Aamir Khan: ಆಮೀರ್ ಖಾನ್ ಮನೆಯಲ್ಲಿ ಪ್ರೇಯಸಿ ಗೌರಿ! ವಿಡಿಯೋ ವೈರಲ್
Aamir Khan’s Girlfriend Gauri Spratt: ಬಾಲಿವುಡ್ ನಟ ಆಮೀರ್ ಖಾನ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ಪ್ರೇಯಸಿ ಗೌರಿ ಅವರನ್ನು ಸಾರ್ವಜನಿಕವಾಗಿ ಎಲ್ಲರಿಗೂ ಪರಿಚಯಿಸಿದರು. ಅದಾದ ಬಳಿಕ ಅವರಿಬ್ಬರು ಅನೇಕ ಕಡೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅಮೀರ್ ಖಾನ್ ಅವರ ಮನೆಯ ಹೊರಗೆ ಗೌರಿ ಅವರು ವಾಹನದಿಂದ ಇಳಿಯುವಾಗ ಪಾಪರಾಜಿಗಳು ಅವರ ಫೋಟೊ ಕ್ಲಿಕ್ಕಿಸಿದ್ದಾರೆ..

-

ನವದೆಹಲಿ: ‘ತಾರೆ ಜಮೀನ್ ಪರ್’, ‘ಪಿಕೆ’ , ‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಲಕ ಖ್ಯಾತಿ ಪಡೆದ ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ಸದಾ ಒಂದಲ್ಲ ಒಂದು ವಿಚಾರ ದಿಂದ ಸುದ್ದಿಯಲ್ಲಿರುತ್ತಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲಿನ ಬಳಿಕ ಅವರಿಗೆ ಸೀತಾರೆ ಜಮೀನ್ ಪರ್ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಅದಾದ ಬಳಿಕ ರಜನೀಕಾಂತ್ ಅಭಿನಯದ ಕೂಲಿ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ಪುಟ್ಟ ಪಾತ್ರ ನೀಡಲಾಗಿದ್ದು ಆ ಪಾತ್ರದ ಬಗ್ಗೆ ಅವರಿಗೆ ಅಸಮಧಾನ ಇತ್ತು ಎಂಬ ಸುದ್ದಿ ಕೂಡ ವೈರಲ್ ಆಗಿತ್ತು. ಅದೇ ರೀತಿ ಬಾಲಿವುಡ್ ನಟ ಆಮೀರ್ ಖಾನ್ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಪ್ರೇಯಸಿ ಗೌರಿ ಅವರನ್ನು ಸಾರ್ವಜನಿಕವಾಗಿ ಎಲ್ಲರಿಗೂ ಪರಿಚಯಿಸಿದರು. ಅದಾದ ಬಳಿಕ ಅವರಿಬ್ಬರು ಅನೇಕ ಕಡೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅಮೀರ್ ಖಾನ್ ಅವರ ಮನೆಯ ಹೊರಗೆ ಗೌರಿ ಅವರು ವಾಹನದಿಂದ ಇಳಿಯುವಾಗ ಪಾಪರಾಜಿಗಳು ಅವರ ಫೋಟೊ ಕ್ಲಿಕ್ಕಿಸಿದ್ದಾರೆ.
