ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cracked Heels: ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಗೆ ನಿಮ್ಮ ಅಡುಗೆ ಮನೆಯಲ್ಲಿದೆ ಮದ್ದು...!

ಚಳಿಗಾಲದಲ್ಲಿ ಪಾದಗಳ ಹಿಮ್ಮಡಿ ಬಿರುಕು ಬಿಡುವುದು ಸಾಮಾನ್ಯ. ಈ ಋತುಮಾನದಲ್ಲಿ ತ್ವಚೆಯ ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಮನೆಯಲ್ಲಿಯೇ ಇರುವ ಕೆಲ ಸಾಮಗ್ರಿಗಳನ್ನು ಬಳಸಿ ಈ ಬಿರುಕು ಬಿಟ್ಟ ಹಿಮ್ಮಡಿ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಬಹುದು.

ಚಳಿಗಾಲದಲ್ಲಿ ಪಾದಗಳ ಆರೈಕೆ ಹೀಗಿರಲಿ

ಬಿರುಕು ಬಿಟ್ಟ ಹಿಮ್ಮಡಿ(ಸಾಂದರ್ಭಿಕ ಚಿತ್ರ) -

Profile
Sushmitha Jain Nov 26, 2025 6:00 AM

ಬೆಂಗಳೂರು: ಚಳಿಕಾಲ(Winter), ಆರಂಭವಾಗಿದ್ದು, ಈಗಾಗಲೇ ರಾಜ್ಯದಲ್ಲಿ ತಂಪಾದ ಗಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಚಳಿಗಾಲ ಬಂತು ಅಂದ್ರೆ ಸಾಕು ಒಂದಲ್ಲ ಒಂದು ಸಮಸ್ಯೆ(winter Skin Care) ನಮ್ಮನ್ನು ಕಾಡುತ್ತಲಿರುತ್ತವೆ. ಕೊರೆಯುವ ಚಳಿಯಲ್ಲಿ ಚರ್ಮದ ಕಾಳಜಿ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಕೆಲವರಿಗೆ ಈ ವಿಂಟರ್ ಸೀಸನ್ ಅಲ್ಲಿ ಒಣ ತ್ವಚೆಯ ಸಮಸ್ಯೆ ಹೆಚ್ಚಾಗಿ ಕಾಡಲಾರಂಭಿಸುತ್ತದೆ. ಇದಕ್ಕೆ ಕಾರಣ ನಮ್ಮ ಬದಲಾದ ಪರಿಸರ, ಧೂಳು, ನೈರ್ಮಲ್ಯ, ಸೂರ್ಯನ ಕಿರಣ, ಬಿಸಿಲಿನ ಶಾಖ, ಹವಾಮಾನ ವೈಪರಿತ್ಯ ಇರಬಹುದು. ಚಳಿಗಾಲದಲ್ಲಿ ಎದುರಾಗುವ ನಾನಾ ಚರ್ಮ ಸಂಬಂಧಿ ಸಮಸ್ಯೆಗಳಲ್ಲಿ ಹಿಮ್ಮಡಿಗಳು ಬಿರುಕು(Cracked Heels) ಬಿಡುವುದು ಒಂದಾಗಿದ್ದು, ಇದು ಕಾಲುಗಳ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಅಷ್ಟೇ ಅಲ್ಲದೆ ಪಾದ ಒಡೆದು ರಕ್ತವೂ ಬರುತ್ತದೆ. ಇದರಿಂದ ವಿಪರೀತ ನೋವು, ಕಿರಿಕಿರಿ ಉಂಟಾಗುತ್ತದೆ. ಅದಕ್ಕೆ ಮೃದು ವಾದ ಸುಂದರವಾದ ಪಾದಗಳನ್ನು ಹೊಂದಬೇಕಾದರೆ ನಾವು ಹಿಮ್ಮಡಿ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.

ಹಾಗಾದ್ರೆ ಒಡೆದ ಹಿಮ್ಮಡಿಗಳನ್ನು ಮೃದುವಾಗಿಸುವುದು ಹೇಗೆ..? ಇದಕ್ಕೆ ಮನೆ ಮದ್ದುಗಳನ್ನು ಬಳಸಿ ಹೇಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು..? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ ಮಾಹಿತಿ.

