತುಳಸಿ ಗಿಡ ನೆಡುವುದರಿಂದ ಅನೇಕ ಸಮಸ್ಯೆಗಳನ್ನು ಪರಿಹಾರವಾಗುತ್ತವೆ ಎನ್ನಲಾಗಿದೆ.

ಯಾವ ದಿಕ್ಕಿನಲ್ಲಿ ಇಡಬಾರದು?
ತಪ್ಪಿಯೂ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು ಏಕೆಂದರೆ ಈ ದಿಕ್ಕನ್ನು ಯಮ ಮತ್ತು ಪೂರ್ವಜರ ದಿಕ್ಕೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದರಿಂದ ವಾಸ್ತು ದೋಷಗಳು ಹೆಚ್ಚಾಗುತ್ತವೆ. ಹೆಚ್ಚುವರಿಯಾಗಿ ಹಣಕಾಸು, ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಪ್ರಗತಿಯ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ.

ಇನ್ನು ಧಾರರ್ಮಗ್ರಂಥಗಳ ಪ್ರಕಾರ, ಕೆಲವು ವಿಶೇಷ ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳಬಾರದು ಎನ್ನಲಾಗಿದೆ. ಆ ದಿನಗಳೆಂದರೆ ಅಮಾವಾಸ್ಯ, ಪೂರ್ಣಿಮಾ, ದ್ವಾದಶಿ, ಭಾನುವಾರ ಮತ್ತು ಸೂರ್ಯ ಅಥವಾ ಚಂದ್ರ ಗ್ರಹಣ ದಿನಗಳು. ಈ ದಿನಗಳಲ್ಲಿ ಮತ್ತು ರಾತ್ರಿಯಲ್ಲಿ ತುಳಸಿ ಎಲೆಗಳನ್ನು ಕೀಳಬಾರದು.