ನಟ ಆಮಿರ್ ಖಾನ್ ಅವರು ಸಿನಿಮಾದ ಜೊತೆಗೆ ಆಗಾಗ ಪ್ರವಾಸಕ್ಕೆ ತೆರಳುವುದು ಮತ್ತು ತಮ್ಮ ಮಕ್ಕಳ ಜೊತೆ ಸಮಯ ಕಳೆಯುವುದನ್ನು ಬಹಳ ಇಷ್ಟಪಡುತ್ತಾರೆ. ಅಂತೆಯೇ ಗೌರಿ ಅವರ ಜೊತೆ ಲವ್ ರಿಲೇಶನ್ ಶಿಪ್ ಸಂಬಂಧದ ಬಳಿಕ ಅವರಿಬ್ಬರು ಜೊತೆಯಾಗಿ ಅಲಲ್ಲಿ ಕಾಣಸಿಗುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಬ್ಬರು ಭೇಟಿಯಾಗಿದ್ದು ಗೌರಿ ಅವರು ಕಾರಿನಿದಿಂದ ಕೆಳಗೆ ಇಳಿಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಆಮೀರ್ ಖಾನ್ ಪ್ರೇಯಸಿ ಗೌರಿ ಅವರು ಪಿಂಕ್ ಕುರ್ತಿ ಮತ್ತು ಬ್ಲ್ಯಾಕ್ ಲೆಗ್ಗಿನ್ಸ್ ನಲ್ಲಿ ಸಿಂಪಲ್ಲಾಗಿ ಕಂಡಿದ್ದಾರೆ. ಈ ಮೂಲಕ ಈ ಜೋಡಿಗೆ ನಟ ಆಮಿರ್ ಖಾನ್ ಅಭಿಮಾನಿಗಳು ಹರಸುತ್ತಾ ಮೆಚ್ಚಿಕೊಂಡು ಕಾಮೆಂಟ್ ಹಾಕಿದ್ದಾರೆ. ಗೌರಿ ಆಮಿರ್ ಸರ್ ಗೆ ಶುಭವಾಗಲಿ ಬೇಗ ಮದುವೆ ಆಗಲಿ ಎನ್ನುವಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ಈ ವರ್ಷದ ಮಾರ್ಚ್ ನಲ್ಲಿ ನಟ ಆಮೀರ್ ಖಾನ್ ಅವರು ಗೌರಿ ಸ್ಪ್ರಾಟ್ ಅವರನ್ನು ಎಲ್ಲರ ಎದುರು ಪರಿಚಯಿಸಿದ್ದರು. ಇದೇ ಸಂದರ್ಭದಲ್ಲಿ ಅವರ ಪರಿಚಯ ಇಂದು ನಿನ್ನೆಯದ್ದಲ್ಲ, ಅದಕ್ಕೂ ಬಹಳ ಹಿಂದಿನದು ಎಂದು ಬಹಿರಂಗಪಡಿಸಿದ್ದರು. ಇಬ್ಬರೂ 25 ವರ್ಷಗಳ ಹಿಂದೆ ಭೇಟಿಯಾಗಿದ್ದು, ಆದರೆ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದಿಂದ ಅಂತರ ಕಾಯುವಂತಾಯಿತು ಎಂದು ಹೇಳಿದ್ದರು.
ಇದನ್ನು ಓದಿ:Amir Khan: ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್ ಜೊತೆ ಆಮೀರ್ ಖಾನ್ ರಿಲೇಷನಶಿಪ್; ಯಾರೀಕೆ? ಹಿನ್ನೆಲೆಯೇನು?
ಆಮೀರ್ ಖಾನ್ ಅವರು ರೀನಾ ದತ್ತಾ ಅವರನ್ನು ವಿವಾಹವಾಗಿ ಅವರಿಬ್ಬರು ಒಟ್ಟಿಗೆ 16 ವರ್ಷಗಳ ದಾಂಪತ್ಯ ಜೀವನ ಕಂಡಿದ್ದಾರೆ. ಬಳಿಕ 2002 ರಲ್ಲಿ ಅವರಿಬ್ಬರು ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ ವಿಚ್ಛೇದನ ಪಡೆದು ಬೇರಾಗಿದ್ದಾರೆ. ಇಬ್ಬರಿಗೂ ಇರಾ ಮತ್ತು ಜುನೈದ್ ಎಂಬ ಇಬ್ಬರು ಮಕ್ಕಳು ಕೂಡ ಇದ್ದಾರೆ. ಬಳಿಕ 2005 ರಲ್ಲಿ ನಟ ಆಮಿರ್ ಖಾನ್ ಅವರು ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ವಿವಾಹವಾದರು, ಆದರೆ ಅವರ ನಡುವೆ ಕೂಡ ಸಂಬಂಧ ಸರಿ ಇಲ್ಲದೆ 2021ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಈ ಸಂಬಂಧ ಕೊನೆಗೊಂಡಿತು. ಇದೀಗ ಅವರು ಗೌರಿ ಅವರ ಜೊತೆ ಲವ್ ಇನ್ ಸಂಬಂಧದಲ್ಲಿದ್ದಾರೆ. ನಟ ಆಮಿರ್ ಖಾನ್ ಅವರು ಲಾಲ್ ಸಿಂಗ್ ಚಡ್ಡಾ ಮತ್ತು ಸೀತಾರೆ ಜಮೀನ್ ಪರ್ ಚಿತ್ರಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಅವರು ಮಹಾಭಾರತದ ಹೊಸ ಸಿನಿಮಾ ಪ್ರಾರಂಭಿಸುವ ನಿರೀಕ್ಷೆಯಿದೆ.