  • ಒಂದು ಚಮಚ ಅಕ್ಕಿ ಹಿಟ್ಟಿಗೆ, ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸ ಮಿಶ್ರಣ ಮಾಡಿ 15 ನಿಮಿಷ ಪಾದಗಳನ್ನು ನೀರಿನಲ್ಲಿ ಇರಿಸಿ ನಂತರ ಸ್ಕ್ರಬ್ ಮಾಡಬೇಕು. ಈ ರೀತಿ ವಾರಕ್ಕೆ ಎರಡು ಬಾರಿ ಮಾಡಿದರೆ ಪಾದದ ಚರ್ಮ ಒಡೆಯುವುದಿಲ್ಲ.
  • ಒಂದು ಚಮಚ ಜೇನಿಗೆ ಒಂದು ಸ್ಪೂನ್ ಸಕ್ಕರೆ ಹಾಕಿ ಐದು ನಿಮಿಷ ಸ್ಕ್ರಬ್‌ ಮಾಡಿ. ನಂತರ ಕಾಲುಗಳನ್ನು ಹದ ಬಿಸಿ ನೀರಿನಲ್ಲಿ ತೊಳೆದು, ಟವಲ್‌ನಿಂದ ಒರೆಸಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದ್ದರೆ ಬಿರುಕು ಹಿಮ್ಮಡಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಈ ಸುದ್ದಿಯನ್ನು ಓದಿ: Beauty Tips: ಚಳಿಗಾಲದಲ್ಲಿ ತುಟಿ ಬಿರುಕು ಬಿಡುತ್ತಾ? ಈ ಮನೆಮದ್ದು ಬಳಸಿ ನೋಡಿ

  • ಪೆಟ್ರೋಲಿಯಂ ಜೆಲ್ಲಿ ಜತೆಗೆ ಸ್ವಲ್ಪ ಗ್ಲಿಸರಿನ್‌ ಹಚ್ಚಿದರೆ ಮತ್ತಷ್ಟು ಒಳ್ಳೆಯದು. ರಾತ್ರಿ ಮಲಗುವಾಗ ಕಾಲು-ಕೈಗಳಿಗೆ ಗ್ಲಿಸರಿನ್‌ ಹಚ್ಚಿ ಮಲಗಿದರೆ ಕೈ-ಕಾಲಿನ ತ್ವಚೆ ಮೇಲೆ ಬಿಳಿ-ಬಿಳಿ ಉಂಟಾಗುವುದಿಲ್ಲ.
  • ಹಿಮ್ಮಡಿ ಪಾದಗಳ ಬಿರುಕು ಸಮಸ್ಯೆಗೆ ಅಥವಾ ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಸಮಸ್ಯೆಗೆ ಚೆನ್ನಾಗಿ ಹಣ್ಣಾದ ಅಥವಾ ಮಾಗಿದ ಬಾಳೆ ಹಣ್ಣು ಹಾಗೂ ಜೇನುತುಪ್ಪ ಪರಿಣಾಮಕಾರಿ ಮನೆಮದ್ದು ಆಗಿದ್ದು, ಒಂದು ಹಣ್ಣಾದ ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಅದಕ್ಕೆ ಎರಡು ಚಮಚ ಜೇನು ತುಪ್ಪವನ್ನು ಮಿಶ್ರಣ ಮಾಡಿ ಹಿಮ್ಮಡಿಗಳ ಮೇಲೆ ಹಚ್ಚಿ ಮಸಾಜ್ ಮಾಡಿ, ಸುಮಾರು ಸುಮಾರು ಅರ್ಧ ಗಂಟೆಯವರೆಗೆ ಅದನ್ನು ಒಣಗಲು ಬಿಡಬೇಕು. ಬಳಿಕ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳಿ.
  • ಪ್ರತಿದಿನ ರಾತ್ರಿ ಮಲಗುವ ಮೊದಲು ಒಡೆದಿರುವ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆದು, ಒರೆಸಿಕೊಂಡ ಬಳಿಕ ಶುದ್ಧ ತೆಂಗಿನ ಎಣ್ಣೆ ಹಚ್ಚಿಕೊಂಡು, ನಯವಾಗಿ ಮಸಾಜ್ ಮಾಡಿಕೊಳ್ಳಿ. ಹೀಗೆ ಪ್ರತಿದಿನ ಮಾಡಿದ್ದರೆ ಬಿರುಕು ಬಿಟ್ಟಿರುವ ಸಮಸ್ಯೆಗಳು ನಿಧಾನಕ್ಕೆ ಕಡಿಮೆ ಆಗುತ್ತಾ ಬರುತ್ತದೆ.
  • ಅರ್ಧ ಬಕೆಟ್ ಉಗುರು ಬೆಚ್ಚಗಿನ ಬಿಸಿ ನೀರಿಗೆ, ಸ್ವಲ್ಪ ಅಡುಗೆ ಸೋಡಾ ವನ್ನು ಹಾಕಿ, ನೀರಿನಲ್ಲಿ ಇದು ಸರಿಯಾಗಿ ಕರಗಲಿ. ಇದರ ಬಳಿಕ, ಬಿರುಕು ಬಿಟ್ಟಿರುವ ನಿಮ್ಮ ಕಾಲುಗಳನ್ನು ಇದರಲ್ಲಿ ಅದ್ದಿಟ್ಟುಕೊಳ್ಳಿ. ಸುಮಾರು 10-15 ನಿಮಿಷಗಳವರೆಗೆ ಆದರೂ ಕೂಡ ಹಾಗೆಯೇ ಇಟ್ಟು, ಬಳಿಕ ನಿಧಾನಕ್ಕೆ ಬಟ್ಟೆಯಿಂದ ಒರೆಸಿಕೊಳ್ಳಿ.