ನಟ ಆಮಿರ್ ಖಾನ್ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಜುಲೈ 5ರಂದು ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಕುಟುಂಬದ ಆಪ್ತ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಈ ವಿವಾಹವು ಮುಂಬೈನ ಬಾಂದ್ರಾದಲ್ಲಿರುವ ಆಮಿರ್ ಅವರ ನಿವಾಸದಲ್ಲಿ ನಡೆಯಲಿದೆ. ಅಲ್ಲಿಯೇ ವಿವಾಹ ನೋಂದಣಿ ಪ್ರಕ್ರಿಯೆ ಕೂಡ ನಡೆಯಲಿದೆ.
ಈ ಶುಭ ಸಂದರ್ಭದಲ್ಲಿ ಸುಮಾರು 150 ಮಂದಿ ಮಾತ್ರ ಉಪಸ್ಥಿತರಿರಲಿದ್ದಾರೆ ಎಂದು ಹೇಳಲಾಗಿದೆ. ದಂಪತಿಗಳೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ವಿದೇಶದಿಂದಲೂ ಹಲವಾರು ಸಂಬಂಧಿಕರು ಆಗಮಿಸುವ ಸಾಧ್ಯತೆಯಿದೆ. ವಿಶೇಷವೆಂದರೆ, ಆಮಿರ್ ಅವರ ಮೂವರು ಮಕ್ಕಳು ಮತ್ತು ಗೌರಿ ಅವರ ಮಗುವು ಈ ವಿವಾಹದಲ್ಲಿ ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಮಿರ್ ಖಾನ್‌ಗೆ ಇದು ಮೂರನೇ ಮದುವೆಯಾದರೆ, ಗೌರಿಗೆ ಇದು ಎರಡನೇ ಮದುವೆ.
ಯಾರೀ ಗೌರಿ ಸ್ಪ್ರಾಟ್?
ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರಾಗಿದ್ದು, ತಮ್ಮ ಜೀವನದ ಬಹುಪಾಲು ದಿನಗಳನ್ನು ಇಲ್ಲಿಯೇ ಕಳೆದಿದ್ದಾರೆ. ಇವರು ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದ ರೀಟಾ ಸ್ಪ್ರಾಟ್ ಅವರ ಪುತ್ರಿಯಾಗಿದ್ದಾರೆ. ಬ್ಲೂ ಮೌಂಟೇನ್ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಗೌರಿ, 2004 ರಲ್ಲಿ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್ ಲಂಡನ್‌ನಲ್ಲಿ 'ಎಫ್‌ಡಿಎ ಸ್ಟೈಲಿಂಗ್ ಮತ್ತು ಫೋಟೋಗ್ರಫಿ' ಎಂಬ ಫ್ಯಾಷನ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಸದ್ಯ ಅವರು ಮುಂಬೈನಲ್ಲಿ 'ಬಿಬ್ಲಂಟ್' (BBlunt) ಸಲೂನ್ ನಡೆಸುತ್ತಿದ್ದಾರೆ.
ಮದುವೆ ಬಗ್ಗೆ ಮಾಹಿತಿ ನೀಡಿದ ಆಮಿರ್ ಖಾನ್
ಎರಡು ಮದುವೆ ಆಗಿರುವ ಆಮಿರ್ ಖಾನ್
ಆಮಿರ್ ಖಾನ್ 1986ರಲ್ಲಿ ತಮ್ಮ ಬಾಲ್ಯದ ಗೆಳತಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಎಂಬ ಮಗ ಮತ್ತು ಇರಾ ಎಂಬ ಮಗಳಿದ್ದಾರೆ. ಜುನೈದ್ ಈಗಾಗಲೇ ಸಿನಿಮಾರಂಗವನ್ನು ಪ್ರವೇಶಿಸಿದ್ದಾರೆ. ಮಗಳು ಇರಾ ಮಾನಸಿಕ ಆರೋಗ್ಯ ಜಾಗೃತಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. 16 ವರ್ಷಗಳ ದಾಂಪತ್ಯ ಜೀವನ ನಡೆಸಿದ ಆಮಿರ್ ಮತ್ತು ರೀನಾ 2002ರಲ್ಲಿ ವಿಚ್ಛೇದನ ಪಡೆದುಕೊಂಡರು.
Aamir Khan: ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್ ಕೇಸ್; ಸೋನಂ- ರಾಜಾ ಸ್ಟೋರಿ ಮಾಡ್ತಾರಾ ಆಮಿರ್ ಖಾನ್?
16 ವರ್ಷಗಳಿಗೆ ಡಿವೋರ್ಸ್
ಬಳಿಕ 2001ರಲ್ಲಿ 'ಲಗಾನ್' ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ಮೂಲದ ಕಿರಣ್ ರಾವ್ ಅವರ ಪರಿಚಯ ಆಮಿರ್‌ಗೆ ಆಯಿತು. ನಂತರ 2005ರಲ್ಲಿ ಕಿರಣ್ ರಾವ್ ಅವರನ್ನು ಆಮಿರ್ ವಿವಾಹವಾದರು. ಆದರೆ 2021ರಲ್ಲಿ ಅವರಿಗೂ ವಿಚ್ಛೇದನ ನೀಡಿದರು. ಅಂದಹಾಗೆ, ಇವರಿಬ್ಬರು ಬಾಡಿಗೆ ತಾಯ್ತನದ ಮೂಲಕ ಜನಿಸಿದ ತಮ್ಮ ಮಗ ಆಜಾದ್‌ನನ್ನು ಜಂಟಿಯಾಗಿ ಪಾಲನೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಆಮಿರ್ ತಮ್ಮಿಬ್ಬರು ಪತ್ನಿಯರ ಜೊತೆಗೆ ಸರಿಯಾಗ 16 ವರ್ಷ ಸಂಸಾರ ಮಾಡಿ ಡಿವೋರ್ಸ್ ನೀಡಿದ್ದಾರೆ. ಈಗ ಗೌರಿ ಜೊತೆ ಮೂರನೇ ಮದುವೆ ಆಗುತ್ತಿದ್ದಾರೆ. ಅಂದಹಾಗೆ, ಆಮಿರ್ ಖಾನ್‌ಗೆ ಈಗ 61 ವರ್ಷ ವಯಸ್ಸು. ಗೌರಿ ಅವರಿಗೆ ಈಗ 47 ವರ್ಷ ವಯಸ್ಸು.