ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhuvann Ponnannaa: ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌ ಪೊನ್ನಣ್ಣ; ಏನದು?

Bhuvann: ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಭುವನ್‌ ಪೊನ್ನಣ್ಣ ತಮ್ಮ ಹುಟ್ಟುಹಬ್ಬದಂದು (ಡಿ.30) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಈಗಾಗಲೇ ತಮ್ಮ ಮದುವೆ ಹಾಗೂ ಮಗಳ ವಿಚಾರದಲ್ಲಿ ಭುವನ್‌ ಸಂಸ್ಕೃತಿ ಸಂಪ್ರದಾಯವನ್ನ ಫಾಲೋ ಮಾಡೋ ನಾಯಕ ನಟ ಅಂತ ಪ್ರೂವ್‌ ಮಾಡಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿದ್ದ ಭುವನ್‌ ಪ್ರತಿ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಒಂದು ಕೆಲಸವನ್ನ ಮಾಡೇ ಮಾಡ್ತಾರಂತೆ. ಏನದು?

ಭುವನ್‌ ಪೊನ್ನಣ್ಣ

ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಭುವನ್‌ ಪೊನ್ನಣ್ಣ (Bhuvan Ponnanna) ತಮ್ಮ ಹುಟ್ಟುಹಬ್ಬದಂದು (Birthday) (ಡಿ.30) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಸಿನಿಮಾ, ರಿಯಾಲಿಟಿ ಶೋ , ನಿರ್ಮಾಣ ಹೀಗೆ ಸಾಕಷ್ಟು ವಿಚಾರದಲ್ಲಿ ಬ್ಯುಸಿ ಆಗಿರೋ ಭುವನ್‌ ಪೊನ್ನಣ್ಣ ಈಗಿನ ಸ್ಟಾರ್‌ ಗಳಿಗಿಂದ ಒಂದಿಷ್ಟು ಡಿಫ್ರೆಂಟ್‌ ಅಂತಾನೆ ಹೇಳಬಹುದು. ಮಾರ್ಡನ್‌ ಆಗಿ ಕಾಣಿಸಿಕೊಳ್ಳೊದ್ರ ಜೊತೆ ಜೊತೆಗೆ ತಮ್ಮ ಸಂಪ್ರದಾಯ ಸಂಸ್ಕೃತಿಯನ್ನ ಮಿಸ್‌ ಮಾಡದೇ ಫಾಲೋ ಮಾಡೋ ನಟ ಭುವನ್‌ ಪೊನ್ನಣ್ಣ ಅಂದ್ರೆ ತಪ್ಪಾಗಲಾರದು.

ತಪ್ಪದೇ ಒಂದು ಕೆಲಸವನ್ನ ಮಾಡೇ ಮಾಡ್ತಾರಂತೆ

ಈಗಾಗಲೇ ತಮ್ಮ ಮದುವೆ ಹಾಗೂ ಮಗಳ ವಿಚಾರದಲ್ಲಿ ಭುವನ್‌ ಸಂಸ್ಕೃತಿ ಸಂಪ್ರದಾಯವನ್ನ ಫಾಲೋ ಮಾಡೋ ನಾಯಕ ನಟ ಅಂತ ಪ್ರೂವ್‌ ಮಾಡಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿದ್ದ ಭುವನ್‌ ಪ್ರತಿ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಒಂದು ಕೆಲಸವನ್ನ ಮಾಡೇ ಮಾಡ್ತಾರಂತೆ.

ಅದುವೇ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡೋದು. ಎಲ್ಲೇ ಇರಲಿ ಹೇಗೆ ಇರಲಿ ತಮ್ಮ ಹುಟ್ಟುಹಬ್ಬದಂದು ಮಾತ್ರ ಮಿಸ್‌ ಮಾಡದೇ ಭುವನ್‌ ಈ ದೇವಿಯ ದರ್ಶನ ಮಾಡೇ ಮಾಡ್ತಾರೆ. ಕಾರಣ ದೇವಿ ಕೊಟ್ಟಿರೋ ಆಶೀರ್ವಾದ ಹಾಗೂ ಐಶ್ವರ್ಯ ಎನ್ನುತ್ತಾರೆ.

