ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Beauty Tips: ಮನೆಯಲ್ಲಿ ಸಿಗುವ ಈ ಮೂರು ವಸ್ತುಗಳಿಂದ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ

Beauty Tips for winter Skin care: ಚಳಗಾಲದಲ್ಲಿ ಮುಖ ಬೇಗನೆ ಒಣಗುತ್ತದೆ. ನಿರಂತರ ಸ್ಕಿನ್‌ ಕೇರ್‌ ಅಗತ್ಯ. ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ರಾಸಾಯನಿಕ ಪದಾರ್ಥಗಳನ್ನು ಬಳಸುವ ಬದಲು, ಸಿಂಪಲ್ಲಾಗಿ ನೈಸರ್ಗಿಕ ಪದಾರ್ಥಗಳ ಬಳಕೆಯಿಂದ ಮುಖ ಹೊಳೆಯುವಂತೆ ಇಟ್ಟುಕೊಳ್ಳಬಹುದು. ಅದೂ ಒಂದು ರೂಪಾಯಿ ಖರ್ಚು ಇಲ್ಲದೆ..

ಸಾಂದರ್ಭಿಕ ಚಿತ್ರ

ಬೆಂಗಳೂರು: ಸುಂದರವಾಗಿ (Beautyfull) ಕಾಣಬೇಕು ಎಂಬುದು ಹೆಂಗಳೆಯರ ಅಭಿಲಾಷೆ. ಮುಖ ಸೌಂದರ್ಯದ ಪ್ರತಿರೂಪ ಎಂದು ಎಲ್ಲರೂ ಹೇಳುತ್ತಾರೆ. ಹಾಗಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಾನಾ ಸರ್ಕಸ್ ಮಾಡುತ್ತೇವೆ. ಮುಖದ ಕಾಂತಿ ಮತ್ತು ಹೊಳಪನ್ನು ರಕ್ಷಣೆ ಮಾಡಿಕೊಳ್ಳಲು (Skin care tips) ಒದ್ದಾಡುತ್ತೇವೆ. ಅದರಲ್ಲೂ ಈ ಆಧುನಿಕ ಯುಗದಲ್ಲಿ ಸೌಂದರ್ಯವನ್ನು ಉತ್ತೇಜಿಸುವ ಹಲವಾರು ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ತಲೆಯೆತ್ತಿವೆ.

ಆದರೆ ಅವುಗಳಿಂದ ತಕ್ಷಣಕ್ಕೆ ಹೊಳಪು, ಕಾಂತಿ ಸಿಗಬಹುದೇ ಹೊರತು, ದೀರ್ಘ ಕಾಲದವರೆಗೆ ನಮ್ಮ ತ್ವಚೆಯನ್ನು ಕಾಯುವುದಿಲ್ಲ, ಇದರಿಂದ ದುಡ್ಡು ವೆಚ್ಚವೇ ಹೊರತು ಯಾವುದೇ ಉಪಯೋಗವಿಲ್ಲ.

ಅದಕ್ಕೆ ನಿಮ್ಮ ದುಡ್ಡನ್ನು ಉಳಿಸಿ, ನಿಮ್ಮ ಅಂದವು, ಮೊಗದ ಕಾಂತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಅದು ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಳಕೆ ಮಾಡಿ ನಿಮ್ಮ ಸೌಂದರ್ಯವನ್ನು ಹಾಗೂ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು. ಈ ಕೆಳಗಿನ ಟಿಪ್ಸ್(Beauty Tips) ಗಳು ನೈಸರ್ಗಿಕವಾಗಿ ನಿಮ್ಮನ್ನು ಸುಂದರವಾಗಿ ಕಾಣಲು ಸಹಾಯ ಮಾಡುತ್ತವೆ.

