ʻಏಕ್ ದಿನ್ ಚಿತ್ರಕ್ಕೆ ನಾನು ಸರಿಯಾದ ಆಯ್ಕೆ ಆಯ್ಕೆಯಾಗಿರಲಿಲ್ಲʼ; ಆಮಿರ್ ಖಾನ್ ಮಗನ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಹಿಂಗ್ಯಾಕೆ ಹೇಳಿದ್ರು?
ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ 'ಏಕ್ ದಿನ್' ಸಿನಿಮಾ ಸೋಲಿನ ಬೆನ್ನಲ್ಲೇ ನಾಯಕಿ ಸಾಯಿ ಪಲ್ಲವಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಚಿತ್ರದ ಪಾತ್ರಕ್ಕೆ ತಾವು ಸರಿಯಾದ ಆಯ್ಕೆಯಲ್ಲ ಮತ್ತು ಗ್ಲಾಮರಸ್ ಆದ ಹೊಸ ಮುಖ ಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
-
ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ 'ಏಕ್ ದಿನ್ʼ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಕಳೆದ ತಿಂಗಳ ಈ ಚಿತ್ರದ ಪ್ರಚಾರಕ್ಕಾಗಿ ಮುಂಬೈನಲ್ಲಿ 'ಏಕ್ ದಿನ್ ಕೀ ಮೆಹಫಿಲ್' ಹೆಸರಿನ ಸಂಗೀತ ಸಂಜೆಯನ್ನು ಆಯೋಜಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯನ್ನು ಮಾತಾಡುವಾಗ ಸಾಯಿ ಪಲ್ಲವಿ ಕಷ್ಟಪಟ್ಟಿದ್ದರು. ಅಗ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. 'ರಾಮಾಯಣ: ಪಾರ್ಟ್ 1' ಚಿತ್ರದ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು.
ಆದರೆ ಈಗ ಹೊಸದೊಂದು ಬೆಳವಣಿಗೆ ನಡೆದಿದೆ. ಆಮಿರ್ ಖಾನ್ ನಿರ್ಮಾಣದ 'ಏಕ್ ದಿನ್' ಚಿತ್ರಕ್ಕೆ ತಾವು ಅಯ್ಕೆಯಾಗಿದ್ದು ತಪ್ಪು ಎಂದು ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಹೇಳಕೊಂಡಿದ್ದಾರಂತೆ. ಮೇ 1ರಂದು ತೆರೆಕಂಡಿದ್ದ ಏಕ್ ದಿನ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ. ಇದೀಗ ಈ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಯಿ ಪಲ್ಲವಿ, "ಈ ಚಿತ್ರಕ್ಕೆ ನಾನು ಸರಿಯಾದ ಆಯ್ಕೆ ಅಂತ ನನಗೆ ಅನ್ನಿಸುತ್ತಿಲ್ಲ, ಅದೊಂದು ತಪ್ಪಾದ ಆಯ್ಕೆಯಾಗಿತ್ತು" ಎಂದು ಅಚ್ಚರಿಯ ಹೇಳಿಕೆಯನ್ನು ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.
Sai Pallavi: ಪ್ರಭಾಸ್ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?
ನಾನು ಆ ಪಾತ್ರಕ್ಕೆ ಸರಿಹೊಂದಲಿಲ್ಲ
"ಏಕ್ ದಿನ್ ಸಿನಿಮಾದ ಆ ಪಾತ್ರಕ್ಕೆ ಸ್ವಲ್ಪ ವೈಭವೋಪೇತವಾಗಿ ಕಾಣುವ ಹೊಸ ಹುಡುಗಿ ಬೇಕಿತ್ತು. ನಾನು ಸದಾ ಗಂಭೀರ ಪಾತ್ರಗಳನ್ನು ಮಾಡಿದ್ದೆ, ಹಾಗಾಗಿ ಸ್ವಲ್ಪ ಲೈಟ್ ಆಗಿರುವಂತಹ ಪಾತ್ರವನ್ನು ಮಾಡಬೇಕೆಂದು ಆಸೆ ಪಟ್ಟು ಏಕ್ ದಿನ್ ಸಿನಿಮಾವನ್ನು ಒಪ್ಪಿಕೊಂಡೆ. ಇದು 'ಬಿಫೋರ್ ಸನ್‌ರೈಸ್' ಸಿನಿಮಾದ ಹಾದಿಯಲ್ಲಿ ಇರಲಿದೆ ಎಂದು ನಾನು ಭಾವಿಸಿದ್ದೆ. ಆದರೆ ನಾನು ಆ ಪಾತ್ರಕ್ಕೆ ಸರಿಹೊಂದಲಿಲ್ಲ" ಎಂದು ಸಾಯಿ ಪಲ್ಲವಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಜುನೈದ್ ಖಾನ್ ಜೊತೆಗಿನ ಚರ್ಚೆಯಲ್ಲಿ ಬಂದ ಮಾತಿದು
ಆಮಿರ್ ಖಾನ್ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ನಟ ಜುನೈದ್ ಖಾನ್ ಜೊತೆ ಮಾತನಾಡಿರುವ ಸಾಯಿ ಪಲ್ಲವಿ, ಪ್ರೀಮಿಯರ್ ಪ್ರದರ್ಶನದ ವೇಳೆ ಆಮಿರ್ ಖಾನ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.
Sai Pallavi: ಬಿಕಿನಿ ಲುಕ್ ಟ್ರೋಲ್ ಮಾಡಿದ್ದವರಿಗೆ ನಟಿ ಸಾಯಿ ಪಲ್ಲವಿ ತಿರುಗೇಟು!
"ನಾನು ಈ ಚಿತ್ರಕ್ಕಾಗಿ ಹುಟ್ಟಿದವಳಲ್ಲ ಮತ್ತು ನನ್ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ್ದು ತಪ್ಪು ಎಂದು ನನಗನಿಸುತ್ತದೆ. ಈ ಪಾತ್ರಕ್ಕೆ ಸ್ವಲ್ಪ ಆಕರ್ಷಕವಾಗಿ ಕಾಣುವ ಹೊಸ ಮುಖ ಬೇಕಿತ್ತು ಎಂದು ನಾನು ಭಾವಿಸುತ್ತೇನೆ" ಎಂದು ಸಾಯಿ ಪಲ್ಲವಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಜುನೈದ್ ಖಾನ್ ಮಾತನ್ನು ಒಪ್ಪಿಲ್ಲ. ಸಾಯಿ ಪಲ್ಲವಿಯ ಸಂಶಯಗಳನ್ನು ತಳ್ಳಿ ಹಾಕಿರುವ ಜುನೈದ್, ಈ ಪಾತ್ರಕ್ಕೆ ಸಾಯಿ ಪಲ್ಲವಿ ಅತ್ಯಂತ ಸೂಕ್ತ ಆಯ್ಕೆ ಎಂದು ಹೇಳಿಕೊಂಡಿದ್ದಾರೆ.
ಸಾಯಿ ಪಲ್ಲವಿ ಅವರು ತಮ್ಮ ಮೊದಲ ಹಿಂದಿ ಸಿನಿಮಾವಾದ ʻಏಕ್ ದಿನ್ʼನಲ್ಲಿ ಮೀರಾ ಎಂಬ ಪಾತ್ರವನ್ನು ಮಾಡಿದ್ದು, ಅವರ ಅಭಿನಯಕ್ಕೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಮೀರಾ ಪಾತ್ರಕ್ಕೆ ಸಾಯಿ ಪಲ್ಲವಿ ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.