Actor Ajit: ತಂದೆಗೆ ತಕ್ಕ ಮಗ! ನಟ ಅಜಿತ್ ಪುತ್ರ ಶಾಲಾ ಅಥ್ಲೆಟಿಕ್ಸ್‌ನಲ್ಲಿ ಚಾಂಪಿಯನ್!
ತಮಿಳು ನಟ ಅಜಿತ್ ಇತೀಚೆಗಷ್ಟೇ ಕಾರ್ ರೇಸಿಂಗ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದರು. ಇದೀಗ ಅವರ ಪುತ್ರ ಅದ್ವಿಕ್ ಕೂಡ ಶಾಲೆಯ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ರನ್ನಿಂಗ್ ರೇಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಚೆನ್ನೈ: ತಮಿಳು ಸೂಪರ್ ಸ್ಟಾರ್ ಅಜಿತ್ (Ajith) ಸಿನಿಮಾ ರಂಗದಲ್ಲಿ ಸಾಧನೆ ಮಾಡುವ ಜೊತೆಗೆ ಕಾರು ರೇಸಿಂಗ್‌ನಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಕಾರು ರೇಸಿಂಗ್‌ನಲ್ಲಿ ಚಾಂಪಿಯನ್ ಆಗಿ ಲಹೊರ ಹೊಮ್ಮಿದ್ದಾರೆ. ಇದೇ ಖುಷಿಯಲ್ಲಿರುವ ಅವರಿಗೆ ಇದೀಗ ಡಬಲ್ ಸಂತೋಷ ಸಿಕ್ಕಿದೆ. ಅಜಿತ್ ಅವರ ಪುತ್ರ ಕೂಡ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್ ಪದಕಗಳನ್ನು ಗೆಲ್ಲುವ ಮೂಲಕ ತಂದೆಗೆ ತಕ್ಕ ಮಗ ಎಂದೆನಿಸಿಕೊಂಡಿದ್ದಾರೆ. ಸದ್ಯ ಈ ಸಂಬಂಧಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಟ ಅಜಿತ್ ಅವರ ಪತ್ನಿ ನಟಿ ಶಾಲಿನಿ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಅಪ್ಲೋಡ್ ಮಾಡಿದ್ದಾರೆ. ತಮ್ಮ ಮಗ ಅದ್ವಿಕ್ ಅವರು ಶಾಲೆಯ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ಷಣಗಳು ವಿಡಿಯೊದಲ್ಲಿ ಸೆರೆಯಾಗಿವೆ. ಮಗ ಅದ್ವಿಕ್ ಅವರು ರೇಸ್(ಓಟ)ದಲ್ಲಿ ಭರ್ಜರಿ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದ. ಈ ವಿಡಿಯೊಗೆ ನೆಟ್ಟಿಗರು ಫಿದಾ ಆಗಿದ್ದು ಲೈಕ್ ಕಮೆಂಟ್‌ಗಳನ್ನು ನೀಡಿ ಶುಭ ಹಾರೈಸುತ್ತಿದ್ದಾರೆ.
ನಟಿ ಶಾಲಿನಿ ಅವರು ಅಪ್ಲೋಡ್ ಮಾಡಿದ್ದ ವಿಡಿಯೊದಲ್ಲಿ ಅದ್ವಿಕ್ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವಿನ ನಗೆಬೀರಿದ್ದಾರೆ. ಬಳಿಕ ರಿಲೆ ಓಟದಲ್ಲಿ ಕೂಡ ಛಲ ಬಿಡದೆ ಓಡಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹೀಗೆ ಮೂರು ಪ್ರಥಮ ಪ್ರಶಸ್ತಿ ಪದಕ ಪಡೆದಿದ್ದಾರೆ. ಬಳಿಕ ತಮ್ಮ ತಂಡದ ಜೊತೆಗೆ ಗೆಲುವಿನ ಸಂಭ್ರಮ ಈ ವಿಡಿಯೊದಲ್ಲಿ ಸೆರೆ ಯಾಗಿದೆ. ತಂದೆ ಒಂದು ಕಡೆ ಕಾರ್ ರೇಸ್‌ನಲ್ಲಿ ಮಿಂಚುತ್ತಿರುವಾಗ, ಈಗ ಪುತ್ರ ಕೂಡ ರೇಸ್‌ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗೆದ್ದಿದ್ದಾರೆ. ಈ ವಿಡಿಯೊ ನೋಡಿ ಕೆಲವರು ಜೂನಿಯರ್ ಸೂಪರ್ ಸ್ಟಾರ್ ಎಂದರೆ ಇನ್ನು ಕೆಲವರು ಡಿಸ್ನಿಯ ಹಾಲಿವುಡ್ ಸಿನಿಮಾ ದಿ ಲಯನ್ ಕಿಂಗ್ ನ ಮುಫಾಸಾ ಮತ್ತು ಅವನ ಮಗ ಸಿಂಬಾನಿಗೆ ತಂದೆ ಮಗನನ್ನು ಹೋಲಿಸಿ ಕಮೆಂಟ್ ಮಾಡಿದ್ದಾರೆ
ತಂದೆ ರೇಸಿಂಗ್‌ನಲ್ಲಿ ಗೆದ್ದರೆ ಅವರ ಮಗ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಿದ್ದಾರೆ ಎಂದು ಅಭಿಮಾನಿಗಳು ಅಜಿತ್ ಪುತ್ರನ ಸಾಧನೆಯನ್ನು ಶ್ಲಾಘಿಸಿದ್ದಾರೆ.ಪ್ರಥಮ ಬಹುಮಾನ ಗೆದ್ದಿರುವ ಹಿನ್ನೆಲೆಯಲ್ಲಿ, ತಂದೆ ಯಂತೆಯೇ ಮಗ ಎಂದು ಹೇಳಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿನಂದನೆಗಳು ಚಾಂಪಿಯನ್ ಎಂದು ಕೂಡ ಅನೇಕರು ಕಮೆಂಟ್ ಹಾಕಿದ್ದಾರೆ.
ಇದನ್ನು ಓದಿ: Pilipanja Cinema: ‘ಪಿಲಿ ಪಂಜ’ ಶೂಟಿಂಗ್ ಫಿನಿಶ್– ತೆರೆಗೆ ಯಾವಾಗ ಬರಲಿದೆ ಗೊತ್ತಾ?
ನಟ ಅಜಿತ್ ಅವರಿಗೆ ಕಾರ್ ರೇಸಿಂಗ್‌ನಲ್ಲಿ ಬಹಳಷ್ಟು ಆಸಕ್ತಿ. ಇತ್ತೀಚೆಗಷ್ಟೇ ದುಬೈ 24 ಅವರ್ಸ್ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿ ಮೂರನೇ ಸ್ಥಾನ ಪಡೆದಿದ್ದಾರೆ. ಮಗ ಅದ್ವಿಕ್ ಕೇವಲ 9ನೇ ವಯಸ್ಸಿಗೆ ಕಾರ್ ರೇಸಿಂಗ್‌ನಲ್ಲಿ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಚೈನೈನಲ್ಲಿ ಗೋ ಕಾರ್ಟ್ ಮಕ್ಕಳ ಕಾರ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ತಂದೆ ಮತ್ತು ಮಗನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.