ಇದನ್ನೂ ಓದಿ: Imanvi: "ಪಾಕ್‌ ಜೊತೆ ಈಕೆಗೆ ನಂಟು ಸಿನಿಮಾದಿಂದ ಕಿತ್ತೊಗೆಯಿರಿ" ; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ದೇವಸ್ಥಾನಕ್ಕೆ ಭೇಟಿ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡೋದಕ್ಕೆ ಆರಂಭ ಮಾಡಿದ ನಂತರ ಅವವರ ಲೈಫ್‌ ನಲ್ಲಿ ಎಲ್ಲವೂ ಚೆನ್ನಾಗಿ ಆಗಿದ್ಯಂತೆ. ಸಿನಿಮಾ ಅವಕಾಶಗಳು , ಸಿನಿಮಾ ನಿರ್ಮಾಣ ಮಾಡಲು ಆಗಿದ್ದು ಕೂಡ ದೇವಿ ದರ್ಶನದ ನಂತರವೇ ಎಂದಿದ್ದಾರೆ ಭುವನ್‌.



ಮದುವೆ ಆದ ನಂತರ ಕಟೀಲು ದುರ್ಗಾ ಪರಮೇಶ್ವರಿ ಬಳಿ ನನಗೆ ಮಗಳ ಹುಟ್ಟಬೇಕು ಅಂತ ಬೇಡಿಕೊಂಡಿದ್ರಂತೆ ಹಾಗಾಗಿ ಮಗಳನ್ನೂ ಕೂಡ ಮೊದಲು ಕರೆದುಕೂಂಡು ಹೋಗಿದ್ದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ..ಹಾಗಾಗಿ ಭುವನ್‌ ಪೊನಣ್ಣ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಕುಟುಂಬ ಸಮೇತರಾಗಿ ಈ ದೇವಸ್ಥಾನಕ್ಕೆ ಬೇಟಿಕೊಟ್ಟು ದೇವರ ದರ್ಶನ ಪಡೆಯುತ್ತಾರೆ.

ಸಿನಿಮಾ ಕಥೆ ಏನು?

ಅದರಂತೆ ಈ ವರ್ಷವೂ ಫ್ಯಾಮಿಲಿ ಜೊತೆ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ.ಸದ್ಯ ಭುವನ್‌ ಯೋಗರಾಜ್‌ ಭಟ್ಟರ ನಿರ್ದೇಶನದಲ್ಲಿ ಅಭಿನಯ ಮಾಡುತ್ತಿದ್ದು ಅದರ ಜೊತೆಗೆ ಒಂದು ಸಿನಿಮಾವನ್ನ ನಿರ್ಮಾಣ ಮಾಡುವುದಾಗಿ ಅನೌನ್ಸ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸ್ಪಂದನಾ ನೀವು ಅಷ್ಟೊಂದು ವೀಕ್‌ ಇದ್ದೀರಾ? ಅಶ್ವಿನಿ ಟಾಂಗ್‌; ಸ್ಪಂದನಾ- ರಾಶಿಕಾ ಒಬ್ಬರನ್ನೊಬ್ಬರು ಲಾಕ್!

ಸದ್ಯ ಭುವನ್‌ ಪೊನ್ನಣ್ಣ ಯೋಗರಾಜ್‌ ಭಟ್ಟರ ನಿರ್ದೇಶನದಲ್ಲಿ ಅಭಿನಯ ಮಾಡುತ್ತಿದ್ದು, ಅದರ ಜೊತೆಗೆ ಒಂದು ಸಿನಿಮಾವನ್ನ ನಿರ್ಮಾಣ ಮಾಡುವುದಾಗಿ ಅನೌನ್ಸ್‌ ಕೂಡ ಮಾಡಿದ್ದಾರೆ. ಭುವನ್‌ ಪೊನ್ನಣ್ಣ ʻಬಿಗ್‌ ಬಾಸ್ ಕನ್ನಡʼ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು.

Yashaswi Devadiga

View all posts by this author