Amir Khan: ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್ ಜೊತೆ ಆಮೀರ್ ಖಾನ್ ರಿಲೇಷನಶಿಪ್; ಯಾರೀಕೆ? ಹಿನ್ನೆಲೆಯೇನು?
ಬಾಲಿವುಡ್ ನಟ ಆಮೀರ್ ಖಾನ್ ತಮ್ಮ 60 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ತಮ್ಮ ಹೊಸ ಸಂಗಾತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಗೌರಿ ಮೂಲತಃ ಬೆಂಗಳೂರಿನವರಾಗಿದ್ದು, ಮುಂಬೈನಲ್ಲಿ ಸಲೂನ್ ಹೊಂದಿದ್ದಾರೆ.

ಆಮಿರ್ ಖಾನ್

ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ (Amir Khan) ತಮ್ಮ 60 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ತಮ್ಮ ಹೊಸ ಸಂಗಾತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈಗಾಗಲೇ ಎರಡು ಮದುವೆಯಿಂದ ವಿಚ್ಛೇದನ ಪಡೆದಿರುವ ನಟ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರ ಜೊತೆ ತಾವು ಪ್ರೀತಿಯಲ್ಲಿರುವುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಮುಂಬೈನಲ್ಲಿ ತಮ್ಮ ಹುಟ್ಟುಹಬ್ಬದ ಮುನ್ನಾದಿನ ನಡೆದ ಸಂಭ್ರಮಾಚರಣೆಯಲ್ಲಿ ಮಾಧ್ಯಮಗಳೆದುರು ಮಾತನಾಡಿರುವ ಅವರು, ಗೌರಿ ಸ್ಟ್ರಾಟ್ ಜೊತೆ ತಾವು ಡೇಟಿಂಗ್ ನಡೆಸುತ್ತಿರುವುದಾಗಿ ತಿಳಿಸಿದರು.
ಯಾರು ಈ ಗೌರಿ?
ಗೌರಿ ಅವರು ಮೂಲತಃ ಬೆಂಗಳೂರಿನವರು. ಆಮೀರ್ ಖಾನ್ ಅವರ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಾರೆ. ಗೌರಿಗೆ ಆರು ವರ್ಷದ ಮಗನಿದ್ದಾನೆ ಎಂದು ತಿಳಿದು ಬಂದಿದೆ. ಗೌರಿ ಸ್ಪ್ರಾಟ್ ಅವರು ಆಂಗ್ಲೋ ಇಂಡಿಯನ್. ಇವರ ತಂದೆ ತಮಿಳು-ಬ್ರಿಟಿಷ್, ಇವರ ತಾಯಿ ಪಂಜಾಬಿ ಐರೀಷ್. ಗೌರಿ ತಮ್ಮನ್ನು ತಾವು ಭಾರತೀಯ ನಾರಿ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ. ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು 2004 ರಲ್ಲಿ ಲಂಡನ್‌ನ ಕಲಾ ವಿಶ್ವವಿದ್ಯಾಲಯದಿಂದ ಎಫ್‌ಡಿಎ ಸ್ಟೈಲಿಂಗ್ ಮತ್ತು ಛಾಯಾಗ್ರಹಣ ಎಂಬ ಫ್ಯಾಷನ್ ಕೋರ್ಸ್ ಅನ್ನು ಮಾಡಿದ್ದಾರೆ. ಸದ್ಯ ಅವರು ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ಅನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಮಾಧ್ಯಮಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ಗೌರಿ ಅವರು ಈಗ ಆಮಿರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇವರಿಬ್ಬರು 18 ತಿಂಗಳ ಹಿಂದೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು.
ಗೌರಿ ಬಗ್ಗೆ ಆಮೀರ್ ಖಾನ್ ಹೇಳಿದ್ದೇನು?
ಆಮೀರ್ ಖಾನ್ ಅವರ ಕಸಿನ್ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ಇದೀಗ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ನನ್ನ ಜೀವನದಲ್ಲಿ ಶಾಂತಿ ನೀಡುವ ಹುಡುಗಿಯನ್ನು ನಾನು ಹುಡುಕುತ್ತಿದ್ದೆ. ಕೊನೆಗೂ ಗೌರಿ ಸಿಕ್ಕಿದಳು ಎಂದು ಆಮೀರ್ ಖಾನ್ ಹೇಳಿದ್ದಾರೆ. ನನ್ನ ರಿಲೇಶನ್‌ಶಿಪ್‌ನ್ನು ಮುಚ್ಚಿಡುವ ಅವಶ್ಯಕತೆ ಇಲ್ಲ. ಶಾರುಖ್ ಖಾನ್ ಲೈಫ್‌ನಲ್ಲೂ ಗೌರಿ ಇದ್ದಾರೆ, ನನ್ನ ಲೈಫ್‌ಗೂ ಗೌರಿ ಬಂದಿದ್ದಾರೆ, ನಾನು ನನ್ನ ರಿಲೇಶನ್‌ಶಿಪ್‌ಗೆ ಕಮಿಟ್ ಆಗಿದ್ದೇನೆ ಎಂದು ಆಮೀರ್ ಖಾನ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Aamir Khan: ಮಗನಿಗಾಗಿ ಸ್ಮೋಕಿಂಗ್ ತ್ಯಜಿಸಿದ ಮಾಡಿದ ಆಮಿರ್ ಖಾನ್
ಮೊದಲು ಅವರು ರೀನಾ ದತ್ತ ಅವರನ್ನು ವಿವಾಹ ಆದರು. 1986ರಲ್ಲಿ ಆರಂಭ ಆದ ಈ ಸಂಬಂಧ 2002ರಲ್ಲಿ ಕೊನೆ ಆಯಿತು. ಆ ಬಳಿಕ ಕಿರಣ್ ರಾವ್ ಅವರನ್ನು ವಿವಾಹ ಆದರು. 2005ರಲ್ಲಿ ನಡೆದ ಮದುವೆ 2021ರಲ್ಲಿ ಕೊನೆ ಆಯಿತು.