ಈ ಸುದ್ದಿಯನ್ನು ಓದಿ: Health Tips: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಕುಡಿದರೆ ಈ ಎಲ್ಲ ಆರೋಗ್ಯ ಸಮಸ್ಯೆಯಿಂದ ಮುಕ್ತಿ

ಜೇನುತುಪ್ಪ:

ಜೇನುತುಪ್ಪ ಉತ್ತಮ ಮಾಯಿಶ್ಚರೈಸರ್ ಆಗಿದೆ. ಇದು ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ, ಮೊಡವೆ ಮತ್ತು ಗುಳ್ಳೆಗಳನ್ನು ನಿವಾರಿಸುತ್ತದೆ. ಇದನ್ನು ಮುಖಕ್ಕೆ ಬಳಸಿದರೆ, ಕಾಂತಿಯುತ ಚರ್ಮವನ್ನು ಪಡೆಯುತ್ತೀರಿ. ಇದನ್ನು ಮುಖಕ್ಕೆ ಬಳಸುವುದರಿಂದ ನಿಮ್ಮ ಮುಖವು ಸ್ವಚ್ಛವಾಗುತ್ತದೆ. ಇದಕ್ಕಾಗಿ ಜೇನುತುಪ್ಪವನ್ನು ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಟ್ಟು ನಂತರ 10 ನಿಮಿಷ ಮಸಾಜ್ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯಬೇಕು.

ಕಡಲೆ ಹಿಟ್ಟು:
ಚರ್ಮದ ಆರೈಕೆಯಲ್ಲಿ ಮನೆಮದ್ದಿನಲ್ಲಿ ಕಡಲೆ ಹಿಟ್ಟು ಪ್ರಮುಖ ಪಾತ್ರ ವಹಿಸುತ್ತದೆ. ಇದು ನೈಸರ್ಗಿಕ ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕಡಲೆ ಹಿಟ್ಟಿನೊಂದಿಗೆ ಸ್ವಲ್ಪ ಅರಿಶಿನ, ಹಾಲು ಅಥವಾ ನೀರು ಸೇರಿಸಿ ಮುಖಕ್ಕೆ ಪೇಸ್ಟ್ ರೀತಿ ಹಚ್ಚಿ, ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು.

ಅರಿಶಿನ
ದಿನನಿತ್ಯದ ಅಡುಗೆಗೆ ಬಳಸುವ ಅರಿಶಿನ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲಿದ್ದು, ಅನಾದಿ ಕಾಲದಿಂ ದಲೂ ಕೂಡ, ಅರಿಶಿನವನ್ನು ತ್ವಚೆಯ ಸೌಂದರ್ಯ ವೃದ್ಧಿಯಲ್ಲಿ ಬಳಸುತ್ತಾ ಬರಲಾಗುತ್ತಿದೇ.
ಹಾಗಾಗಿ ಎರಡು ಟೀ ಚಮಚ ಆಗುವಷ್ಟು ಅರಿಶಿನಪುಡಿಯನ್ನು ಒಂದು ಸಣ್ಣ ಬೌಲ್‌ಗೆ ಹಾಕಿ, ಇದಕ್ಕೆ ಅರ್ಧ ಟೇಬಲ್ ಚಮಚದಷ್ಟು ಜೇನುತುಪ್ಪ ಹಾಗೂ ಇಷ್ಟೇ ಪ್ರಮಾಣ ದಲ್ಲಿ ಹಾಲನ್ನು ಮಿಶ್ರಣ ಮಾಡಿ, ದಪ್ಪಗೆ ಪೇಸ್ಟ್ ರೀತಿ ತಯಾರು ಮಾಡಿಕೊಳ್ಳಿ. ಆಬಳಿಕ ಮುಖದ ಹಾಗೂ ಕುತ್ತಿಯ ಭಾಗದಲ್ಲಿ ಇದನ್ನು ಅನ್ವಯಿಸಿ ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ಪ್ರತಿದಿನ ಅರಿಶಿನ ಫೇಸ್‌ಪ್ಯಾಕ್ ಅನುಸರಿಸುವುದರಿಂದ, ಮುಖದ ಮೇಲಿನ ಮೊಡವೆಗಳು, ಇದರಿಂದಾಗಿ ಉಂಟಾ ಗುವ ಕಲೆಗಳು ಕ್ರಮೇಣವಾಗಿ ದೂರವಾಗುತ್ತವೆ.
ಅಲ್ಲದೆ ಬೇಸಿಗೆಯಲ್ಲಿ ಕುತ್ತಿಗೆಯ ಭಾಗದಲ್ಲಿ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ್ದರೆ, ಈ ಅರಿಶಿನ ಫೇಸ್ ಪ್ಯಾಕ್‌ ನಿಂದ ಪರಿಹಾರ ಕಂಡುಕೊಳ್ಳಬಹುದು.