ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ರಾಗಿ ತಿಂದವ ನಿರೋಗಿ! – ಚಳಿಗಾಲದಲ್ಲಿ ಹೀಗಿರಲಿ ನಿಮ್ಮ ಫುಡ್ ಸಿಸ್ಟಮ್

ಚಳಿಗಾಲದಲ್ಲಿ ಮುಖ್ಯವಾಗಿ ನಮ್ಮ ಜಿರ್ಣಾಂಗ ವ್ಯವಸ್ಥೆಯನ್ನು ಸುಸ್ಥಿಯಲ್ಲಿರಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ. ಇದಕ್ಕೆ ಪೂರಕವಾಗಿ ಚಳಿಗಾಲದಲ್ಲಿ ನಿರ್ಧಿಷ್ಟ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಸಂಪ್ರದಾಯವಿದೆ. ಅದೇ ರೀತಿಯಲ್ಲಿ ಚಳಿಗಾಲದಲ್ಲಿ ಯಾವ ಧಾನ್ಯದ ಹಿಟ್ಟನ್ನು ಬಳಸಬೇಕೆಂಬ ವಿಚಾರ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವ ಲೇಖನ ಇದಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಚಳಿಗಾಲದಲ್ಲಿ (winter season) ನಾವು ತೊಡುವ ಬಟ್ಟೆಯಿಂದ ಹಿಡಿದು ತಿನ್ನುವ ಆಹಾರದವರೆಗೆ (Food) ವಿಶೇಷ ನಿಗಾ ವಹಿಸಬೇಕಾಗುತ್ತದೆ. ಯಾಕೆಂದರೆ ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸುವುದು ಮಾತ್ರವಲ್ಲದೇ ನಮ್ಮ ದೇಹದ ಅಂಗಗಳೂ ಸಹ ಕ್ಷಮತೆಯಿಂದ ಕಾರ್ಯನಿರ್ವಹಿಸುವಂತೆ ಮಾಡುವುದು ಅವಶ್ಯಕ. ಇಲ್ಲವಾದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ (huminity) ಕಡಿಮೆಯಾಗಿ ವೈರಲ್ ಕಾಯಿಲೆಗಳು ನಮ್ಮನ್ನು ಅಡರಿಕೊಳ್ಳುವ ಸಾಧ್ಯತೆಗಳು ಚಳಿಗಾಲದಲ್ಲಿ ಹೆಚ್ಚಿರುತ್ತದೆ.

ಚಳಿಗಾಲದಲ್ಲಿ ಮುಖ್ಯವಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿಯಲ್ಲಿರಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ. ಇದಕ್ಕೆ ಪೂರಕವಾಗಿ ಚಳಿಗಾಲದಲ್ಲಿ ನಿರ್ಧಿಷ್ಟ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಸಂಪ್ರದಾಯವಿದೆ. ಅದೇ ರೀತಿಯಲ್ಲಿ ಚಳಿಗಾಲದಲ್ಲಿ ಯಾವ ಧಾನ್ಯದ ಹಿಟ್ಟನ್ನು ಬಳಸಬೇಕೆಂಬ ವಿಚಾರ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವ ಲೇಖನ ಇದಾಗಿದೆ.

ಧಾನ್ಯಗಳ ಹಿಟ್ಟಿನಲ್ಲಿ ವಿವಿಧ ಬಗೆಯ ಪೋಷಕಾಂಶಗಳು, ಖನಿಜಾಂಶಗಳು ಹಾಗೂ ಪ್ರೊಟೀನ್ ಅಂಶಗಳಿದ್ದು, ಮುಖ್ಯವಾಗಿ ಚಳಿಗಾಲದಲ್ಲಿ ಬಳಸಲೇಬೇಕಾದ ಹಿಟ್ಟಿನ ಬಗ್ಗೆ ಹಾಗೂ ದರ ಆರೋಗ್ಯಕರ ಪ್ರಯೋಜನಗಳ (Health Tips) ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಜೋಳದ ಹಿಟ್ಟು:

ಜೋಳದ ಹಿಟ್ಟಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದರಲ್ಲಿ ಹೇರಳವಾಗಿ ಪೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಭರಪೂರವಾಗಿರುತ್ತವೆ. ನೈಸರ್ಗಿಕವಾಗಿ ಗ್ಲೂಟಿನ್ ಫ್ರೀ ಆಗಿರುವ ಈ ಧಾನ್ಯ ಸುಲಭವಾಗಿ ಜೀರ್ಣವಾಗುತ್ತದೆ. ಇದು ನಮ್ಮ ಕರುಳಿನ ಕಾರ್ಯಕ್ಷಮತೆಯನ್ನು ವೃದ್ಧಿಸುವಂತೆ ಮಾಡುತ್ತದೆ. ಆದ ಕಾರಣ ಚಳಿಗಾಲದಲ್ಲಿ ಜೋಳದ ಹಿಟ್ಟಿನಿಂದ ಮಾಡಿದ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಜೋಳದ ಹಿಟ್ಟಿನಿಂದ ರೊಟ್ಟಿ, ಗಂಜಿ ಸೇರಿದಂತೆ ಹಲವು ಆಹಾರಗಳನ್ನು ತಯಾರಿಸಬಹುದು. ಇನ್ನು, ರಾಗಿ ಮುದ್ದೆಯಂತೆ ಜೊಳದ ಮುದ್ದೆಯನ್ನೂ ಸಹ ತಯಾರಿಸಬಹುದಾಗಿದೆ.

Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ


ಸಜ್ಜೆ ಹಿಟ್ಟು:

ತನ್ನಲ್ಲಿ ಕಬ್ಬಿಣಾಂಶವನ್ನು ಅತ್ಯಧಿಕವಾಗಿ ಹೊಂದಿರುವ ಸಜ್ಜೆ ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಆಮಿನೋ ಆಸಿಡ್ ಹೇರಳವಾಗಿದೆ. ಇದು ನಮ್ಮ ದೇಹದ ತಾಪಮಾನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮನ್ನು ಒಳಗಿನಿಂದ ಬೆಚ್ಚಗಿರಿಸುವ ಕ್ಷಮತೆಯನ್ನು ಸಜ್ಜೆ ಹೊಂದಿದೆ. ಸಜ್ಜೆಯ ಪೊಂಗಲ್ ಬಾಯಿಗೆ ರುಚಿಕರ ಮತ್ತು ಆರೋಗ್ಯಕ್ಕೆ ಹಿತಕರ.


ಮೆಕ್ಕೆಜೋಳದ ಹಿಟ್ಟು:

ಮೆಕ್ಕೆಜೋಳ ಅಥವಾ ಮುಸುಕಿನ ಜೋಳದಲ್ಲಿ ಕಾರ್ಬೋಹೈಡ್ರೇಟ್ ಅಂಶ ಸಮೃದ್ಧವಾಗಿದೆ. ಇದು ದೇಹದ ಶಕ್ತಿಯನ್ನು ದೀರ್ಘಕಾಲದವರೆಗೆ ಕಾಪಿಡುವಲ್ಲಿ ನೆರವಾಗುತ್ತದೆ. ಮಾತ್ರವಲ್ಲದೇ, ಉತ್ತಮ ಜೀರ್ಣಕ್ರಿಯೆಗೂ ಇದು ಸಹಕಾರಿಯಾಗಿದೆ. ಮೆಕ್ಕೆ ಜೋಳದಿಂದ ರೊಟ್ಟಿ, ಉಪ್ಪಿಟ್ಟು, ಕಿಚಡಿ ತಯಾರಿಸಬಹುದು.

ರಾಗಿ ಹಿಟ್ಟು:

ರಾಗಿ ತಿಂದವ ನಿರೋಗಿ ಎಂಬ ಮಾತಿದೆ. ರಾಗಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಷಿಯಂ, ಕಬ್ಬಿಣಾಂಶ ಮತ್ತು ಆ್ಯಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿದೆ. ಇದು ನಮ್ಮ ಎಲುಬುಗಳನ್ನು ಬಲಶಾಲಿಯಾಗಿಸುವಲ್ಲಿ ಸಹಕಾರಿಯಾಗಿದೆ. ಇಷ್ಟು ಮಾತ್ರವಲ್ಲದೇ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ರಾಗಿಯ ಪಾತ್ರ ದೊಡ್ಡದಿದೆ. ಚಳಿಗಾಲದಲ್ಲಿ ನಮ್ಮನ್ನು ಕಾಡುವ ಹಲವಾರು ಕಾಯಿಲೆಗಳಿಗೆ ರಾಗಿ ರಾಮಬಾಣವಾಗಿದೆ.



ನವಣೆ ಹಿಟ್ಟು:

ಸಿರಿ ಧಾನ್ಯಗಳಲ್ಲಿ ಒಂದಾಗಿರುವ ನವಣೆಯಲ್ಲಿ ಪೋಷಕಾಂಶಗಳ ಭಂಡಾರವೇ ತುಂಬಿದೆ. ಇದರಲ್ಲಿ ಗ್ಲೈಸಮಿಕ್ ಅಂಶ ಕಡಿಮೆ ಇರುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಇದು ಸಹಕಾರಿಯಾಗಿದೆ. ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದಂತಹ ಧಾನ್ಯವಾಗಿದೆ. ಇದರಿಂದ ಕಿಚಡಿ, ಉಪ್ಪಿಟ್ಟು, ದೋಸೆ, ಪಲಾವ್ ಸೇರಿದಂತೆ ಹಲವು ರುಚಿಕರ ಆಹಾರಗಳನ್ನು ತಯಾರಿಸಿ ತಿನ್ನಬಹುದು.